»   » ಸುವರ್ಣ ವಾಹಿನಿಗೆ 'ದುರ್ಗಾ' ಪ್ರವೇಶ ಆಯ್ತು..!

ಸುವರ್ಣ ವಾಹಿನಿಗೆ 'ದುರ್ಗಾ' ಪ್ರವೇಶ ಆಯ್ತು..!

Posted By:
Subscribe to Filmibeat Kannada

ದುರ್ಗಾ ಬಡ ಕುಟುಂಬದಿಂದ ಬಂದಿರುವ ಹೆಣ್ಣು ಮಗಳು. ಇವಳು ತಾಯಿ ದುರ್ಗೆಯ ಪರಮಭಕ್ತೆ. ದುರ್ಗೆಯ ಕೃಪಕಟಾಕ್ಷದಿಂದ ತನ್ನ ಜೀವನದ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುತ್ತಿರುತ್ತಾಳೆ.

ಇನ್ನೊಂದೆಡೆ ಕೋಟ್ಯಾಧೀಶ್ವರ ರಾವ್ ಬಹದ್ದೂರ್ ಕುಟುಂಬ, ಆ ಮನೆಯ ಒಬ್ಬನೇ ಒಬ್ಬ ಮಗ ನಕುಲ್. ನಕುಲ್ ಮಗುವಿನ ಮನಸ್ಸಿನ ವ್ಯಕ್ತಿ. ದುರ್ಗಾ ಆತನ ಮನೆಯಲ್ಲಿ ಕಾಲಿಡುತ್ತಾಳೆ.[ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಕಾರಂಜಿ']

Suvarna launches new fiction show 'Durga'

ಆ ಮನೆಯಲ್ಲಿ ದಮಯಂತಿ ಎಂಬ ದೊಡ್ಡಮ್ಮ ನಕುಲ್ ಆಸ್ತಿಯನ್ನು ಕಬಳಿಸಲು ತಂತ್ರಗಾರಿಕೆಯನ್ನು ಮಾಡುತ್ತಿರುತ್ತಾಳೆ. ಆದರೆ ದುರ್ಗಾ ಇವರ ಮನೆಯಲ್ಲಿರುವ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುತ್ತಾ ಬರುತ್ತಾಳೆ. ಸಾಮಾನ್ಯ ಹುಡುಗಿ ದುರ್ಗಾ ಶ್ರೀಮಂತರ ಮನೆಯ ಸಮಸ್ಯೆಗಳನ್ನು ತನ್ನ ಭಕ್ತಿಯಿಂದ ಯಾವ ರೀತಿ ಪರಿಹರಿಸುತ್ತಾಳೆ. ಹೀಗೆ ಕಥೆ ಹಲವು ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ.

ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಮನರಂಜನಾ ಸುವರ್ಣ ವಾಹಿನಿಯು 'ದುರ್ಗಾ' ಎಂಬ ಹೊಸ ಧಾರಾವಾಹಿಯನ್ನು ಇದೇ ಡಿಸೆಂಬರ್ 7 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7 ಘಂಟೆಗೆ ಆರಂಭಿಸುತ್ತಿದೆ.[ಸುವರ್ಣ ವಾಹಿನಿಯಲ್ಲಿ 'ನೀವು ಭಲೇ ಕಿಲಾಡಿ' ಹೊಸ ಶೋ..!]

Suvarna launches new fiction show 'Durga'

ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿರುವ ಜಿ.ಕೆ ಸತೀಶ್ ಕೃಷ್ಣನ್ ಅವರು ಈ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ.

'ದುರ್ಗಾ' ಧಾರಾವಾಹಿಯ ನಾಯಕಿಯಾಗಿ ಹೊಸ ಪ್ರತಿಭೆ ಕಲ್ಪಿತಾ ಅಭಿನಯಿಸುತ್ತಿದ್ದು, ಉಳಿದಂತೆ ಕಿರುತೆರೆಯ ಅನುಭವಿ ನಟ-ನಟಿಯರಾದ ಶಂಕರ್, ಅಶ್ವತ್ಥ್, ಅರ್ಚನಾ, ಕೌಶಿಕಿ, ಸುರೇಶ್ ರೈ, ಸೂರ್ಯ ಕಿರಣ್, ಶ್ರೀಕಾಂತ ಹೆಬ್ಳಿಕರ್, ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಹೊಸ ಧಾರಾವಾಹಿಗೆ ನಿರ್ಮಾಪಕ ರಮೇಶ್ ರಾವ್ ಬಂಡವಾಳ ಹೂಡಿದ್ದಾರೆ. ಉಳಿದಂತೆ ಛಾಯಾಗ್ರಾಹಕರಾಗಿ ಧರ್ಮ ಮತ್ತು ಸಂಕಲನಕಾರರಾಗಿ ರಾಜು ಆರ್ಯನ್ 'ದುರ್ಗಾ' ತಂಡಲಿದ್ದಾರೆ.

English summary
The Star Networks Kannada General Entertainment Channel Suvarna announces the launch of its new fiction show “Durga” from December 7 th 2015. Durga will go on air from Monday to Saturday 07:00PM

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada