For Quick Alerts
  ALLOW NOTIFICATIONS  
  For Daily Alerts

  ನೃತ್ಯಗಾತಿಯಾಗಿದ್ದ ತೀರ್ಥಹಳ್ಳಿಯ ಯಶಸ್ವಿನಿ ನಟಿಯಾಗಿದ್ದು ಹೇಗೆ?

  By ಪೂರ್ವ
  |

  ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಮಲೆನಾಡ ಬೆಡಗಿ ಯಶಸ್ವಿನಿಯ ಅಭಿನಯಕ್ಕೆ ಮನಸೋಲದವರಿಲ್ಲ. ಶಿವಮೊಗ್ಗದ ತೀರ್ಥಹಳ್ಳಿಯ ಯಶಸ್ವಿನಿ ರವೀಂದ್ರ ಇಂದು ರಚನಾ ಆಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ. ತಂಗಿ ಎಂದರೇ ರಚನಾ ಥರ ಇರಬೇಕು, ಫ್ರೆಂಡ್ ಎಂದರೆ ರಚನಾ ಥರ ಇರಬೇಕು ಎಂದು ಅಂದುಕೊಳ್ಳುವವರಿಗೇನೂ ಕಡಿಮೆ ಇಲ್ಲ.

  ರಚನಾ ಆಲಿಯಾಸ್ ಯಶಸ್ವಿನಿ ಬಗ್ಗೆ ಪೀಠಿಕೆ ಅಗತ್ಯವಿಲ್ಲ. ಕಿರುತೆರೆ ವೀಕ್ಷಕರಿಗೆಲ್ಲಾ ಆಕೆ, ಆಕೆಯ ಅಭಿನಯ ಚಿರಪರಿಚಿತ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ನಾಯಕ ರಿಷಿಯ ತಂಗಿ ರಚನಾ ಪಾತ್ರಕ್ಕೆ ಜೀವ ತುಂಬುತ್ತಿರುವ ಯಶಸ್ವಿನಿ ಬಿಕಾಂ ಪದವೀಧರೆ.

  ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಯಶಸ್ವಿನಿ ಮುಂದೆ ಕೆಲಸ ಅರಸಿಕೊಂಡು ಮಹಾನಗರಿ ಬೆಂಗಳೂರಿಗೆ ಕಾಲಿಟ್ಟರು. ಬೆಂಗಳೂರಿನಲ್ಲಿ ಬಂದ ಯಶಸ್ವಿನಿ ಸ್ಟೂಡೆಂಟ್ ಅಡ್ವೈಸರ್ ಆಗಿ ಕೆಲಸ ಮಾಡಿದರು. ಕೆಲಸ ಮಾಡುವ ಸಂದರ್ಭದಲ್ಲಿ ನೃತ್ಯದತ್ತ ಒಲವು ಮೂಡಿದ್ದ ಕಾರಣ ನೃತ್ಯ ಕಲಿಯುವ ಆಲೋಚನೆ ಮಾಡಿದರು. ರಂಜಿತಾ ಅವರ ಬಳಿ ಕಥಕ್ ನೃತ್ಯ ಕಲಿತರು. ನೃತ್ಯ ಕಲಿಯುತ್ತಿರುವಾಗಲೇ ನಟನೆಯತ್ತಲೂ ಆಸಕ್ತಿ ಮೂಡಿತು.

  ಮುಂದೆ ಆಡಿಶನ್ ಗಳಲ್ಲಿ ಭಾಗವಹಿಸಿದ ಯಶಸ್ವಿನಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಿ.ಶೇಷಾದ್ರಿ ನಿರ್ದೇಶನದ ಸಾಕ್ಷಿ ಧಾರಾವಾಹಿಗೆ ಸೆಲೆಕ್ಟ್ ಆದರು. ಆದರೆ ಅವರು ಬಾಣಂತಿ ಪಾತ್ರಕ್ಕೆ ಆಯ್ಕೆ ಆಗಿದ್ದರು. ಸಣ್ಣ ಪ್ರಾಯದ ಹುಡುಗಿಗೆ ಬಾಣಂತಿ ಪಾತ್ರ ಮಾಡುವುದು ಹೇಗೆಂದು ಗೊಂದಲದಲ್ಲಿದ್ದ ಯಶಸ್ವಿನಿ ಇದ್ದಾಗ, ಆ ಪಾತ್ರ ಬೇಡ ನಿರ್ದೇಶಕರೇ ಅಂದುಬಿಟ್ಟರು. ನಂತರ ನಾಯಕನ ಅತ್ತೆ ಮಗಳ ಪಾತ್ರಕ್ಕೆ ಅವರು ಆಯ್ಕೆ ಆದರು. ದಿಶಾ ಹೆಸರಿನ ಬಬ್ಲಿ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ ಯಶಸ್ವಿನಿ ವೀಕ್ಷಕರ ಮನ ಸೆಳೆದು ಬಿಟ್ಟರು.

  Theerthahalli Girl Yasaswini Serial Journey

  ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಯಶಸ್ವಿನಿ ನಿರೂಪಣೆಯಲ್ಲೂ ಎತ್ತಿದ ಕೈ. ನಿರೂಪಣೆಯ ಜೊತೆಗೆ ಕಂಠದಾನಕ್ಕೂ ಈಕೆ ಸೈ. ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಯಶಸ್ವಿನಿ ನಂತರ 'ಮನೆ ದೇವರು' ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಮಿಂಚಿದರು. ಚಾಲೆಂಜಿಂಗ್ ಆಗಿರುವ ಆ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿ ಮುಂದೆ ತಮಿಳಿನ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದರು

  'ಕಾಲವೇ ಮೋಸಗಾರ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಯಶಸ್ವಿನಿ ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ರಚನಾ ಪಾತ್ರಧಾರಿಯಾಗಿ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಮಲೆನಾಡ ಕುವರಿ ಇನ್ನು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ಇಂದು ನಾನು ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದೇ ಎಂದರೆ ಅದಕ್ಕೆ ಮನೆಯವರ ಪ್ರೋತ್ಸಾಹವೇ ಕಾರಣ

  English summary
  Here is life journey of actress Yashaswini who is in dancing star reality show also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X