»   » ಸುವರ್ಣ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು

ಸುವರ್ಣ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು

Posted By:
Subscribe to Filmibeat Kannada

ಸ್ಟಾರ್ ನೆಟ್‍ವರ್ಕ್ ಒಡೆತನದ ಕನ್ನಡ ಮನರಂಜನಾ ವಾಹಿನಿಯಾದ ಸುವರ್ಣ ವಾಹಿನಿಯು ಈಗ 'ಶ್ರೀಮತಿ ಭಾಗ್ಯಲಕ್ಷ್ಮಿ' ಮತ್ತು 'ಖುಷಿ' ಎರಡು ಹೊಸ ಧಾರಾವಾಹಿಗಳನ್ನು ಇದೇ ಜನವರಿ 12 ರಿಂದ ಪ್ರಸಾರ ಪ್ರಾರಂಭಿಸುತ್ತಿದೆ.

ಸ್ತ್ರೀ ತನ್ನ ವ್ಯಕ್ತಿತ್ವವನ್ನು ಜೀವನದ ವಿವಿಧ ಘಟ್ಟಗಳಲ್ಲಿ ಒಂದೊಂದು ರೀತಿಯಲ್ಲಿ ಗುರ್ತಿಸಲ್ಪಡುತ್ತಾ ಯಾರೋ ಒಬ್ಬರಿಗೆ ಮೀಸಲಿಡುತ್ತಾ ಬರುತ್ತಾಳೆ. ಅವಳು ತಾಯಿಯಾಗಿ, ಹೆಂಡತಿಯಾಗಿ ಹಾಗೂ ಮಗಳಾಗಿ ಇತ್ಯಾದಿ ಪಾತ್ರಗಳಲ್ಲಿ ತೋರ್ಪಡುತ್ತಾಳೆ. ಶ್ರೀಮತಿ ಭಾಗ್ಯಲಕ್ಷ್ಮಿ ಧಾರಾವಾಹಿಯು ಹೃದಯ ತುಂಬಿ ಬರುವ ಗೌತಮಿಯ ಕಥೆ.

ಕೆಲವೊಂದು ಸಂದರ್ಭಗಳ ನಿಮಿತ್ತವಾಗಿ ತನ್ನ ಗುರುತನ್ನು ಬದಲಾಯಿಸಿಕೊಳ್ಳಬೇಕಾಗುವ ಇವಳು ಕಳೆದು ಹೋದ ಜಿಜ್ಞಾಸೆಯ ಬದುಕಿನಲ್ಲಿ ಹೇಗೆ ಹೊಸ ಪಾತ್ರಕ್ಕೆ ಹೊಂದಿಕೊಳ್ಳುತ್ತಾಳೆ ಎಂಬುದೇ ಕಥೆಯ ತಾತ್ಪರ್ಯ.

Shrimati Bhagyalakshmi

ಶ್ರೀಮತಿ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು ಸುವರ್ಣ ವಾಹಿನಿಯಲ್ಲಿ ಮೂಡಿಬಂದ ಜನಪ್ರಿಯ 'ಗುರು ರಾಘವೇಂದ್ರ ವೈಭವ' ಧಾರಾವಾಹಿಯನ್ನು ನಿರ್ದೇಶಿಸಿದ ನಿರ್ದೇಶಕ ಆದರ್ಶ ಹೆಗಡೆ ನಿರ್ದೇಶನದಲ್ಲಿ ಮೂಡಿಬರುತ್ತಿರುವುದು ವಿಶೇಷ.ಶ್ರೀಮತಿ ಭಾಗ್ಯಲಕ್ಷ್ಮಿ ಧಾರಾವಾಹಿಯು ಜನವರಿ 12, 2015 ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಇನ್ನು 'ಖುಷಿ' ಧಾರಾವಾಹಿಯು ಅನನ್ಯ ಪ್ರೇಮ ಕಥೆಯಾಗಿದ್ದು ಎರಡು ವಿಭಿನ್ನ ವ್ಯಕ್ತಿಗಳ ಮಧ್ಯೆ ಹೆಣೆಯಲ್ಪಟ್ಟಿದೆ. ಈ ಕಥೆಯು ಮುಖ್ಯವಾಗಿ 2 ಪಾತ್ರಧಾರಿಗಳಾದ ರಜನಿ ಮತ್ತು ವಿಷ್ಣುವರ್ಧನನ ಸುತ್ತ ಸುತ್ತುವರೆಯುತ್ತದೆ. ಮುಖ್ಯ ಪಾತ್ರಧಾರಿ ರಜನಿಯು ತನ್ನ ಅತ್ತೆಯ ಜೀವನದಲ್ಲಿ ಸಾಮರಸ್ಯವನ್ನು ಮೂಡಿಸಲು ಹೇಗೆ ಚಾಲೆಂಜ್ ಗಳನ್ನು ಎದುರಿಸುತ್ತಾಳೆ ಮತ್ತು ತನ್ನ ಗಂಡನಿಗೆ ಆತನ ಅಪ್ಪನ ನಿಜವಾದ ಸ್ವಭಾವವನ್ನು ತಿಳಿದುಕೊಳ್ಳುವಂತೆ ಮಾಡುತ್ತಾಳೆ ಎಂಬುದೇ ಕಥೆಯ ಸಾರಾಂಶ.

Shrimati Bhagyalakshmi2

ಖುಷಿ ಧಾರಾವಾಹಿಯನ್ನು ಪ್ರೀತಮ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಖುಷಿ ಧಾರಾವಾಹಿಯು ಜನವರಿ 12, 2015 ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:30 ಕ್ಕೆ ಪ್ರಸಾರವಾಗಲಿದೆ. ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ನಮ್ಮ ಈ ಎರಡು ಹೊಸ ಧಾರಾವಾಹಿಗಳು ಅನನ್ಯ ಪ್ರೇಮ ಕಥೆಯಾಗಿದ್ದು ಕೌಟುಂಬಿಕ ಕಥಾನಕವನ್ನು ಹೊಂದಿವೆ.

ಈ ಧಾರಾವಾಹಿಗಳ ಥೀಮ್ ಮತ್ತು ಸ್ಕ್ರಿಪ್ಟ್ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇವೆ. ಅದರ ಮೂಲಕ ನಮ್ಮ ವೀಕ್ಷಕರಿಗೆ ಆಸಕ್ತಿ ಹುಟ್ಟಿಸುವಂತಹ ಮತ್ತು ಅವರ ನೋಡಿ ಎಂಜಾಯ್ ಮಾಡಿ ಪ್ರಶಂಸಿಸುವಂತಹ ಧಾರಾವಾಹಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ನಮ್ಮ ಈ ಹೊಸ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನೋರಂಜನೆಯ ಮಹಾಪರ್ವವನ್ನು ಉಣಬಡಿಸುತ್ತೇವೆ ಎನ್ನುತ್ತಾರೆ ಅನುಪ್. (ಫಿಲ್ಮಿಬೀಟ್ ಕನ್ನಡ)

English summary
The Star Network`s Kannada General Entertainment Channel Suvarna announces the launch of their two new fiction shows “Shrimati Bhagyalakshmi ” & “Khushi” from January 12th 2015. Shrimati Bhagyalakshmi will launch on January 12th 2015 from Monday to Saturday 8:00PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada