»   » 'ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ' ಎಂದು ಕಡ್ಡಿ ತುಂಡು ಮಾಡಿದ ಹಾಗೆ ನುಡಿದ ಐಂದ್ರಿತಾ.!

'ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ' ಎಂದು ಕಡ್ಡಿ ತುಂಡು ಮಾಡಿದ ಹಾಗೆ ನುಡಿದ ಐಂದ್ರಿತಾ.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಲವು ಬಾರಿ 'ಒಗ್ಗಟ್ಟಿನ ಮಂತ್ರ' ಜಪಿಸಿದರೂ, ಸ್ಯಾಂಡಲ್ ವುಡ್ ನಲ್ಲಿ ಒಗ್ಗಟ್ಟಿಲ್ಲ ಅನ್ನೋದು ಒಂಥರಾ ಒಪನ್ ಸೀಕ್ರೆಟ್ ಇದ್ದ ಹಾಗೆ.

''ನಮ್ಮ ಇಂಡಸ್ಟ್ರಿಯಲ್ಲಿ ಒಗ್ಗಟ್ಟಿಲ್ಲ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಬರಲ್ಲ. ಅಣ್ಣಾವ್ರು ಇದ್ದಾಗ ಹೀಗಿರಲಿಲ್ಲ'' ಅಂತ ಆಗಾಗ ಯಾರಾದರೂ ಒಬ್ಬರು ದನಿ ಎತ್ತುತ್ತಲೇ ಇರುತ್ತಾರೆ.

ಈ ಬಾರಿ ''ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದವರು ನಟಿ ಐಂದ್ರಿತಾ ರೇ.! ಮುಂದೆ ಓದಿರಿ...

ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಐಂದ್ರಿತಾ ಭಾಗಿ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಐಂದ್ರಿತಾ ರೇ ಪಾಲ್ಗೊಂಡಿದ್ದರು. ಆಗ ಕನ್ನಡ ಚಿತ್ರರಂಗದ ಬಗ್ಗೆ ಕೆಲ ಮಾತುಗಳನ್ನಾಡಿದರು ನಟಿ ಐಂದ್ರಿತಾ ರೇ.

ನಟಿ ಐಂದ್ರಿತಾ ರೇ ಏನಂದರು.?

''I believe in equality (ನನಗೆ ಸಮಾನತೆಯಲ್ಲಿ ನಂಬಿಕೆ ಇದೆ). ಈಗಿನ ಕಾಲದಲ್ಲಿ ಎಲ್ಲರೂ ತಮ್ಮ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸಮಾನತೆಗಾಗಿ ಹೋರಾಟ ನಡೆಯುತ್ತಿದೆ. ಹೀಗಾರುವಾಗ, ನಮ್ಮ ಕನ್ನಡ ಚಿತ್ರರಂಗದಲ್ಲಿ ಸಮಾನತೆ ಯಾಕೆ ಇರಬಾರದು.?'' ಎಂದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಐಂದ್ರಿತಾ ರೇ ಪ್ರಶ್ನಿಸಿದರು.

ಯಾರೂ ಸಪೋರ್ಟ್ ಮಾಡಲಿಲ್ಲ

''ನನಗೆ ಯಾರೂ ಸಪೋರ್ಟ್ ಮಾಡಲಿಲ್ಲ. ನನಗೆ ನಿರ್ಮಾಪಕರ ಕಡೆಯಿಂದಲೂ ಸಪೋರ್ಟ್ ಸಿಗಲಿಲ್ಲ. ಹೀರೋ ಕಡೆಯಿಂದಲೂ ಸಪೋರ್ಟ್ ಸಿಗಲಿಲ್ಲ. ವಿಪರ್ಯಾಸ ಅಂದ್ರೆ, ಯಾವ ನಾಯಕಿ ಕೂಡ ನನಗೆ ಸಪೋರ್ಟ್ ಮಾಡಲಿಲ್ಲ'' - ಐಂದ್ರಿತಾ ರೇ, ನಟಿ

ನಟಿ ಐಂದ್ರಿತಾ ರೇಗೆ ಸ್ವಲ್ಪವೂ ನಾಚಿಕೆ ಇಲ್ಲ.!

ಯಾವ ಹೀರೋಯಿನ್ ಕೂಡ ಸಾಥ್ ಕೊಡಲಿಲ್ಲ!

''ಸಂಭಾವನೆ ವಿಚಾರದಲ್ಲಿ ತಾರತಮ್ಯ ಇಲ್ಲ ಅಂದ್ರೆ ಎಲ್ಲ ನಾಯಕಿಯರಿಗೂ ಉಪಯೋಗ ಆಗುತ್ತೆ. ಆದರೆ ಯಾವ ಹೀರೋಯಿನ್ ಕೂಡ ನನಗೆ ಸಾಥ್ ಕೊಡಲಿಲ್ಲ. ಏಕಾಂಗಿಯಾಗಿ ಹೋರಾಡಿದೆ'' - ಐಂದ್ರಿತಾ ರೇ, ನಟಿ

ಈ ತಾರತಮ್ಯ ಯಾಕೆ.?

''ಹೀರೋಗಿಂತ ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್ ನಮ್ಮ ಇಂಡಸ್ಟ್ರಿಯಲ್ಲಿ ಒಬ್ಬರೂ ಇಲ್ಲ. ಈ ತಾರತಮ್ಯ ಯಾಕೆ.? ಹೀರೋಗೆ ಒಂದು ಕೋಟಿ ಕೊಟ್ಟರೆ, ಹೀರೋಯಿನ್ ಗೆ ಐದು ಲಕ್ಷ ಕೊಡ್ತಾರೆ. ಸಂಭಾವನೆಯಲ್ಲಿ ಇಷ್ಟೊಂದು ವ್ಯತ್ಯಾಸ ಇರಬಾರದು ಎಂದು ದನಿ ಎತ್ತಿದ್ದೆ'' - ಐಂದ್ರಿತಾ ರೇ, ನಟಿ

'ಸೂಪರ್ ಟಾಕ್ ಟೈಮ್' ಮೊದಲ ಸಂಚಿಕೆಗೆ ಐಂದ್ರಿತಾ ಬರ್ಲಿಲ್ಲ.! ಯಾಕೆ.?

ಒಗ್ಗಟ್ಟಿಲ್ಲ

''ನಮ್ಮ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ. ಯಾವುದೇ ಸನ್ನಿವೇಶ ಆದಾಗ ಯಾರೂ ಒಗ್ಗಟ್ಟಾಗಲ್ಲ'' - ಐಂದ್ರಿತಾ ರೇ, ನಟಿ

ಐಂದ್ರಿತಾ ರೇ ಜೊತೆ 'ಮಿಸ್ಸಿಂಗ್' ಆದ ದೂದ್ ಪೇಡ ದಿಗಂತ್

English summary
''There is no unity in Kannada Film Industry'' says Kannada Actress Aindrita Ray in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada