Don't Miss!
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೇಶ್ ವಸಿಷ್ಠ: ಉತ್ತರ ಕನ್ನಡದ ಮಹೇಶ್ ವಸಿಷ್ಠ 'ನೇತ್ರಾವತಿ' ಧಾರಾವಾಹಿಗೆ ಬಂದಿದ್ದೇಗೆ ?
ಉದಯ ಟಿವಿಯಲ್ಲಿ 'ನೇತ್ರಾವತಿ' ಧಾರಾವಾಹಿ ಬರುತ್ತಿದೆ. ಈಗಾಗಲೇ ಸುಮಾರು ತಿಂಗಳಿನಿಂದ ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಮೆಚ್ಚಿನ ಧಾರಾವಾಹಿಯಾಗಿದೆ. ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ಈ ಧಾರಾವಾಹಿ ಮೂಡಿಬರುತ್ತಿದೆ. ಫೇಮಸ್ ನಟ-ನಟಿಯರೇ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ, ಸಾಂಪ್ರಾದಾಯಿಕ ಕಾನ್ಸೆಪ್ಟ್‌ನಲ್ಲಿ ಧಾರಾವಾಹಿ ಮೂಡಿಬರುತ್ತಿದೆ. ಕುಟುಂಬಸ್ಥರೆಲ್ಲ ಕುಳಿತು ನೋಡುವಂತಹ ವಿಚಾರಧಾರೆಗಳು ಈ ಧಾರಾವಾಹಿಯಲ್ಲಿವೆ.
'ನೇತ್ರಾವತಿ' ಧಾರಾವಾಹಿ ಮಂಜುನಾಥ ಸ್ವಾಮಿಯ ಭಕ್ತೆಯ ಕಥೆಯಾಧಾರಿತ ಧಾರಾವಾಹಿಯಾಗಿದೆ. ಇದರಲ್ಲಿ ನಾಯಕಿಯಾಗಿರುವ 'ನೇತ್ರಾವತಿ' ತನ್ನೊಳಗೆ ಎಷ್ಟೇ ನೋವಿದ್ದರು, ಎಲ್ಲಿಯೂ, ಯಾರ ಬಳಿಯೂ ತೋರಿಸಿಕೊಳ್ಳದೆ, ಎಲ್ಲರಿಗೂ ನಗುವನ್ನೇ ಹಂಚಿಕೊಳ್ಳುತ್ತಾಳೆ. ನಾಯಕನ ಪಾತ್ರದಲ್ಲಿ ಮಹೇಶ್ ವಸಿಷ್ಠ ಮಿಂಚುತ್ತಿದ್ದು, ಈ ಧಾರಾವಾಹಿಗೆ ವಸಿಷ್ಠ ಸಿಂಹ ಬಂದ ರೀತಿ ಬಗ್ಗೆ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.
'ಜಬರ್ದಸ್ತ್'ಗೆ
ಗುಡ್
ಬೈ
ಹೇಳಿದ
'ಪುಷ್ಪ'
ನಟಿ
:
ಕೊನೆಯ
ಸಂಚಿಕೆಯಲ್ಲಿ
ಅನಸೂಯಾ
ಭಾವುಕ!

ಸಮುದ್ರನಾದ ಮಹೇಶ್ ವಸಿಷ್ಠ
ಮಂಜುನಾಥನ ಭಕ್ತೆಯಾಗಿ ನೇತ್ರಾವತಿ ಕಾಣಿಸಿಕೊಂಡರೆ, ಆಕೆಯ ನಾಯಕನಾಗಿ ಈ ಹಿಂದೆ ಸನ್ನಿ ಮಹಿಪಾಲ್ ಅಭಿನಯಿಸುತ್ತಿದ್ದರು. ಬಳಿಕ 200 ಕ್ಕೂ ಹೆಚ್ಚು ಎಪಿಸೋಡ್ ಆದ ಮೇಲೆ ಸಮುದ್ರನ ಪಾತ್ರಕ್ಕೆ ಮತ್ತೊಬ್ಬರು ಬಂದರು. ಅವರೇ ಮಹೇಶ್ ವಸಿಷ್ಠ. ಸಮುದ್ರನ ಮುಂದುವರಿದ ಪಾತ್ರಕ್ಕೆ ಬಂದ ಬಗ್ಗೆ ಮಾತನಾಡಿರುವ ಮಹೇಶ್ "ಈ ಪಾತ್ರದಲ್ಲಿ ಮುಂದುವರೆಯಲು ನನಗೆ ಮೊದ ಮೊದಲಿಗೆ ಅಂಜಿಕೆ ಇತ್ತು. ಯಾಕೆಂದರೆ ಅದಾಗಲೆ ಸಮುದ್ರ ಪಾತ್ರವನ್ನು ಜನ ಸನ್ನಿ ಮಣಿಪಾಲ್ ಅವರಲ್ಲಿ ನೋಡಿದ್ದರು. ಆದರೆ ನನ್ನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯ ಇತ್ತು" ಎಂಬುದು ಮಹೇಶ್ ವಸಿಷ್ಠ ಅಭಿಪ್ರಾಯ.

'ನೇತ್ರಾವತಿ'ಯಲ್ಲಿ ಪ್ರಮುಖ ಪಾತ್ರ
ಒಂದು ಧಾರಾವಾಹಿಯಲ್ಲಿ ಒಂದು ಪಾತ್ರಕ್ಕೆ ಮೊದಲು ಮಾಡಿದವರ ಮುಖ ಪರಿಚಯವೇ ಉಳಿದು ಬಿಡುತ್ತೆ. ಪ್ರೇಕ್ಷಕರ ಮನದೊಳಗೆ ಇಳಿದು ಬಿಟ್ಟಿರುತ್ತೆ. ಆ ಬಳಿಕ ಆ ಪಾತ್ರಕ್ಕೆ ಮತ್ತೊಬ್ಬರು ಬಂದರೆ ಜನ ಸ್ವೀಕರಿಸುವುದು ಕಷ್ಟವಾಗುತ್ತದೆ. ಇದೇ ಪ್ರಶ್ನೆಯನ್ನು ಮಹೇಶ್ ವಸಿಷ್ಠ ಬಳಿ ಕೇಳಿದಾಗ ಅವರು ಹೇಳಿದ್ದು ಹೀಗೆ. "ನನಗು ಕೂಡ ಅದೇ ಭಯವಿತ್ತು. ಆದರೆ ನಮ್ಮ ನಿರ್ದೇಶಕರ ಬೆಂಬಲದಿಂದ ನನ್ನ ಮನಸ್ಸಿನಲ್ಲಿ ಇದ್ದ ಗೊಂದಲ ನಿವಾರಣೆಯಾಗಿತ್ತು. ಇಡೀ ಟೀಂ ಹೆಚ್ಚು ಸಪೋರ್ಟ್ ಮಾಡಿದೆ. ಹೀಗಾಗಿಯೇ ಅದರಲ್ಲಿ ನಟಿಸುವುದು ಸುಲಭವಾಯಿತು. ಈಗ ಎಲ್ಲವೂ ಸರಿಯಾಗಿದೆ" ಎನ್ನುತ್ತಾರೆ.

'ನೇತ್ರಾವತಿ'ಯಲ್ಲಿ ಸಮುದ್ರ ಪಾತ್ರ
ಮಹೇಶ್ ವಸಿಷ್ಠ ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,"ನಾನು ಸಪೋರ್ಟಿಂಗ್ ಕ್ಯಾರೆಕ್ಟರ್‌ನಲ್ಲಿ ಏಳೆಂಟು ಧಾರಾವಾಹಿಯಲ್ಲಿ ಮಾಡಿದ್ದೇನೆ. ಸ್ಟಾರ್ ಸುವರ್ಣದಲ್ಲಿ 'ರುಕ್ಕು' ಸೀರಿಯಲ್‌ನಲ್ಲಿಯೂ ಫ್ರೆಂಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಇದೇ ಮೊದಲ ಬಾರಿಗೆ ಮೈನ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಈಗ ಸಮುದ್ರನ ಪಾತ್ರ ಚೆನ್ನಾಗಿ ಮೂಡಿ ಬರುತ್ತಿದೆ." ಅಂತ ಹರ್ಷ ವ್ಯಕ್ತಪಡಿಸುತ್ತಾರೆ ಮಹೇಶ್.

ಉತ್ತರ ಕನ್ನಡ ಜಿಲ್ಲೆಯಿಂದ ಬೆಂಗಳೂರು ಪಯಣ
ಮಹೇಶ್ ವಸಿಷ್ಠ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಬಂದಿರುವಂತವರು. ನಟನೆ ಬಗ್ಗೆ ಆಸಕ್ತಿ ಬಂದ ಮೇಲೆ, ನಾಟಕಗಳಲ್ಲಿಯೂ ಅಭಿನಯಿಸುತ್ತಾ, ಧಾರಾವಾಹಿ ಕಡೆಗೆ ಮುಖ ಮಾಡಿದ್ದಾರೆ. ಕಷ್ಟದ ದಾರಿಯನ್ನು ದಾಟುತ್ತಾ ಬಂದ ವಸಿಷ್ಠ ಫೈನಲಿ ಬಯಸಿದ ಪಾತ್ರ ವರ್ಷಗಳು ಕಳೆದ ಬಳಿಕ ಸಿಕ್ಕಿದೆ. ಸದ್ಯ ನೇತ್ರಾವತಿಯಲ್ಲಿ ಲೀಡ್ ರೋಲ್ ಮಾಡುತ್ತಿದ್ದು, ಬೇರೆ ಧಾರಾವಾಹಿಯಿಂದಲೂ ಒಳ್ಳೊಳ್ಳೆ ಅವಕಾಶಗಳು ಅರಸಿ ಬರುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ. ಇನ್ನು ಸಿನಿಮಾಗೆ ಹೋಗುವ ಆಸೆಯೂ ಅವರದ್ದಾಗಿದ್ದು, ಅದಕ್ಕಾಗಿಯೂ ತೆರೆ ಹಿಂದೆ ಸಾಕಷ್ಟು ಕಸರತ್ತು ನಡೆಯುತ್ತಿದೆ. ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದಾರೆ.