»   » ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಾದಮಯ ಪ್ರೇಮಕಥೆ 'ತ್ರಿವೇಣಿ ಸಂಗಮ'

ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಾದಮಯ ಪ್ರೇಮಕಥೆ 'ತ್ರಿವೇಣಿ ಸಂಗಮ'

Posted By:
Subscribe to Filmibeat Kannada

ಈಗಾಗಲೇ ಒಂದರ ಮೇಲೊಂದು ಯಶಸ್ವಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವ 'ಸ್ಟಾರ್ ಸುವರ್ಣ' ಈಗ ವಿಭಿನ್ನವಾದ, ವಿಶಿಷ್ಟವಾದ ಧಾರಾವಾಹಿಯನ್ನು ವೀಕ್ಷಕರ ಕಣ್ಮುಂದೆ ತರಲು ಸಜ್ಜಾಗಿದೆ.

ಸಂಗೀತವನ್ನೇ ಮುಖ್ಯ ಕಥಾವಸ್ತುವನ್ನಾಗಿರಿಸಿಕೊಂಡು ಹೆಣೆದ ಸುಂದರ ಪ್ರೇಮಕಥೆ 'ತ್ರಿವೇಣಿ ಸಂಗಮ'. ಇಂಪಾದ ಸಂಗೀತ ಮತ್ತು ನವಿರಾದ ಪ್ರೇಮಕಥೆಯ 'ತ್ರಿವೇಣಿ ಸಂಗಮ' ಕನ್ನಡ ಧಾರಾವಾಹಿಗಳ ಸಾಲಿನಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ ಎಂಬುದು ಸ್ಟಾರ್ ಸುವರ್ಣ ವಾಹಿನಿಯ ಆಶಯ.

ಅನು ಪ್ರಭಾಕರ್ - ರಾಜೇಶ್ ನಟರಂಗ ಜೋಡಿ

'ತ್ರಿವೇಣಿ ಸಂಗಮ' ಧಾರಾವಾಹಿಯಲ್ಲಿ ಕನ್ನಡದ ಜನಪ್ರಿಯ ನಟಿ ಅನು ಪ್ರಭಾಕರ್ ಮುಖರ್ಜಿ ಮತ್ತು ನಟ ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿದ್ದಾರೆ.['ಅಮೃತವರ್ಷಿಣಿ' ಮತ್ತು 'ಅವನು ಮತ್ತೆ ಶ್ರಾವಣಿ' ಮಹಾಸಂಚಿಕೆ]

ತ್ರಿವಿಕ್ರಮ-ವಾಣಿ ಸಂಗಮ.!

ಈ ಧಾರಾವಾಹಿಯಲ್ಲಿ ಅವನು ಸಮಾಧಾನಿ, ಇವಳು ಮುಂಗೋಪಿ. ಅವನು ಅಪ್ಪಟ ಸಸ್ಯಹಾರಿ. ಇವಳಿಗೆ ಮೀನು ಇಲ್ಲದೇ ಊಟವೇ ಇಲ್ಲ. ಹೀಗೆ ತಾಳ ಮೇಳ ಇಲ್ಲದ ನಾಯಕ ತ್ರಿವಿಕ್ರಮ ಮತ್ತು ನಾಯಕಿ ವಾಣಿಯನ್ನು ಸಂಗೀತ ಬೆಸೆಯುವ ಕಥೆಯೇ 'ತ್ರಿವೇಣಿ ಸಂಗಮ'.[ಮಹಾದೇವ 'ವಿಷಕಂಠ'ನಾದ ರೋಚಕ ಕಥೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ.!]

ಕಥಾಹಂದರ ಏನು.?

ಸಿಂಗರ್ ಆಗಬೇಕು ಎನ್ನುವುದು ಕ್ಯಾಬ್ ಡ್ರೈವರ್ ಆಗಿರುವ ತ್ರಿವಿಕ್ರಮನ ಆಸೆ. ಇನ್ನೂ ವಾಣಿ ವೀಣಾ ವಾದಕಿ. ಆಕಸ್ಮಿಕವಾಗಿ ಪರಿಚಯ ಆಗುವ ತ್ರಿವಿಕ್ರಮ-ವಾಣಿಯನ್ನು ಸಂಗೀತ ಹತ್ತಿರ ತರುತ್ತದೆ. ಆದರೆ ಯಶಸ್ಸಿನ ಬೆನ್ನು ಹತ್ತಿದಾಗ ಪ್ರೀತಿಯ ಪಾಡೇನು ಎನ್ನುವುದು ಕಥಾಹಂದರ.['ಮಾತುಕತೆ ವಿನಯ್ ಜೊತೆ' ಹೊಸ ಟಾಕ್ ಶೋ]

ಸಂಗೀತಮಯ ಧಾರಾವಾಹಿ

ಈ ಧಾರಾವಾಹಿ ಸುಂದರವಾಗಿ ಮೂಡಿ ಬರಲು ಅನೇಕ ಹಾಡುಗಳನ್ನು ಕಂಪೋಸ್ ಮಾಡಲಾಗಿದೆ. ಕಿರುತೆರೆಯಲ್ಲಿ ಇಂತಹ ಪ್ರಯತ್ನ ತುಂಬಾ ಅಪರೂಪ. ಮಳೆ, ಸಂಗೀತ ಮತ್ತು ಅದ್ಭುತ ಕಲಾವಿದರ ಸಂಗಮವಾಗಿರುವ 'ತ್ರಿವೇಣಿ ಸಂಗಮ' ಕನ್ನಡದ ವೀಕ್ಷಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.

ತಾರಾಬಳಗದಲ್ಲಿ...

ಶಶಿಧರ್ ಕೋಟೆ, ಸುರೇಶ್ ರೈ, ಅಪೇಕ್ಷಾ ಪುರೋಹಿತ್, ಕೆಂಪೇಗೌಡ, ಗುರು ಹೆಗಡೆ, ಮಾಲತಿಶ್ರೀ, ಮೈಸೂರು, ಶ್ರೀಧರ್ ಮುಂತಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. ತಿಲಕ್ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಪ್ರಸಾರ ಯಾವಾಗ.?

ರಾಗ ಅನುರಾಗದ ನಾದಮಯ ಪ್ರೇಮಕಥೆ 'ತ್ರಿವೇಣಿ ಸಂಗಮ' ಫೆಬ್ರವರಿ 6 ರಿಂದ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Kannada Entertainment Channel Star Suvarna has come up with a new serial called 'Triveni Sangama' which will go on air from February 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada