»   » ಸರಳ ಜೀವನ ವಾಹಿನಿಯಲ್ಲಿ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮಗಳು

ಸರಳ ಜೀವನ ವಾಹಿನಿಯಲ್ಲಿ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮಗಳು

Posted By:
Subscribe to Filmibeat Kannada

ಕನ್ನಡ ಕಿರುತೆರೆ ಲೋಕದಲ್ಲಿ ಧನಾತ್ಮಕ ಚಿಂತನೆ, ಅಲೆಯನ್ನು ಎಬ್ಬಿಸಿದ ಕರ್ನಾಟಕದ ಪ್ರಪ್ರಥಮ ಇನ್ಫೋಟೈನ್‍ಮೆಂಟ್ ಚಾನೆಲ್ 'ಸರಳ ಜೀವನ' ವಾಹಿನಿಯಲ್ಲಿ ಹೊಸ ವರ್ಷದ ದಿನವಾದ ಯುಗಾದಿಯ ದಿನದಂದು (ಏ 8) ವಿನೂತನ ಕಾರ್ಯಕ್ರಮ ಪ್ರಸಾರವಾಗಲಿದೆ.

ರಸದೌತಣದ ಕಾರ್ಯಕ್ರಮಗಳು, ನವ ವಸಂತಕ್ಕೆ ಕಾಲಿಡುತ್ತಿರುವ ಸಡಗರ, ಸಂಭ್ರಮದ ಯುಗಾದಿ ಹಬ್ಬದ ಪ್ರಯುಕ್ತ 'ಸರಳ ಜೀವನ ವಾಹಿನಿ' ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಯುಗಾದಿ ಹಬ್ಬದಂದು (ಏ 8) ಸರಳ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಪಟ್ಟಿ ಇಂತಿದೆ

Ugadi special programme in Sarala Jeevana channel on April 8

ಯುಗಾದಿ ವರ್ಷ ಭವಿಷ್ಯ ಬೆಳಿಗ್ಗೆ 9:00ಕ್ಕೆ - ಮಹಾಬಲ್ಲಾಳ ಕುಲ್ಕೆರೆ ಹಾಗೂ ಡಾ. ಕೃಷ್ಣಕುಮಾರ ಅವರಿಂದ

ಯುಗಾದಿ ಭೋಜನ ಬೆಳಿಗ್ಗೆ 11:00ಕ್ಕೆ - ಚಲನಚಿತ್ರ ತಾರೆ ಮತ್ತು ನಿರ್ದೇಶಕಿ ರೂಪಾ ಐಯ್ಯರ್ ಅವರೊಂದಿಗೆ ಚಿಟ್ ಚಾಟ್ ಹಾಗೂ ವಿಶೇಷ ಅಡುಗೆ ತಯಾರಿ. ಜ್ಞಾನಪದ ಜುಗಲ್ ಬಂದಿ ಮಧ್ಯಾಹ್ನ 12:00ಕ್ಕೆ.

ಆಚಾರ ವಿಚಾರ ಯುಗಾದಿ ವಿಶೇಷ ಮಧ್ಯಾಹ್ನ 1:00ಕ್ಕೆ - ಶ್ರೀ. ಗಗನ ಗುರುದತ್ತ ಗುರೂಜಿಯವರೊಂದಿಗೆ ಯುಗಾದಿ ಹಬ್ಬದ ಆಚರಣೆಯ ಕುರಿತ ವಿಶೇಷ ಚರ್ಚಾ ಕಾರ್ಯಕ್ರಮ.

ಯುಗಾದಿ ಅರಿವು ಆಚರಣೆ ಮಧ್ಯಾಹ್ನ 1:30ಕ್ಕೆ- ಡಾ. ಕಿಶೋರ್ ಅವರೊಂದಿಗೆ ಯುಗಾದಿ ಹಬ್ಬದ ವೈಜ್ಞಾನಿಕ ಹಿನ್ನೆಲೆ ಅರಿಯುವ ಚರ್ಚಾ ಕಾರ್ಯಕ್ರಮ.

Ugadi special programme in Sarala Jeevana channel on April 8

ಯುಗಾದಿ ಏಕೆ, ಹಾಗೂ ಹೇಗೆ? ಮಧ್ಯಾಹ್ನ 2:30ಕ್ಕೆ - ಬೇರೆ ಬೇರೆ ರಾಜ್ಯಗಳಲ್ಲಿ ಯುಗಾದಿ ಹಬ್ಬದ ಆಚರಣೆ ಹಾಗೂ ವಿಶೇಷ ಅತಿಥಿಗಳೊಂದಿಗೆ ಯುಗಾದಿ ಹಬ್ಬದ ಆಚರಣೆಯ ಮಹತ್ವ ಕುರಿತ ವಿಷಯ ವಿನಿಮಯ ಕಾರ್ಯಕ್ರಮ.

ಯುಗಾದಿ ಬೆಳಕು ಸಂಜೆ 4:30ಕ್ಕೆ : ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಪಂಡಿತ್ ಪುಟ್ಟರಾಜ್ ಗವಾಯಿ ಅಂಗವಿಕಲರ ಟ್ರಸ್ಟಿನ ಅಂಧ ಹೆಣ್ಣು ಮಕ್ಕಳ ಉಚಿತ ವಸತಿ ಸಂಗೀತ ಪಾಠಶಾಲೆಯ ಮಕ್ಕಳೊಂದಿಗೆ ಹಬ್ಬದ ಆಚರಣೆ.

ಡಾ. ಚಂದ್ರಶೇಖರ್ ಗುರೂಜಿ ಹಾಗೂ ಕಿರಗೂರಿನ ಗಯ್ಯಾಳಿಗಳು ಚಲನಚಿತ್ರದ ತಾರೆ ಮಾನಸ ಜೋಶಿಯವರ ಆತಿಥ್ಯದಲ್ಲಿ ಮಕ್ಕಳೊಂದಿಗೆ ಹಬ್ಬದ ಆಚರಣೆ ಮತ್ತು ಹಬ್ಬದೂಟದ ಸಂಭ್ರಮ.

ಸಂಜೆ 6ಕ್ಕೆ - ಜೋಗಿಲ ಸಿದ್ಧರಾಜು, ವಿನುತಾ ಬೂದಿಹಾಳ, ನಿರ್ಮಲ ಹಾಗೂ ರಾಜೇಶ್ ಅವರಿಂದ ಜಾನಪದ ಹಾಡುಗಳ ಜುಗಲ್ ಬಂದಿ.

English summary
Ugadi special programme in Sarala Jeevana channel on April 8.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada