For Quick Alerts
  ALLOW NOTIFICATIONS  
  For Daily Alerts

  ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ ಅದ್ಧೂರಿ ಧಾರಾವಾಹಿ 'ಮಾಯಾ'

  By Harshitha
  |

  24 ವರ್ಷಗಳಿಂದ ಕನ್ನಡಿಗರಿಗೆ ಧಾರಾವಾಹಿಗಳ ಜೊತೆಗೆ ವಿವಿಧ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ವಾಹಿನಿ ಉದಯ ಟಿವಿ.

  ಸದ್ಯ 'ನಂದಿನಿ', 'ಕಾವೇರಿ', 'ಮಾನಸ ಸರೋವರ', 'ಜೋ ಜೋ ಲಾಲಿ', 'ಕಣ್ಮಣಿ' ಧಾರಾವಾಹಿಗಳು ಪ್ರಸಾರ ಆಗುತ್ತಿರುವ ಉದಯ ಟಿವಿಯಲ್ಲಿ ವಿನೂತನ ಧಾರಾವಾಹಿಯೊಂದು ಪ್ರಸಾರ ಆಗಲಿದೆ.

  ಜುಲೈ 9 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ 'ಮಾಯಾ' ಧಾರಾವಾಹಿ ಪ್ರಸಾರ ಆಗಲಿದೆ. "ಪುನರಪಿ ಜನನಂ.. ಪುನರಪಿ ಮರಣಂ" ಎನ್ನುವಂತೆ ದೇಹ ನಾಶವಾದರೂ ಆತ್ಮಕ್ಕೆ ವಿನಾಶವಿಲ್ಲಾ ಎನ್ನುವುದು ಆಧ್ಯಾತ್ಮದ ಸಾರ. ಇವೆರಡರ ಮಿಶ್ರಣವೇ 'ಮಾಯಾ' ಧಾರಾವಾಹಿಯ ಮೂಲ. ಮುಂದೆ ಓದಿರಿ...

  'ಆತ್ಮ'ದ ಸುತ್ತ ಸುತ್ತುವ ಕಥೆ

  'ಆತ್ಮ'ದ ಸುತ್ತ ಸುತ್ತುವ ಕಥೆ

  ಸಾವಿರಾರು ವರ್ಷಗಳ ಹಿಂದೆ ಕಣ್ಮರೆಯಾದ ಆತ್ಮವನ್ನು ಮತ್ತೆ ಈ ಕಾಲದಲ್ಲಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಇಡೀ ಪ್ರಪಂಚದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬೇಕೆನ್ನುವುದು ಕಾಲಾಂತಕನ ಆಸೆ. ಅವನ ಆಸೆ ನೆರವೇರದೆ ದುಷ್ಟ ಶಕ್ತಿಗಳನ್ನು ತಡೆಯುವ ಸಾಹಸ ಇನ್ನೊಂದು ಗುಂಪಿಗೆ.

  ಉದಯ ಟಿವಿಯಲ್ಲಿ ಇದೇ ಸೋಮವಾರದಿಂದ ಮಹಾಸಂಚಿಕೆಗೆಳ ಮಹಾವಾರ.!ಉದಯ ಟಿವಿಯಲ್ಲಿ ಇದೇ ಸೋಮವಾರದಿಂದ ಮಹಾಸಂಚಿಕೆಗೆಳ ಮಹಾವಾರ.!

  ಕಥೆಯ ಕೇಂದ್ರ ಬಿಂದು

  ಕಥೆಯ ಕೇಂದ್ರ ಬಿಂದು

  ಇಂದಿನ ಜನ್ಮದಲ್ಲಿ ಅರವಿಂದ್, ಯಕ್ಷ ಮತ್ತು ದರ್ಶಿನಿ ಯಾಗಿ ಹುಟ್ಟಿರುವ ಮೂರು ಜನರೇ ಈ ಕಥೆಯ ಕೇಂದ್ರ ಬಿಂದುಗಳು. ಯಾರ ಜೊತೆಗೆ ಯಾರು ಸೇರಿದರೆ ಒಳ್ಳೆಯದನ್ನು ಸಾಧಿಸಬಹುದು? ಯಾರನ್ನ ಯಾರಿಂದ ದೂರಾ ಮಾಡಬೇಕು? ಯಾರಿಂದ ಯಶಸ್ಸು ದೊರೆಯುತ್ತದೆ? ಎನ್ನುವ ಹೋರಾಟವೇ ಕಾಲದ ಹಾಗೂ ಕಾಲಾಂತಕನ ಮಾಯೆ.

  ಉದಯ ಟಿವಿಗೆ 24ರ ಹರೆಯ: 4 ಧಾರಾವಾಹಿಗಳಲ್ಲಿ ದಾಖಲೆಯ ಸಂಭ್ರಮಉದಯ ಟಿವಿಗೆ 24ರ ಹರೆಯ: 4 ಧಾರಾವಾಹಿಗಳಲ್ಲಿ ದಾಖಲೆಯ ಸಂಭ್ರಮ

  ಅತ್ಯಾಧುನಿಕ ಗ್ರಾಫಿಕ್ಸ್ ಬಳಕೆ

  ಅತ್ಯಾಧುನಿಕ ಗ್ರಾಫಿಕ್ಸ್ ಬಳಕೆ

  ಈ ಧಾರಾವಾಹಿಯ ಕಥೆಯೇ ಹೊಸ ರೀತಿಯದ್ದು.. ಅದಕ್ಕೆ ಪೂರಕವಾದ ಜಾಗಗಳು, ಮನಸೆಳೆಯುವ ಗ್ರಾಫಿಕ್ಸ್, ನವೀನ ಮಾದರಿಯ ತಂತ್ರಜ್ಞಾನದ ಉಪಯೋಗ... ಎಲ್ಲವೂ ವೀಕ್ಷಕರನ್ನು ಆಶ್ಚರ್ಯಗೊಳ್ಳುವಂತೆ ಮಾಡುತ್ತದೆ. ಪ್ರೀತಿ, ಪ್ರೇಮ, ಮತ್ಸರ, ಹಗೆ, ಹಾಸ್ಯ ಹೀಗೆ ಮನರಂಜಿಸಲು ಬೇಕಾಗುವ ಎಲ್ಲ ಅಂಶಗಳೂ ಈ ಧಾರಾವಾಹಿಯಲ್ಲಿ ಅಡಕವಾಗಿದೆ.

  'ನಂದಿನಿ' ಟೀಮ್

  'ನಂದಿನಿ' ಟೀಮ್

  ಈಗಾಗಲೇ ಕರ್ನಾಟಕದಲ್ಲಿ ಮನೆ ಮಾತಾಗಿರುವ 'ನಂದಿನಿ' ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವ ಅವ್ನಿ ಟೆಲಿ ಮೀಡಿಯ ಈ 'ಮಾಯಾ' ಧಾರಾವಾಹಿಯನ್ನು ತಯಾರಿಸಿದೆ. ನಂದಾಸ್ ಮತ್ತು ನಾರಾಯಣ ಮೂರ್ತಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

  ತಾರಾಗಣದಲ್ಲಿ ಯಾರ್ಯಾರಿದ್ದಾರೆ.?

  ತಾರಾಗಣದಲ್ಲಿ ಯಾರ್ಯಾರಿದ್ದಾರೆ.?

  ತಾರಾಗಣದಲ್ಲಿ 'ಸರಯೂ' ಧಾರಾವಾಹಿಯ ಮೂಲಕ ಹೆಸರಾದ ಶ್ವೇತ ನಾಯಕಿಯಾಗಿ, ಆಕಾಂಕ್ಷ ಮತ್ತೋರ್ವ ನಾಯಕಿಯಾಗಿ, ಅಜಯ್ ಈ ಧಾರಾವಾಹಿಯ ನಾಯಕನಾಗಿ ಅಭಿನಯಿಸತ್ತಿದ್ದಾರೆ. ಹಿರಿಯ ನಟ ಉಮೇಶ್, ವಿನಯ ರಾಮ್ ಪ್ರಸಾದ್, ಮೋಹನ್ ಶರ್ಮ, ಅಶೋಕ್ ಮುಂತಾದವರು ಈ ಧಾರಾವಾಹಿಗೆ ಸಾಥ್ ನೀಡಿದ್ದಾರೆ.

  ಟೆಕ್ನಿಕಲ್ ಟೀಮ್

  ಟೆಕ್ನಿಕಲ್ ಟೀಮ್

  ಶೀರ್ಷಿಕೆ ಸಂಗೀತವನ್ನು ಸತ್ಯ, ಸಂಕಲನವನ್ನು ಶ್ರೀಕಾಂತ್, ಸಾಹಿತ್ಯ-ಸಂಭಾಷಣೆಯನ್ನು ಉದಯ್ ಮತ್ತು ಛಾಯಾಗ್ರಹಣ-ನಿರ್ದೇಶನ: ಭಾನು ಅವರು ವಹಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಕಥೆ-ಚಿತ್ರಕತೆ, ಸಲಹೆ-ನಿರ್ಮಾಣ ಸುಂದರ್ ಸಿ ನಿರ್ವಹಿಸುತ್ತಿದ್ದಾರೆ.

  'ಮಾಯಾ' ಪ್ರಸಾರ ಯಾವಾಗ.?

  'ಮಾಯಾ' ಪ್ರಸಾರ ಯಾವಾಗ.?

  ಫ್ಯಾಂಟಸಿ, ಸಾಮಾಜಿಕ ಮೆಗಾ ಧಾರಾವಾಹಿ 'ಮಾಯಾ' ಜುಲೈ 9 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  Udaya TV is all set to launch new fiction mega serial 'Maya'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X