For Quick Alerts
  ALLOW NOTIFICATIONS  
  For Daily Alerts

  'ಡಿ' ಬಾಸ್ ದರ್ಶನ್ ಮೇಲೆ ವಿ.ಹರಿಕೃಷ್ಣ ತೋರಿದ ಗೌರವದ ಪರಿ ಇದು!

  |

  ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಕಾಂಬಿನೇಷನ್ ನಂತರ ಹೆಚ್ಚು ಮ್ಯಾಜಿಕ್ ಕ್ರಿಯೇಟ್ ಮಾಡಿದ್ದು ವಿ.ಹರಿಕೃಷ್ಣ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿ.

  ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ರವರ ಬಹುತೇಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವುದು ವಿ.ಹರಿಕೃಷ್ಣ. ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದ ಹಾಡುಗಳು ಮಕಾಡೆ ಮಲಗಿದ ಉದಾಹರಣೆಯೇ ಇಲ್ಲ.

  ದರ್ಶನ್ ಹಾಗೂ ವಿ.ಹರಿಕೃಷ್ಣ ನಡುವಿನ ಕುಚ್ಚಿಕ್ಕೂ ಕಥೆ 'ವೀಕೆಂಡ್ ವಿತ್ ರಮೇಶ್' ವೇದಿಕೆಯಲ್ಲಿ ಅನಾವರಣವಾಯಿತು.

  'ವೀಕೆಂಡ್ ಟೆಂಟ್' ಮೇಲೆ ದರ್ಶನ್ ಕಾಣಿಸಿಕೊಳ್ಳುತ್ತಿದ್ದ ಹಾಗೆ ವಿ.ಹರಿಕೃಷ್ಣ ಎದ್ದು ನಿಂತು ಗೌರವ ನೀಡಿದರು. ಅಷ್ಟಕ್ಕೂ, ದರ್ಶನ್ ಗೆ ಹರಿಕೃಷ್ಣ ಪರಿಚಯ ಹೇಗಾಯ್ತು.? ಹರಿಕೃಷ್ಣ ರವರ ಸಿನಿಮಾ ಜರ್ನಿಯಲ್ಲಿ ದರ್ಶನ್ ಬಹುಮುಖ್ಯ ಪಾತ್ರ ವಹಿಸಿರುವುದ್ಹೇಗೆ? ಹರಿಕೃಷ್ಣ ಬಗ್ಗೆ ದರ್ಶನ್ ಏನ್ ಹೇಳುತ್ತಾರೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಓದಿರಿ....

  ಅಣಜಿ ನಾಗರಾಜ್ ಮೂಲಕ ದರ್ಶನ್ ಪರಿಚಯ

  ಅಣಜಿ ನಾಗರಾಜ್ ಮೂಲಕ ದರ್ಶನ್ ಪರಿಚಯ

  ''ನಾನು ಆಗ ರವಿ ಸರ್ ಜೊತೆ ಕೆಲಸ ಮಾಡುತ್ತಿದೆ. ಆ ಟೈಂ ನಲ್ಲಿ ಅಣಜಿ ನಾಗರಾಜ್ ರಿಂದ 'ದರ್ಶನ್' ಪರಿಚಯ ಆದರು. ಅವರ 'ಜೊತೆ ಜೊತೆಯಲಿ' ಸಿನಿಮಾಗೆ ಮ್ಯೂಸಿಕ್ ಮಾಡುವ ಅವಕಾಶ ಬಂತು. ಸಿನಿಮಾದ ಕಥೆ ತುಂಬ ಇಷ್ಟ ಆಯಿತು. ಇದು ನನ್ನನ್ನೇ ಲಾಂಚ್ ಮಾಡುವುದಕ್ಕೆ ಮಾಡಿರುವ ಕಥೆ ಅಂತ ಅಂದುಕೊಂಡು ಕೆಲಸ ಶುರು ಮಾಡಿದೆ'' - ವಿ.ಹರಿಕೃಷ್ಣ, ಸಂಗೀತ ನಿರ್ದೇಶಕ

  ಒಟ್ಟಿಗೆ ಮೂರು ಸಿನಿಮಾ ಕೊಟ್ಟರು

  ಒಟ್ಟಿಗೆ ಮೂರು ಸಿನಿಮಾ ಕೊಟ್ಟರು

  ''ಜೊತೆ ಜೊತೆಯಲಿ' ಸಿನಿಮಾ ನಂತರ ಮತ್ತೆ ಅವರೇ ಮೂರು ಸಿನಿಮಾಗಳನ್ನ ಕೊಟ್ಟರು. 'ಭೂಪತಿ', 'ಸ್ನೇಹನಾ ಪ್ರೀತಿನಾ' ಹಾಗೂ 'ಗಜ' ಚಿತ್ರಗಳಿಗೆ ನೀನೇ ಮ್ಯೂಸಿಕ್ ಮಾಡು ಎಂದರು. ನಾನು ಅವರ ಜೊತೆ ಕೆಲಸ ಮಾಡಿಕೊಂಡಿದ್ದೆ'' - ವಿ.ಹರಿಕೃಷ್ಣ, ಸಂಗೀತ ನಿರ್ದೇಶಕ

  ಎಲ್ಲ ಹೀರೋಗಳ ಸಿನಿಮಾ ಮಾಡು ಎಂದರು

  ಎಲ್ಲ ಹೀರೋಗಳ ಸಿನಿಮಾ ಮಾಡು ಎಂದರು

  ''ಒಂದ್ ಸಾರಿ ಕರೆದು, 'ನೀನು ನನ್ನ ಸಿನಿಮಾ ಮಾತ್ರ ಯಾಕೆ ಮಾಡುತ್ತಿದೀಯಾ' ಅಂತ ಕೇಳಿದರು. ಹಾಗೆಲ್ಲ ಮಾಡಿದರೆ, ಗಾಂಧಿನಗರದಲ್ಲಿ ನೀನು ನನಗೆ ಮಾತ್ರ ಅಂತ ಬ್ರ್ಯಾಂಡ್ ಮಾಡಿ ಬಿಡುತ್ತಾರೆ. 'ಎಲ್ಲ ಹೀರೋಗಳ ಸಿನಿಮಾ ಮಾಡು' ಅಂತ ಹೇಳಿದರು. ಒಬ್ಬ ಹೀರೋ ಆಗಿ ಬೇರೆ ಹೀರೋಗಳ ಸಿನಿಮಾ ಮಾಡು ಅಂದರು'' - ವಿ.ಹರಿಕೃಷ್ಣ, ಸಂಗೀತ ನಿರ್ದೇಶಕ

  'ದರ್ಶನ್' ಎನ್ನುವುದು ಹೆಸರಲ್ಲ, ಅದೊಂದು 'ಎಮೋಷನ್'

  'ದರ್ಶನ್' ಎನ್ನುವುದು ಹೆಸರಲ್ಲ, ಅದೊಂದು 'ಎಮೋಷನ್'

  ''ದರ್ಶನ್' ಎನ್ನುವುದು ಹೆಸರಲ್ಲ, ನನ್ನ ಜೀವನಕ್ಕೆ ಅದೊಂದು ಎಮೋಷನ್, ಅವರದ್ದು ಎಷ್ಟು ದೊಡ್ಡ ಗುಣ ಅಂದರೆ, ಅವರ ಸಿನಿಮಾಗೆ ನನ್ನ ಪಾರ್ಟ್ನರ್ ಆಗಿ ಮಾಡಿದರು. ನನ್ನ ಪ್ರೊಡ್ಯೂಸರ್ ಮಾಡಿದರು, 'ಡಿ'ಬೀಟ್ಸ್ ಎನ್ನುವ ಸಂಸ್ಥೆ ಮಾಡು ಅಂತ ಹೇಳಿದರು'' - ವಿ.ಹರಿಕೃಷ್ಣ, ಸಂಗೀತ ನಿರ್ದೇಶಕ

  ವಿ.ಹರಿಕೃಷ್ಣ ನನಗೆ 'ಬ್ರದರ್'

  ವಿ.ಹರಿಕೃಷ್ಣ ನನಗೆ 'ಬ್ರದರ್'

  ''ಹರಿಕೃಷ್ಣ ನಮ್ಮ ಬ್ಯಾನರ್ ನ ಮೊದಲ ಸಿನಿಮಾ 'ಜೊತೆ ಜೊತೆಯಲಿ' ಯಿಂದ ಹಿಡಿದು ತುಂಬ ಸಿನಿಮಾಗಳನ್ನ ಒಟ್ಟಿಗೆ ಮಾಡಿಕೊಂಡು ಬಂದಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಎನ್ನುವುದಕ್ಕಿಂತ ಅವರು ತುಂಬ ಒಳ್ಳೆ ಮನಸ್ಸಿರುವ ವ್ಯಕ್ತಿ'' - ದರ್ಶನ್, ನಟ

  'ಹರಿ ಸಹ ದರ್ಶನ್ ತರಹ'

  'ಹರಿ ಸಹ ದರ್ಶನ್ ತರಹ'

  ''ಹರಿ ನಮ್ಮ ಸಿನಿಮಾಗೆ ಮ್ಯೂಸಿಕ್ ಮಾಡಿದವರು ಮಾತ್ರ ಅಲ್ಲ, ಅವರು ನಮಗೆ ಎಲ್ಲಾ. ನನಗೆ ಫ್ರೆಂಡ್, ಗುರು ಎಲ್ಲದಕ್ಕಿಂತ ಹೆಚ್ಚಾಗಿ ಹರಿ ಸಹ ದರ್ಶನ್ ತರಹ'' - ದಿನಕರ್ ತೂಗುದೀಪ, ನಿರ್ದೇಶಕ

  ನನಗೆ 'ಈ ಸೀಟ್' ಕೊಟ್ಟಿರುವುದು 'ಅವರೇ'

  ನನಗೆ 'ಈ ಸೀಟ್' ಕೊಟ್ಟಿರುವುದು 'ಅವರೇ'

  ಎಲ್ಲರನ್ನ ಕಾಪಾಡಬೇಕು... ಎನ್ನುವ ಗುಣ 'ತೂಗುದೀಪ' ಮನೆಯಲ್ಲಿಯೇ ಇದೆ. ನನಗೆ ಈ ಸೀಟ್ ಕೊಟ್ಟಿದ್ದು ಅವರೇ ಅಂತ ಹೇಳಿದ ವಿ.ಹರಿಕೃಷ್ಣ ತಮ್ಮ ಈ ಸಾಧನೆಯನ್ನ ದರ್ಶನ್ ಅವರಿಗೆ ಅರ್ಪಿಸಿದರು.

  English summary
  V Harikrishna speaks about Darshan in Weekend with Ramesh-3

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X