»   » ಸುವರ್ಣ ವಾಹಿನಿ ಹೊಸ ಧಾರಾವಾಹಿ 'ಮಧುಬಾಲ'

ಸುವರ್ಣ ವಾಹಿನಿ ಹೊಸ ಧಾರಾವಾಹಿ 'ಮಧುಬಾಲ'

Posted By:
Subscribe to Filmibeat Kannada

ಮಧು ಒಬ್ಬ ಮಗ್ಧೆ, ಅಶಿಕ್ಷಿತೆ, ವಿಧೇಯ ಹಾಗೂ ವಿನಯವಂತೆಯಾದ ಹುಡುಗಿ. ಅವಳು ತನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಸಂಬಂಧಿಯೊಂದಿಗೆ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾಳೆ. ಯಾವ ಮಧು? ಇದ್ಯಾವ ಕಥೆ ಅಂತೀರಾ?

ಸ್ಟಾರ್ ನೆಟ್ ವರ್ಕ್ ನ ಕನ್ನಡ ಮನೋರಂಜನಾ ವಾಹಿನಿಯಾದ ಸುವರ್ಣ ವಾಹಿನಿಯು "ಮಧುಬಾಲ" ಎಂಬ ಹೊಸ ಧಾರಾವಾಹಿಯನ್ನು ಇದೇ ಸೆಪ್ಟೆಂಬರ್ 15 ರಂದು ಸಂಜೆ 6:00 ಗಂಟೆಗೆ ಪ್ರಸಾರ ಪ್ರಾರಂಭಿಸುತ್ತಿದೆ.

ಮಧುಬಾಲ ಧಾರಾವಾಹಿಯ ಮುಖ್ಯ ಪಾತ್ರಧಾರಿ ಮಧು ಎಂಬ ಹುಡುಗಿಯ ಸುತ್ತ ಹೆಣೆದಿರುವ ಕಥೆಯಾಗಿದೆ. ಮಧುಬಾಲ ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಕೃಷ್ಣನಗರದಲ್ಲಿ ವಾಸಿಸುತ್ತಿರುವ ಆಧುನಿಕ ಹುಡುಗ, ಇವನು ತನ್ನ ಹಳೆಯ ಸಹೋದ್ಯೋಗಿ ಸೋನಿಯಾ ಜೊತೆ ಲಿವ್-ಇನ್-ರಿಲೇಷನ್ ಶಿಪ್ ಹೊಂದಿರುತ್ತಾನೆ.

ಸ್ವತಂತ್ರ ಮನೋಭಾವದ ಯುವತಿ ಸೋನಿಯಾ

ಸೋನಿಯಾ ಕೂಡಾ ಆಧುನಿಕ ಜಗತ್ತಿಗೆ ಹೊಂದಿಕೊಂಡ, ಸ್ವತಂತ್ರ ಮನೋಭಾವದ ಯುವತಿ. ಇವಳು ತಂದೆ ಇಲ್ಲದೇ ಬೆಳೆದ, ಕೃಷ್ಣನನ್ನು ಪ್ರೀತಿಸಿದರೂ ಮದುವೆಯನ್ನು ವಿರೋಧಿಸುವ ವಾಸ್ತವವಾದಿ ಹುಡುಗಿ. ಈ ಕಥೆ ಮಧು, ಕೃಷ್ಣ ಹಾಗೂ ಸೋನಿಯಾ ಈ ಮೂವರ ಸುತ್ತ ಸಾಗುತ್ತದೆ.

ಹಯವದನ ನಿರ್ದೇಶನ, ನಿರ್ಮಾಣದ ಹೊಣೆ

ಕೃಷ್ಣ ಮತ್ತು ಸೋನಿಯಾರ ಜೀವನದಲ್ಲಿ ಪ್ರವೇಶ ಪಡೆದಿರುವ ಮಧು ಹೇಗೆ ಸಾಗುತ್ತಾಳೆ ಎಂಬುದರ ಸುತ್ತ ಸಾಗುವ ಕಥೆ ಮಧುಬಾಲ. ಕಥೆ ಮತ್ತು ಚಿತ್ರಕಥೆಯಲ್ಲಿ ಈಗಾಗಲೇ ಸಾಕಷ್ಟು ಕೆಲಸ ಮಾಡಿರುವ ನಿರ್ದೇಶಕ ಹಯವದನ ಈ ಮಧುಬಾಲ ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ವಿಭಿನ್ನ ವಿಷಯ ಹೊಂದಿರುವ ಭಿನ್ನವಾದ ಕಥೆ

ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ಇದೊಂದು ವಿಭಿನ್ನ ವಿಷಯ ಹೊಂದಿರುವ ಭಿನ್ನವಾದ ಕಥೆ. ಇದು ನಮ್ಮ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂಬ ಭರವಸೆ ನಮ್ಮದು..."

ಪ್ರೈಂಟೈಮ್ ವೀಕ್ಷಣೆಯನ್ನು ಮತ್ತಷ್ಟು ಬಲಪಡಿಸುತ್ತದೆ

"ಈ ಹೊಸ ಕಾರ್ಯಕ್ರಮವು ಪ್ರೈಂಟೈಮ್ ವೀಕ್ಷಣೆಯನ್ನು ಮತ್ತಷ್ಟು ಬಲಪಡಿಸುತ್ತದೆ. ನಾವು ನಮ್ಮ ವೀಕ್ಷಕರಿಗಾಗಿ ಅತ್ಯುತ್ತಮ ಕಥೆಯನ್ನೇ ನೀಡಲು ಪ್ರಯತ್ನಿಸಿದ್ದೇವೆ, ಈ ಕಥೆ ಮತ್ತು ಚಿತ್ರಕಥೆ ನಮ್ಮ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭಾವನೆ ನನ್ನದು" ಎನ್ನುತ್ತಾರೆ ಅನೂಪ್.

ಜನಪ್ರಿಯ ಕಾರ್ಯಕ್ರಮಗಳ ಸಾಲಿಗೆ ಮತ್ತೊಂದು

'ಮಧುಬಾಲ' ಸುವರ್ಣವಾಹಿನಿಯು ಪ್ರಸಾರ ಮಾಡುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ಅಮೃತವರ್ಷಿಣಿ, ಮಿಲನ, ಅರಗಿಣಿ, ಪಂಚರಂಗಿ ಪೋಂಪೋಂ, ಪರಿಣೀತ ಮತ್ತು ಅವನು ಮತ್ತೆ ಶ್ರಾವಣಿ ಮೊದಲಾದವುಗಳ ಸಾಲಿಗೆ ಈಗ ಹೊಸ ಸೇರ್ಪಡೆಯಾಗುತ್ತಿದೆ. ಸುವರ್ಣವಾಹಿನಿಯು ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ವೈವಿಧ್ಯತೆಯನ್ನು ಸೃಷ್ಟಿಸಿ ಕನ್ನಡ ಕುಟುಂಬಗಳ ಮನೆಮಾತಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

English summary
The Star Networks Kannada General Entertainment Channel Suvarna announces the launch of its new serial "Madhubala" from September 15th 2014. The soap will go on air from Monday to Saturday 6 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada