»   » ಪಾಕಪ್ರವೀಣರಾಗಬೇಕೆ, ತಪ್ಪದೆ ನೋಡಿ 'ಪಾಕಶಾಲೆ'

ಪಾಕಪ್ರವೀಣರಾಗಬೇಕೆ, ತಪ್ಪದೆ ನೋಡಿ 'ಪಾಕಶಾಲೆ'

Posted By:
Subscribe to Filmibeat Kannada

ಅಡುಗೆ ಒಂದು ಕಲೆ, ಜ್ಞಾನ, ವಿಜ್ಞಾನ, ರುಚಿರುಚಿಯಾಗಿ ,ಉಪ್ಪು ಹುಳಿ ಖಾರವನ್ನು ಸಮವಾಗಿ ಬಳಸಿ ಸ್ವಾರಸ್ಯಕರವಾಗಿ ಅಡುಗೆ ಮಾಡಿ ಬಡಸುವುದು ಸುಲಭದ ಮಾತೇನಲ್ಲ. ಈ ಕಲೆಯನ್ನು ಕಲಿಯುವುದು ಅತಿ ಮುಖ್ಯ. ಆದರೆ ಕಲಿಸುವವರು ಸಿಗುವುದು ಅಷ್ಟೇ ವಿರಳ.

ಅಡುಗೆಯ ಆಸಕ್ತಿಯನ್ನು ಹೆಚ್ಚಿಸುವ, ಕಲಿಯಬೇಕೆನ್ನುವ ಉತ್ಸುಕರಿಗೆ ವೇದಿಕೆಯನ್ನು ರೂಪಿಸುವ ಉದ್ದೇಶದಲ್ಲಿ ಹೊಸತನದೊಂದಿಗೆ ಸುವರ್ಣ ವಾಹಿನಿಯು ಪ್ರಾರಂಭಿಸುತ್ತಿರುವ ಪಾಕ ಪ್ರವೀಣರ ಕಾರ್ಯಕ್ರಮ 'ಪಾಕಶಾಲೆ' ಇದೇ ಮೇ.11 ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೂ ಮೂಡಿಬರಲಿದೆ. [ಜೀ ಕನ್ನಡ 'ಒಗ್ಗರಣೆ ಡಬ್ಬಿ' ಘಮಲಿಗೆ 500ರ ಸಂಭ್ರಮ]

Paakashale

ಪಾಕಶಾಲೆಯಲ್ಲಿ ಭಾರತೀಯ ಛೆಪ್ ಗಳು (ಬಾಣಸಿಗರು) ಅಡುಗೆ ಮಾಡಿ ಪಾಕ ಪ್ರವೀಣರಾಗಬೇಕೆನ್ನುವ ಆಸಕ್ತಿಯುಳ್ಳವರಿಗೆ ಪ್ರತಿ ದಿನ ವಿಭಿನ್ನವಾದ ವೈವಿಧ್ಯಮಯವಾದ ಅಡುಗೆಗಳನ್ನು ಮಾಡಿಸುತ್ತಾ ಅಂದರೆ ಬೆಳಗಿನ ಲಘು ಆಹಾರ, ಒಂದಷ್ಟು ಸಿಹಿ, ಸಾಯಂಕಾಲಕ್ಕೆ ಬೇಕಾಗುವ ಕುರುಕುಲು, ಬಾಯಲ್ಲಿ ನೀರೂರಿಸುವ ಅಜ್ಜಿಯ ಅಡುಗೆ ಜೊತೆಗೆ ಹೊಟ್ಟೆ ತುಂಬುವ ಊಟದ ತಯಾರಿಯನ್ನು ಮಾಡುವುದು. ['ಮಹರ್ಷಿ ದರ್ಪಣ' ನಿರೂಪಕರಾಗಿ ಸರ್ ಎಂವಿ ಮರಿಮಗ]

ಒಟ್ಟಿನಲ್ಲಿ ಪದವಿಗಳು ಮುಗಿಯುವುದರಲ್ಲಿ ಅಕ್ಷರಾಭ್ಯಾಸದ ಪಂಟರುಗಳಾಗುವಂತೆ ಪ್ರತಿದಿನದ ಸಂಚಿಕೆಯಲ್ಲೂ ಸಂಪೂರ್ಣ ಅಡುಗೆ ಮಾಡಿ ತೋರಿಸುವ ಹೊಸ ಪ್ರಯತ್ನ ಪಾಕಶಾಲೆಯದು. ಪಾಕಶಾಲೆಗೆ ಇದ್ರೆ ಪ್ರೆಸೆಂಟ್ ನೀವಾಗ್ತೀರ ಹಂಡ್ರೆಡ್ ಪರ್ಸೆಂಟ್ ಎನ್ನುತ್ತಿದೆ ಸುವರ್ಣ ವಾಹಿನಿ.

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಪ್ ಸೀಸನ್ 3 ರ ವಿಜೇತೆ ಗುಂಡಮ್ಮ ಖ್ಯಾತಿಯ ರಾಗಶ್ರೀ ಪಾಕಶಾಲೆಯ ನಿರೂಪಕಿ. ಪಾಕಶಾಲೆ ಕಾರ್ಯಕ್ರಮ ಮೇ 11ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 12:30ಕ್ಕೆ ಹಾಗೂ ಪ್ರತಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
The Star Network's Kannada General Entertainment Channel Suvarna announces the launch of its new cookery show 'Paakashale' from May 11th 2015. The soap will go on air from Monday to Saturday 7 PM. The show teach the audience to cook every kind of veg cuisines using house hold.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada