For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಮಾಡಿದ್ದ ಪಾತ್ರದಲ್ಲಿ ನಟಿಸಲು ಸಜ್ಜಾದ ಕನ್ನಡದ ಚಂದನ್ ಕುಮಾರ್

  |

  ಕನ್ನಡದ ನಟ ನಟಿಯರು ಬೇರೆ ಭಾಷೆಯ ಸಿನಿಮಾ, ಸೀರಿಯಲ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳೋದು, ಹಾಗೇ ಪರ ಭಾಷೆ ಕಲಾವಿದರು ಕನ್ನಡದಲ್ಲಿ ಅಭಿನಯಿಸೋದು ಸಹಜ. ಅದರಂತೆ ಈಗ ಕನ್ನಡದ ಬಿಗ್‌ಬಾಸ್ ಸೀಸನ್ 3 ಖ್ಯಾತಿಯ ಹಾಗೂ ಕನ್ನಡದ ಹಿರಿತೆರೆ, ಕಿರುತೆರೆಯಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿರುವ ನಟ ಚಂದನ್ ಕುಮಾರ್ ಮತ್ತೆ ತೆಲುಗು ಸೀರಿಯಲ್ ಕಡೆ ಒಲವು ತೋರಿದ್ದಾರೆ. ಹೊಸ ಸೀರಿಯಲ್‌ನಲ್ಲಿ ನಟಿಸುತ್ತಿರುವ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.

  ಸೀರಿಯಲ್ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟ ಚಂದನ್ ಕುಮಾರ್ ಕನ್ನಡ ಮತ್ತು ತೆಲುಗು ಸೀರಿಯಲ್‌ಗಳಲ್ಲಿ ಹೆಚ್ಚು ನಿರತರಾಗಿದ್ದಾರೆ. ಈ ಹಿಂದೆ ಕೂಡ ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಚಂದನ್ ಪ್ರಮುಖ ಪಾತ್ರದಲ್ಲಿ ನಟಿಸಿ ಮನೆ ಮಾತಾಗಿದ್ದರು. ಜನಪ್ರಿಯತೆ ಪಡೆದುಕೊಂಡ ಈ ಸೀರಿಯಲ್ ಮುಖಾಂತರವೇ ತೆಲುಗಿನಲ್ಲಿ ಹೆಚ್ಚು ಹೆಚ್ಚು ಆಫರ್‌ಗಳು ಚಂದನ್ ಅವರನ್ನು ಅರಸಿ ಬಂತಾದರೂ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಈಗ ತೆಲುಗಿನ 'ಶ್ರೀಮತಿ ಶ್ರೀನಿವಾಸ್' ಸೀರಿಯಲ್‌ನಲ್ಲಿ ಅಭಿನಯಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ.

  ಕನ್ನಡದ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಹೆಸರು ಮಾಡಿರುವ ಚಂದನ್ ಈಗ ಮತ್ತೆ ತೆಲುಗಿಗೆ ಎಂಟ್ರಿ ಕೊಡುತ್ತಿದ್ದಾರೆ. 'ಶ್ರೀಮತಿ ಶ್ರೀನಿವಾಸ್' ಧಾರಾವಾಹಿಯಲ್ಲಿ ಚಂದನ್ ಕಾರ್ ಮೆಕಾನಿಕ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸೀರಿಯಲ್‌ನ ಫಸ್ಟ್‌ಲುಕ್‌ಗಾಗಿ ತೆಗೆದ ಒಂದಷ್ಟು ಫೊಟೋಗಳನ್ನು ಚಂದನ್ ಇದೀಗ ಶೇರ್ ಮಾಡಿಕೊಂಡಿದ್ದಾರೆ.

  ವಿಶೇಷ ಏನಂದ್ರೆ ಚಂದನ್ ನಟಿಸುತ್ತಿರುವ ಈ ಹೊಸ ಸೀರಿಯಲ್ ಹಿಂದಿಯಲ್ಲಿ ತುಂಬ ಜನಪ್ರಸಿದ್ಧಿ ಪಡೆದಿದ್ದ 'ಪವಿತ್ರ ರಿಶ್ತಾ' ದ ರಿಮೇಕ್ ಆಗಿದೆ. ಮತ್ತು ವಿಶೇಷ ಅಂದರೆ ಹಿಂದಿಯ 'ಪವಿತ್ರ ರಿಶ್ತಾ' ಸೀರಿಯಲ್‌ನ ಪ್ರಮುಖ ಪಾತ್ರದಲ್ಲಿ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರು ನಟಿಸಿದ್ದರು. ಈ ಸೀರಿಯಲ್ ಮೂಲಕವೇ ಸುಶಾಂತ್ ಸಿಂಗ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ರು. ಈ ಸೀರಿಯಲ್ ಬಳಿಕವೇ ಕಿರುತೆರೆ ಲೋಕದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದವರು ಸುಶಾಂತ್ ಸಿಂಗ್. ಈ ಸೀರಿಯಲ್ ಮೂಲಕವೇ ಅಂದು ಮನೆ ಮನೆಗೆ ಪರಿಚಿತರಾದ ಸುಶಾಂತ್ ಸಿಂಗ್ ಸಾಕಷ್ಟು ಯಶಸ್ವಿಯನ್ನು ಪಡೆದಿದ್ದರು. 'ಪವಿತ್ರ ರಿಶ್ತಾ' ಮೂಲಕ ಗುರುತಿಸಿಕೊಂಡ ಸುಶಾಂತ್ ತದನಂತರದಲ್ಲಿ ಬಾಲಿವುಡ್‌ನಲ್ಲಿ ಬೆಳೆದ ಪರಿ ಎಲ್ಲರಿಗೂ ತಿಳಿದಿದೆ.

  TV Actor Chandan Kumar Acting in Srimathi Srinivas Telugu Serial

  ಇಂತಹ ಒಂದು ಸೂಪರ್ ಹಿಟ್ ಧಾರಾವಾಹಿ ಈಗ ತೆಲುಗಿಗೆ 'ಶ್ರೀಮತಿ ಶ್ರೀನಿವಾಸ್' ಹೆಸರಿನಲ್ಲಿ ರಿಮೇಕ್ ಆಗುತ್ತಿದೆ. ಈ ಸೀರಿಯಲ್‌ಗೆ ಚಂದನ್ ಕುಮಾರ್ ಆಯ್ಕೆ ಆಗಿದ್ದು ಪಾತ್ರಕ್ಕಾಗಿ ಸಾಕಷ್ಟು ಕಸರತ್ತನ್ನು ಮಾಡುತ್ತಿದ್ದಾರೆ. ಹಾಗೇ ಸೀರಿಯಲ್‌ನಲ್ಲಿ ನಟಿಸಲು ಬಾರಿ ಉತ್ಸುಕನಾಗಿದ್ದೇನೆ ಎಂದು ಕೂಡ ಹೇಳಿಕೊಂಡಿದ್ದಾರೆ. ಧಾರಾವಾಹಿ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಚಂದನ್ ಕುಮಾರ್ ಕೂಡ ಹೈದರಾಬಾದ್‌ಗೆ ಓಡಾಡುತ್ತಿದ್ದಾರೆ. ಈ ಬಗ್ಗೆ ಚಂದನ್ ಕುಮಾರ್ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ 'ಕನ್ನಡ ಮತ್ತು ತೆಲುಗು ಸೀರಿಯಲ್‌ಗಳನ್ನು ಒಟ್ಟಿಗೆ ಹೇಗೆ ಮ್ಯಾನೇಜ್ ಮಾಡುತ್ತೀರ' ಎಂದು ಕೂಡ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಚಂದನ್ ಕುಮಾರ್ 'ಟ್ರಾವೆಲ್ ಮಾಡಬೇಕು ಅಷ್ಟೆ' ಎಂದು ಹೇಳಿದ್ದಾರೆ.

  ಕನ್ನಡದ 'ರಾಧಾ ಕಲ್ಯಾಣ' ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಚಂದನ್ ಬಳಿಕ 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಟಿಸಿ ಪ್ರಸ್ತುತ 'ಸರ್ವಮಂಗಳ ಮಾಂಗಲ್ಯೆ' ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. 'ಸರ್ವಮಂಗಳ ಮಾಂಗಲ್ಯೆ' ಸೀರಿಯಲ್ ತೆಲುಗಿನಲ್ಲು ರಿಮೇಕ್ ಆಗುತ್ತಿದ್ದು, ಅದರಲ್ಲೂ ಚಂದನ್ ಅವರೇ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ಕನ್ನಡದ 'ಪ್ರೇಮ ಬರಹ' ಮತ್ತು 'ಲವ್ ಯೂ ಆಲಿಯಾ'' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಚಂದನ್, ಕಿರುತೆರೆ ಲೋಕದಲ್ಲೆ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.

  English summary
  Actor Chandan Kumar acting in one more telugu serial Srimathi Srinivas . The serial sees him sharing screen space with Kannada actress Ankita Amar. Theserial is a remake of Pavitra Rishta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X