»   » 'ಹರಹರ ಮಹಾದೇವ'ನ ಪಾರ್ವತಿಗೆ ನೋಟೀಸ್

'ಹರಹರ ಮಹಾದೇವ'ನ ಪಾರ್ವತಿಗೆ ನೋಟೀಸ್

Posted By:
Subscribe to Filmibeat Kannada

ಕೆಲ ಧಾರಾವಾಹಿಗಳು ಆರಂಭದಲ್ಲಿ ಸುದ್ದಿ ಮಾಡಿ ಕೊನೆಯಲ್ಲಿ ಪ್ರೇಕ್ಷಕರ ಮನಸ್ಸಿಗೆ ಸಂತೋಷ ಕೊಡುವ ಮೂಲಕ ಮುಗಿದು ಹೋಗುತ್ತವೆ. ಇನ್ನು ಕೆಲವು ಪ್ರಾರಂಭದಲ್ಲಿ ಜೋರಾಗಿ ಸೌಂಡ್ ಮಾಡಿ ಆನಂತರ ಸದ್ದೇ ಇಲ್ಲದಂತೆ ಆಗುತ್ತವೆ.

ಆದರೆ ಈಗ ನಾವು ಹೇಳ ಹೊರಟಿರುವ ಧಾರಾವಾಹಿ ಪ್ರಾರಂಭಕ್ಕೂ ಮುಂಚಿನಿಂದಲೂ ಸುದ್ದಿ ಮಾಡಿ ಇನ್ನೇನು ಸೀರಿಯಲ್ ಮುಗಿಯಿತು ಅನ್ನುವಾಗ ವಿವಾದದಿಂದ ಎಲ್ಲೆಡೆ ನ್ಯೂಸ್ ಆಗಿರುವುದರ ಬಗ್ಗೆ. ಸ್ಟಾರ್ ಸುವರ್ಣ ವಾಹಿನಿಯ 'ಹರಹರ ಮಹಾದೇವ' ಧಾರಾವಾಹಿ ಸೆಟ್ ನಿಂದ ಮತ್ತೊಂದು ವಿಚಾರ ಹೊರಬಿದ್ದಿದೆ.

'ಹರಹರ ಮಹಾದೇವ' ಧಾರಾವಾಹಿಯ ಪಾತ್ರಧಾರಿ ನಟಿ ಪ್ರಿಯಾಂಕ ಅವರಿಗೆ ಟ್ರೈ ಆಂಗಲ್ ಫಿಲ್ಮ್ ಕಂಪನಿಯಿಂದ ನೋಟೀಸ್ ನೀಡಲಾಗಿದೆ. ಧಾರಾವಾಹಿಯೇ ಮುಗಿಯೋ ಹಂತಕ್ಕೆ ಬಂದ ಮೇಲೆ ನೋಟೀಸ್ ಯಾಕೆ ನೀಡಿದರು ಅಂತೀರಾ? ಮುಂದೆ ಓದಿ

ಶಿವನ ಜೀವನ ಚರಿತ್ರೆ ಹರಹರ ಮಹಾದೇವ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ಹರಹರ ಮಹಾದೇವ ಧಾರಾವಾಹಿ ಆರಂಭದಿಂದಲೂ ಪ್ರೇಕ್ಷಕರ ಮನಸ್ಸನ್ನ ಗೆದ್ದ ಸೀರಿಯಲ್. ಪಾತ್ರಧಾರಿಗಳು ಹಾಗೂ ಅದ್ದೂರಿ ಸೆಟ್ ನಿಂದಲೇ ಫೇಮಸ್ ಆಗಿತ್ತು ಈ ಧಾರಾವಾಹಿ.

ಏನಿದು ವಿವಾದ.?

ಶಿವನ ಪತ್ನಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಪ್ರಿಯಾಂಕ ಅವರಿಗೆ ಇದೀಗ ಟ್ರೈ ಆಂಗಲ್ ಫಿಲ್ಮ್ ಕಂಪನಿ ಅವರಿಂದ ನೋಟೀಸ್ ಕಳುಹಿಸಲಾಗಿದೆ.

ಪ್ರಿಯಾಂಕಗೆ ನೋಟೀಸ್

ಅಂಗ್ರಿಮೆಂಟ್ ನಲ್ಲಿ ಒಪ್ಪಿರುವಂತೆ ನಡೆದುಕೊಂಡಿಲ್ಲ ಎಂದು 'ಟ್ರೈ ಆಂಗಲ್ ಫಿಲ್ಮ್ ಕಂಪನಿ'ಯಿಂದ ಪ್ರಿಯಾಂಕ ಅವರಿಗೆ ನೋಟೀಸ್ ನೀಡಲಾಗಿದೆ. ನೋಟೀಸ್ ನಲ್ಲಿ ಪ್ರಿಯಾಂಕ ಮಾಡಿರುವ ತಪ್ಪುಗಳನ್ನ ನಮೂದಿಸಲಾಗಿದೆ.

ಪ್ರಿಯಾಂಕಾ ಏನಂತಾರೆ.?

''ನಾನು ಕಾಂಟ್ರ್ಯಾಕ್ಟ್ ಗಿಂತ ಹೆಚ್ಚು ದಿನವೇ ಕೆಲಸ ಮಾಡಿದ್ದೇನೆ. ಆದರೆ ಅವರು ಇನ್ನೂ ಮೂರು ತಿಂಗಳು ಮುಂದುವರೆಸುವಂತೆ ಕೇಳಿದ್ದರು. ಆದರೆ ನಾನು ನನ್ನ ಬೇರೆ ಸಿನಿಮಾದಲ್ಲಿ ಬಿಜಿ ಇದ್ದ ಕಾರಣ ಅದನ್ನು ನಿರಾಕರಿಸಿದೆ. ಆಗ ಅವರು ಕಂಪನಿ ಕಡೆಯಿಂದ ನೋಟೀಸ್ ಕಳುಹಿಸಿದ್ದಾರೆ'' ಅಂತ ಪ್ರಿಯಾಂಕಾ 'ಫಿಲ್ಮಿಬೀಟ್ ಕನ್ನಡ'ಕ್ಕೆ ತಿಳಿಸಿದ್ದಾರೆ.

English summary
Triangle Film Company issued noticed to 'Hara Hara Mahadeva' serial Actress 'Priyanka Chincholi'. Priyanka was acting in the role of Parvathi in Hara Hara Mahadeva serial. ನಟಿ ಪ್ರಿಯಾಂಕ ಚಿಂಚೊಳ್ಳಿ ಅವರಿಗೆ ಲೀಗಲ್ ನೋಟೀಸ್ ನೀಡಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X