Don't Miss!
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Kasturi Nivasa Serial: ತಾನೂ ಕೂಡ ವಸಿಷ್ಠನ ಮಗಳೆಂಬುದನ್ನ ಮರೆತು ಕಿಡಿಕಾರುತ್ತಿದ್ದಾಳೆ ವರ್ಣಿಕಾ
ಕಸ್ತೂರಿ ನಿವಾಸ.. ಈ ಹೆಸರೇ ಸಾಕು ತೂಕ ಹೆಚ್ಚಿಸೋದಕ್ಕೆ. ಹೆಸರಿಗೆ ತಕ್ಕಂತೆ ಧಾರಾವಾಹಿಯ ತಂಡ ಕೂಡ ಇದೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ 'ಕಸ್ತೂರಿ ನಿವಾಸ' ಕೂಡು ಕುಟುಂಬದಿಂದ ಕೂಡಿದೆ. ಹೆಸರು ಅಣ್ಣಾವ್ರ ಸಿನಿಮಾವನ್ನು ನೆನಪಿಸಿದರು ಸಹ ಈ ಧಾರಾವಾಹಿಗೂ ಅಣ್ಣಾವ್ರ ಕಸ್ತೂರಿ ನಿವಾಸಕ್ಕೂ ಸಂಬಂಧವಿಲ್ಲ.
2019ರ ಸೆಪ್ಟೆಂಬರ್‌ನಲ್ಲಿ ಶುರುವಾದ ಈ ಧಾರಾವಾಹಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಈ ಧಾರಾವಾಹಿಯಲ್ಲಿ ಇರುವ ಪಾತ್ರವರ್ಗ ಇದೆಯಲ್ಲ ಅದು ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದೆ. ಮುಸ್ಸಂಜೆ ಮಹೇಶ್ ದೊಡ್ಡ ತಾರಾಬಳಗವನ್ನೇ ತನ್ನ ಧಾರಾವಾಹಿಯ ಪರದೆ ಮೇಲೆ ತೋರಿಸಿದ್ದಾರೆ.
Drama
Juniors
Season
4:
ಅವಮಾನ
ಮಾಡಿದವರ
ಎದುರು
ತೊಡೆ
ತಟ್ಟಿದ
'ಡ್ರಾಮ
ಜೂನಿಯರ್'
ಸಿಂಗಂ
ಆಶಾರಾಣಿ, ಪದ್ಮಾವಾಸಂತಿ, ಜ್ಯೋತಿ ರೈ, ಸುಂದರಶ್ರೀ, ಋತು, ನರೇಶ, ದಿಲೀಪ್ ಶೆಟ್ಟಿ, ರಿಷಾ, ಸಿತಾರಾ, ಸುವೇದ್, ವಿನಯ್ ರಾಮಪ್ರಸಾದ್ ಹೀಗೆ ಇನ್ನು ಅನೇಕರಿರುವ ದೊಡ್ಡ ಬಳಗವೇ ಇದೆ. ಈ ಧಾರಾವಾಹಿಯಲ್ಲಿ ಮೃದುಲಾ ಅನ್ನೋ ಪಾತ್ರ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಆ ಪಾತ್ರ ಸದ್ಯ ಧಾರಾವಾಹಿಯಲ್ಲಿ ಇಲ್ಲ. ಕೊಲೆಯಾಗಿದೆ. ಆದರೂ ಆ ಪಾತ್ರದ ಕೊಲೆ ಸುತ್ತ ಧಾರಾವಾಹಿ ಓಡುತ್ತಾ ಇದೆ.
ದಿನೇ ದಿನೇ ತಿರುವು ಪಡೆಯುತ್ತಿದೆ ಕಸ್ತೂರಿ ನಿವಾಸ
ಧಾರಾವಾಹಿ ಮೈ ಝುಮ್ಮೆನ್ನಿಸೋ ಸನ್ನಿವೇಶಗಳು ಕಾಣಸಿಗುತ್ತವೆ. ಒಂದು ಕೂಡು ಕುಟುಂಬದಲ್ಲೇ ಎಲ್ಲವೂ ನಡೆಯುತ್ತಿದ್ದರೂ, ಯಾವುದು ಯಾರಿಗೂ ಗೊತ್ತಾಗೋಲ್ಲ. ಮೃದುಲಾ ಸತ್ತ ಬಳಿಕ ಖುಷಿ ರಾಘವನನ್ನು ಮದುವೆಯಾಗಿದ್ದಾಳೆ. ಖುಷಿ ಅಂದರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ಆಶ್ರಮದಲ್ಲಿರುವ ಕಸ್ತೂರಿಯನ್ನು ಅಮ್ಮ ಎಂದೇ ಕಾಣುತ್ತಿದ್ದ ಖುಷಿಗೆ ಆಕೆಯೇ ನಿಜವಾದ ತಾಯಿ ಅನ್ನೋದು ಗೊತ್ತೆ ಇರಲ್ಲ.
Sathya
Serial:
ಮನದಲ್ಲೇ
ಗುಟ್ಟಾಗಿ
ಪ್ರೀತಿಸಿದ
ಪ್ರೇಯಸಿ
'ಸತ್ಯ'ಗೆ
ಕಾರ್ತಿಕ್
ಚಾಲೆಂಜ್
ವಸಿಷ್ಠನಿಗೂ ಕಸ್ತೂರಿಗೂ ಆಗಾಗ ಜಗಳಗಳು, ಮನಸ್ತಾಪ ನಡೆಯುತ್ತಲೇ ಇರುತ್ತೆ. ಯಾಕಂದ್ರೆ ವಸಿಷ್ಠ ಹಳೆಯ ದ್ವೇಷವನ್ನಿಟ್ಟುಕೊಂಡು ಕಸ್ತೂರಿ ನಿವಾಸದ ಮೇಲೆ ಹಗೆ ಸಾಧಿಸುತ್ತಲೇ ಇರುತ್ತಾನೆ. ಆ ದ್ವೇಷದಿಂದಲೇ ಕಸ್ತೂರಿಯನ್ನು ಪ್ರೀತಿಸಿ, ಮೋಸ ಮಾಡಿ, ಮಗುವನ್ನು ಕೊಟ್ಟ. ಕಸ್ತೂರಿ ಮದುವೆಗೂ ಮುಂಚೆನೆ ಗರ್ಭಿಣಿಯಾಗಿದ್ದಕ್ಕೆ ಕಸ್ತೂರಿಯನ್ನು ಮನೆಯವರು ಮರೆತರು. ಕಸ್ತೂರಿ ಆಶ್ರಮ ಸೇರಿಕೊಂಡಳು.

ತನ್ನ ಮಗಳೇ ಮೃದುಲಾ ಎಂಬುದೇ ವಸಿಷ್ಠನಿಗೆ ಗೊತ್ತಿಲ್ಲ
ವಸಿಷ್ಠನಿಗೆ ಮೃದುಲಾ ತನ್ನ ಮಗಳೆಂಬುದು ಗೊತ್ತೆ ಇರಲ್ಲ. ಇತ್ತ ವರ್ಣಿಕಾ ಕೂಡ ತನ್ನ ಮಗಳೆಂಬುದು ತಿಳಿದಿರಲ್ಲ. ಕಸ್ತೂರಿ ಮಕ್ಕಳಾದಾಗ ಇದೇ ವಸಿಷ್ಠ ಬದಲಾಯಿಸಿರುತ್ತಾನೆ. ಅದರಲ್ಲಿ ಖುಷಿ ಕೂಡ ಒಬ್ಬಳು. ಖುಷಿಯನ್ನು ಮಗು ಇರುವಾಗಲೇ ಅಗಲಿರುತ್ತಾನೆ. ಆದರೆ ಕಸ್ತೂರಿ ಜೊತೆ ಬೆಳೆದ ಮೃದುಲಾ ಇದೇ ವಸಿಷ್ಠನ ಮಗಳು.
ಈಗ ಹಗೆತನ ಹೆಚ್ಚಾಗಿದೆ. ಖುಷಿ ಮೃದುಲಳಾ ಜಾಗದಲ್ಲಿದ್ದಾಳೆ. ರಾಘವನನ್ನ ಮದುವೆಯಾಗಿದ್ದಾಳೆ. ಮೃದುಳನ್ನೇ ತನ್ನ ಸ್ವಂತ ಅಕ್ಕ ಎಂದುಕೊಂಡಿದ್ದ ವರ್ಣಿಕಾ ಕೂಡ ರಾಘವನ ಮನೆಯಲ್ಲೇ ಇದ್ದಾಳೆ. ಆತನ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಮೇಲೆ ಅಟ್ಯಾಕ್ ಆಗೋದು ಇದೇ ವಸಿಷ್ಠನಿಂದ. ರೌಡಿಗಳಿಂದ ತಪ್ಪಿಸಿಕೊಂಡು ಬಂದು ವರ್ಣಿಕಾ ವಸಿಷ್ಠನ ಕಾರಿನಲ್ಲಿಯೇ ಆಶ್ರಯ ಪಡೆದಿದ್ದಾಳೆ. ವಸಿಷ್ಠನ ಮೊಬೈಲ್‌ನಿಂದ ತಾಯಿಗೆ ಕರೆ ಮಾಡಿದಾಗಲೇ ತಿಳಿಯೋದು. ಕೊಲೆ ಮಾಡಬೇಕೆಂದು ಕೊಂಡಿದ್ದ ವಸಿಷ್ಠನಿಗೆ ಕಸ್ತೂರಿ ಮಾತು ಕಟ್ಟಾಕುತ್ತೆ. ಆಕೆ ನಿನ್ನ ಮಗಳು ಎಂದಾಗ ನಂದಿನಿ ಹೇಳಿದಂತೆ ರಾಘವನ ಆಫೀಸಿಗೆ ತಲುಪಿಸುತ್ತಾನೆ.
ದ್ವೇಷ ಕಾಡುತ್ತಿರುವ ವರ್ಣಿಕಾ ಕೂಡ ವಸಿಷ್ಠನ ಮಗಳೇ..!
ಇತ್ತ ವರ್ಣಿಕಾಗೆ ತನ್ನ ತಂದೆಯೇ ವಸಿಷ್ಠ ಎಂಬುದು ಗೊತ್ತಿಲ್ಲ. ಆತ ಶತ್ರು ಅಂತಷ್ಟೇ ಗೊತ್ತು. ವಸಿಷ್ಠನ ಮಗಳು ಸತ್ತ ಅಕ್ಕ ಮೃದುಲಾ ಎಂಬುದು ಆಕೆಗೆ ಗೊತ್ತಿಲ್ಲ. ಆಕೆಯನ್ನು ಹುಡುಕಿ ಚಟ್ಟಕ್ಕೆ ಸೇರಿಸಬೇಕು ಎಂದು ಸ್ಕೆಚ್ ಹಾಕಿದ್ದಾಳೆ. ಇದನ್ನು ಖುಷಿ ಕೇಳಿಸಿಕೊಂಡಿದ್ದಾಳೆ. ಮುಂದೆ ವರ್ಣಿಕಾ ಆಟ ನಡೆಯುತ್ತಾ ಇಲ್ಲವಾ ಅನ್ನೋದನ್ನು ನೋಡಬೇಕಿದೆ. ಒಂದು ವೇಳೆ ತಾನೇ ವಸಿಷ್ಠನ ಮಗಳೆಂದು ಗೊತ್ತಾದರೆ ವರ್ಣಿಕಾಳ ಮನಸ್ಥಿತಿ ಏನಾಗಬೇಡ. ನಿಜವಾದ ಕಸ್ತೂರಿ ನಿವಾಸದ ಮಗಳು ಖುಷಿ.