»   » ಶ್ರೀಮುರಳಿ 'ಉಗ್ರಂ' ಸ್ಯಾಟಲೈಟ್ ರೈಟ್ಸ್ ಗೆ ಅಷ್ಟೇನಾ ಛೇ ಛೇ!

ಶ್ರೀಮುರಳಿ 'ಉಗ್ರಂ' ಸ್ಯಾಟಲೈಟ್ ರೈಟ್ಸ್ ಗೆ ಅಷ್ಟೇನಾ ಛೇ ಛೇ!

By: ಜೀವನರಸಿಕ
Subscribe to Filmibeat Kannada

2014ರ ಸೂಪರ್ ಡೂಪರ್ ಹಿಟ್ ಸಿನಿಮಾ 'ಉಗ್ರಂ'. ಸಿನಿಮಾ ಮಾಡಿದ ಸಕ್ಸಸ್ ಸೌಂಡ್ ಗೆ ಒಂದ್ಸಾರಿ ತೆಲುಗು ತಮಿಳು ಚಿತ್ರರಂಗದ ತಂತ್ರಜ್ಞರೇ'ಉಗ್ರಂ' ಸಿನಿಮಾ ಸಿಡಿ ತರಿಸಿ ನೋಡಿದ್ರು. ಹಾಗಿತ್ತು ಉಗ್ರಂ ಹವಾ.

2004ರಲ್ಲಿ 'ಕಂಠಿ' ಅನ್ನೋ ಖದರ್ ಫುಲ್ ಸಿನಿಮಾನಂತರ ಮರೆತೇ ಹೋದಂತಾಗಿದ್ದ ಶ್ರೀಮುರುಳಿ, 'ಉಗ್ರಂ' ಅನ್ನೋ ಫೀನಿಕ್ಸ್ ಮೂಲಕ ಎದ್ದು ಬಂದಿದ್ರು. ಅಂತಹಾ ಉಗ್ರಂ ಸುಲಭವಾಗಿ ಶತಕ ಹೊಡೀತು. ಶತಕ ಹೊಡೆದ ಸಿನಿಮಾಗಳಿಗೆ ಸಹಜವಾಗಿ ರು.1-2 ಕೋಟಿಗಳ ಲೆಕ್ಕದಲ್ಲಾದ್ರೂ ಸ್ಯಾಟಲೈಟ್ಸ್ ರೈಟ್ಸ್ ಸಿಕ್ಕುತ್ತೆ. [ಉಗ್ರಂ ಚಿತ್ರ ವಿಮರ್ಶೆ]

ಆದ್ರೆ ಉಗ್ರಂ ಸೇಲಾಗಿದ್ದು ಕೇವಲ ರು.37 ಲಕ್ಷಕ್ಕೆ ಅಂದ್ರೆ ನೀವೂ ನಂಬಲೇಬೇಕು. ಹಿಂದಿನ ಈಟಿವಿ ಕನ್ನಡ ಈಗಿನ ಕಲರ್ಸ್ ಕನ್ನಡ ಕೈಯ್ಯಲ್ಲಿರೋ 'ಉಗ್ರಂ' ಅಷ್ಟು ಕಡಿಮೆ ಮೊತ್ತಕ್ಕೆ ಯಾಕೆ ಸೇಲಾಯ್ತು ಅಂದ್ರೆ ಅದು ಹಂಗೆ ಅಂತಾರೆ ಗಾಂಧಿನಗರದವ್ರು.

ಸ್ಯಾಟಲೈಟ್ ರೈಟ್ಸ್ ಗೆ ಯಾಕಷ್ಟು ಕಮ್ಮಿ?

ಅಂದುಕೊಂಡಿದ್ದನ್ನ ಅಂದುಕೊಂಡ ಸಮಯದಲ್ಲಿ ಮಾಡಿಮುಗಿಸದಿದ್ರೆ ಹಿಂಗೆ ಆಗೋದು ಅಂತ ನಿರ್ಮಾಪಕರು ಕೈಕೈ ಹಿಸುಕಿಕೊಂಡಿದ್ದಾರೆ. ಆದರೆ ಸಿನಿಮಾ ನೂರು ದಿನಗಳಲ್ಲಿ ಕೊಳ್ಳೆ ಹೊಡೆದ ಕೋಟಿಗಳಲ್ಲಿ ಸ್ಯಾಟಲೈಟ್ಸ್ ರೈಟ್ಸ್ ಯಾಕೆ ಬಿಡಿ ಅನ್ನೋದು ಉಳಿದವರ ಮಾತು.

ರೀಮೇಕ್ ರೈಟ್ಸ್ ಇನ್ನೂ ಸೇಲಾಗಿಲ್ಲ

ಉಗ್ರಂ ರೀಮೇಕ್ ರೈಟ್ಸ್ ಗೆ ಡಿಮ್ಯಾಂಡ್ ಇದ್ದರೂ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹಕ್ಕುಗಳನ್ನ ಮಾರಾಟ ಮಾಡದೇ ಇರುವುದಕ್ಕೆ ನಿರ್ಧರಿಸಿದ್ದಾರೆ. ಹಾಗಂತ ಸ್ವತಃ ಪ್ರಶಾಂತ್ ನೀಲ್ ಅವರು ಫಿಲ್ಮಿಬೀಟ್ ಕನ್ನಡಕ್ಕೆ ಈ ಹಿಂದೊಮ್ಮೆ ತಿಳಿಸಿದ್ದರು.

ಬೇರೆ ಭಾಷೆಯಲ್ಲಿ ನಾವೇ ನಿರ್ಮಿಸುತ್ತೇವೆ

ಉಗ್ರಂ ರೀಮೇಕ್ ರೈಟ್ಸ್ ಗೆ ತುಂಬಾ ಡಿಮ್ಯಾಂಡ್ ಇದೆ. ಬೇರೆಯವರಿಗೆ ಇಂತಹ ಸೇಲಬಲ್ ಸಬ್ಜೆಕ್ಟ್ ಕೊಡುವ ಬದಲು, ನಾವೇ ಬೇರೆ ಭಾಷೆಯಲ್ಲಿ ನಿರ್ಮಾಣ ಮಾಡಬಹುದಲ್ಲಾ...! ಅದಕ್ಕೆ ರೀಮೇಕ್ ರೈಟ್ಸ್ ಸೇಲ್ ಮಾಡುವುದು ಬೇಡ ಅಂದುಕೊಂಡಿದ್ದೀವಿ'' ಅಂತಾರೆ ಪ್ರಶಾಂತ್ ನೀಲ್.

ಪರಭಾಷೆಯಲ್ಲಿ ನಿರ್ದೇಶಿಸಲಿರುವ ಪ್ರಶಾಂತ್

ಪರಭಾಷೆಯಲ್ಲಿ ಉಗ್ರಂ ರೀಮೇಕ್ ನ ನಿರ್ಮಾಣ ಮಾಡಬೇಕು ಅಂದುಕೊಂಡಿರುವ ಪ್ರಶಾಂತ್, ಡೈರೆಕ್ಟರ್ ಕ್ಯಾಪ್ ತೊಟ್ಟರೂ ಅಚ್ಚರಿ ಇಲ್ಲ. ಆದರೆ, ಅದಕ್ಕೂ ಮುಂಚೆ ಪ್ರಶಾಂತ್ ಒಪ್ಪಿಕೊಂಡಿರುವ ಯಶ್ ನಟನೆಯಲ್ಲಿ ಮೂಡಿಬರುವ 'ಕೆ.ಜಿ.ಎಫ್', ಪುನೀತ್ ಅಭಿನಯಿಸುವ 'ಆಹ್ವಾನ', ಉಗ್ರಂ ಸೀಕ್ವೆಲ್ 'ಉಗ್ರಂ ವೀರಂ' ಕಂಪ್ಲೀಟ್ ಆಗಬೇಕು.

ಟಾಲಿವುಡ್, ಕಾಲಿವುಡ್ ನಲ್ಲಿ ಭಾರಿ ಡಿಮಾಂಡ್

'ಟಾಲಿವುಡ್ ಮತ್ತು ಕಾಲಿವುಡ್ ನ ಲೀಡಿಂಗ್ ಹೀರೋಗಳು ಉಗ್ರಂ ಚಿತ್ರದ ರೀಮೇಕ್ ವರ್ಷನ್ ನಲ್ಲಿ ಮಿಂಚೋದಕ್ಕೆ ರೆಡಿಯಿದ್ದಾರೆ. ಆದರೆ ಒಂದೇ ವರ್ಷದಲ್ಲಿ, ಒಂದೇ ಚಿತ್ರವನ್ನ ಯಾರೂ ರೀಮೇಕ್ ಮಾಡುವುದಿಲ್ಲ, ಸ್ವಲ್ಪ ದಿನದಲ್ಲೇ ಟಾಪ್ ಹೀರೋ ಒಬ್ಬರು ರೀಮೇಕ್ ವರ್ಷನ್ ಅನೌನ್ಸ್ ಮಾಡ್ತಾರೆ'' ಅಂತ ಪ್ರಶಾಂತ್ ನೀಲ್ ಹೇಳಿದ್ದರು.

English summary
Kannada movie Ugramm satellite rights sold for moderate price. According to sources the movie rights are sold for only Rs.35 lakhs. The thriller Action film directed by debutant Prashanth Neel and produced under the banner Inkfinite Pictures. It stars Srimurali and Haripriya as the lead pair.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada