For Quick Alerts
  ALLOW NOTIFICATIONS  
  For Daily Alerts

  ತೆಲುಗು ಬಿಗ್‌ಬಾಸ್-4 ಆರಂಭ: ಇಲ್ಲಿದೆ ಸ್ಪರ್ಧಿಗಳ ವಿವರ

  |

  ಮನೊರಂಜನಾ ಕ್ಷೇತ್ರದ ಮೇಲೆ ಕೊರೊನಾ ಪರಿಣಾಮ ಬಹಳ ದೊಡ್ಡದು. ಚಿತ್ರಮಂದಿರಗಳು ಬಾಗಿಲು ತೆರೆದು ಆರು ತಿಂಗಳಾದವು. ಕೊರೊನಾದಿಂದ ಹಿನ್ನಡೆ ಅನುಭವಿಸಿದ್ದ ಕಿರುತೆರೆ ಈಗ ನಿಧಾನಕ್ಕೆ ಚಲಿಸಲು ಆರಂಭಿಸಿದೆ.

  ತೆಲುಗಿನಲ್ಲಿ ಬಿಗ್‌ಬಾಸ್‌ನ ಸೀಸನ್‌ ಪ್ರಸಾರ ಇಂದು (ಸೆಪ್ಟೆಂಬರ್ 6) ಆರಂಭವಾಗಿದೆ. ತೆಲುಗು ಬಿಗ್‌ಬಾಸ್‌ನ ನಾಲ್ಕನೇ ಅವತರಣಿಗೆ ಇದಾಗಿದ್ದು, ಈ ಬಾರಿ ನಟ ನಾಗಾರ್ಜುನಾ ಅವರು ಬಿಗ್‌ಬಾಸ್ ನಿರೂಪಕರಾಗಿದ್ದಾರೆ.

  ಸ್ಟಾರ್ ಮಾ ಚಾನೆಲ್‌ನಲ್ಲಿ ಬಿಗ್‌ಬಾಸ್ ಪ್ರಸಾರವಾಗುತ್ತಿದ್ದು, ಸ್ಪರ್ಧಾಳುಗಳು ಒಬ್ಬೊಬ್ಬರಾಗಿ ಬಿಗ್‌ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಮೊದಲ ಸ್ಪರ್ಧಿಯಾಗಿ ನಟಿ ಮೊನಾಲ್ ಗಜ್ಜರ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.

  ನಟಿ ಮೋನಲ್ ಗುಜ್ಜರ್ ಮೊದಲ ಸ್ಪರ್ಧಿ

  ನಟಿ ಮೋನಲ್ ಗುಜ್ಜರ್ ಮೊದಲ ಸ್ಪರ್ಧಿ

  ತೆಲುಗು, ಗುಜರಾತಿ, ಮರಾಠಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಮೊನಾಲ್ ಗಜ್ಜರ್ ಮಾಡೆಲ್ ಸಹ ಆಗಿದ್ದಾರೆ. ತೆಲುಗು ಬಿಗ್‌ಬಾಸ್‌ನ ನಾಲ್ಕನೇ ಸೀಸನ್‌ನ ಮೊದಲ ಸ್ಪರ್ಧಿಯಾಗಿರುವ ಇವರು ಮನೆ ಪ್ರವೇಶಿಸಿದ್ದಾರೆ.

  ಸತ್ಯಂ ಸಿನಿಮಾ ನಿರ್ದೇಶಕ ಸೂರ್ಯ ಕಿರಣ್

  ಸತ್ಯಂ ಸಿನಿಮಾ ನಿರ್ದೇಶಕ ಸೂರ್ಯ ಕಿರಣ್

  ಸತ್ಯಂ ಸಿನಿಮಾದ ನಿರ್ದೇಶಕ ಸೂರ್ಯ ಕಿರಣ್ ಬಿಗ್‌ಬಾಸ್‌ 4 ನ ಎರಡನೇ ಸ್ಪರ್ಧಿ. ಇತರ ಸ್ಪರ್ಧಾಳುಗಳನ್ನು ಅರ್ಥಮಾಡಿಕೊಂಡು ಅವರೊಟ್ಟಿಗೆ ಇರುತ್ತೇನೆ. ಅವರನ್ನು ಬದಲಾಯಿಸುವ ಯತ್ನ ಮಾಡುವುದಿಲ್ಲ ಎಂದು ಬಿಗ್‌ಬಾಸ್‌ ಮನೆ ಪ್ರವೇಶಿಸಿದರು ಸೂರ್ಯ ಕಿರಣ್.

  ಟಿವಿ ನಿರೂಪಕಿ ಲಾಸ್ಯಾ ಮೂರನೇ ಸ್ಪರ್ಧಿ

  ಟಿವಿ ನಿರೂಪಕಿ ಲಾಸ್ಯಾ ಮೂರನೇ ಸ್ಪರ್ಧಿ

  ಟಿವಿ ನಿರೂಪಕಿ ಲಾಸ್ಯಾ ಮೂರನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. 2012 ರಲ್ಲಿ 'ಸಮ್‌ಥಿಂಗ್ ಸ್ಪೆಷಲ್' ಎಂಬ ಕಾರ್ಯಕ್ರಮ ನಿರೂಪಕಿಯಾಗಿದ್ದ ಲಾಸ್ಯಾ, ಟಿವಿ ನಿರೂಪಣೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಬಾಯ್‌ಫ್ರೆಂಡ್ ಮಂಜುನಾಥ್ ಅವರನ್ನು ವಿವಾಹವಾಗಿರುವ ಲಾಸ್ಯಾ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  ಲೈಫ್ ಈಸ್ ಬ್ಯೂಟಿಫುಲ್ ನಟ ಅಭಿಜಿತ್ ಎಂಟ್ರಿ

  ಲೈಫ್ ಈಸ್ ಬ್ಯೂಟಿಫುಲ್ ನಟ ಅಭಿಜಿತ್ ಎಂಟ್ರಿ

  ತೆಲುಗಿನ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದ ನಟ ಅಭಿಜಿತ್ ದುದ್ದಲ ನಾಲ್ಕನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಸಹಾಯಕ ನಿರ್ದೇಶಕರಾಗಿಯೂ ಅಭಿಜಿತ್ ದುದ್ದಲ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಗ್‌ಬಾಸ್ ನಿರೂಪಕ ನಾಗಾರ್ಜುನ ಪುತ್ರ ಅಖಿಲ್‌ ನ ಬಾಲ್ಯ ಸ್ನೇಹಿತ ಅಭಿಜಿತ್ ದುದ್ದಲ.

  ಜೋರ್‌ಧಾರ್ ಸುಜಾತಾ, ಮೆಹಬೂಬ್ ಶೇಖ್, ದೇವಿ ನಾಗವಲ್ಲಿ

  ಜೋರ್‌ಧಾರ್ ಸುಜಾತಾ, ಮೆಹಬೂಬ್ ಶೇಖ್, ದೇವಿ ನಾಗವಲ್ಲಿ

  ತೆಲಂಗಾಣಾ ಭಾಷಾ ಶೈಲಿಯಲ್ಲಿ ಸುದ್ದಿ ಓದುವ ಮೂಲಕ ಜನಪ್ರಿಯತೆ ಗಳಿಸಿದ್ದ ಜೋರ್‌ದಾರ್ ಸುಜಾತಾ ಐದನೇ ಸ್ಪರ್ಧಾಳು. ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಮೆಹಬೂಬ್ ಶೇಖ್ ಆರನೇ ಸ್ಪರ್ಧಾಳು. ಸುದ್ದಿ ವಾಚಕಿ ದೇವಿ ನಾಗವಲ್ಲಿ ಏಳನೇ ಸ್ಪರ್ಧಾಳುವಾಗಿ ಪ್ರವೇಶ.

  ದೇತ್ತಡಿ ಹಾರಿಕಾ, ಸೈಯದ್ ಸೋಹೇಲ್, ಅರಿಯಾನಾ ಗ್ಲೋರಿ

  ದೇತ್ತಡಿ ಹಾರಿಕಾ, ಸೈಯದ್ ಸೋಹೇಲ್, ಅರಿಯಾನಾ ಗ್ಲೋರಿ

  ಯೂಟ್ಯೂಬರ್ ದೇತ್ತಡಿ ಹಾರಿಕಾ ಎಂಟನೇ ಸ್ಪರ್ಧಾಳುವಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಟಿವಿ ನಟ ಸೈಯದ್ ಸೊಹೇಲ್ ರ್ಯಾನ್ ಒಂಬತ್ತನೇ ಸ್ಪರ್ಧಾಳು. ಟಿವಿ ನಿರೂಪಕಿ ಅರಿಯಾನಾ ಗ್ಲೋರಿ ಹತ್ತನೇ ಸ್ಪರ್ಧಾಳು. ಅರಿಯಾನಾ ಮತ್ತು ಸೋಹೇಲ್ ಅನ್ನು ಆರಂಭದಲ್ಲಿಯೇ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆ.

  ಅಮ್ಮಾ ರಾಜಶೇಖರ್, ಕರಾಟೆ ಕಲ್ಯಾಣಿ, ನಿಯೋಲ್ ಸೀನ್

  ಅಮ್ಮಾ ರಾಜಶೇಖರ್, ಕರಾಟೆ ಕಲ್ಯಾಣಿ, ನಿಯೋಲ್ ಸೀನ್

  ನೃತ್ಯ ನಿರ್ದೇಶಕ, ರಿಯಾಲಿಟಿ ಶೋ ಜಡ್ಜ್ ಅಮ್ಮಾ ರಾಜಶೇಖರ್ ಹನ್ನೊಂದನೇ ಸ್ಪರ್ಧಾಳುವಾಗಿ ಬಿಗ್‌ಬಾಸ್ ಪ್ರವೇಶ. ಹಾಸ್ಯ ನಟಿ ಕರಾಟೆ ಕಲ್ಯಾಣಿ ಹನ್ನೆರಡನೇ ಸ್ಪರ್ಧಾಳುವಾಗಿ ಬಿಗ್‌ಬಾಸ್ ಮನೆ ಪ್ರವೇಶ. ಗಾಯಕ, ನಟ, ಆರ್‌ಜೆ, ವಿಜೆ, ಸಂಗೀತ ನಿರ್ದೇಶಕ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ನಿಯೋಲ್ ಸೀನ್ ಹದಿಮೂರನೇ ಸ್ಪರ್ಧಾಳು.

  ದಿವ್ಯಾ, ಅಖಿಲ್ ಸಾರ್ತಕ್, ಗಂಗವ್ವ

  ದಿವ್ಯಾ, ಅಖಿಲ್ ಸಾರ್ತಕ್, ಗಂಗವ್ವ

  ಹದಿನಾಲ್ಕನೇ ಸ್ಪರ್ಧಾಳುವಾಗಿ ನಟಿ ದಿವ್ಯಾ ವಡತಾಯ ಬಿಗ್‌ಬಾಸ್ ಪ್ರವೇಶಿಸಿದ್ದಾರೆ. ಹದಿನೈದನೇ ಸ್ಪರ್ಧಾಳುವಾಗಿ ಯೂಟ್ಯೂಬರ್ ಅಖಿಲ್ ಸಾರ್ತಕ್ ಪ್ರವೇಶಿಸಿದ್ದಾರೆ. ಹದಿನಾರನೇ ಸ್ಪರ್ಧಾಳುವಾಗಿ ಶ್ರೀಸಾಮಾನ್ಯೆ ಗಂಗವ್ವ ಸ್ಪರ್ಧಾಳುವಾಗಿ ಬಿಗ್‌ಬಾಸ್ ಪ್ರವೇಶಿಸಿದ್ದಾರೆ.

  English summary
  Telugu Bigg Boss season 4 started telecasting. Here is the contestants list and information about them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X