»   » 'ಜ್ಯೂನಿಯರ್ ಡ್ಯಾನ್ಸಿಂಗ್ ಸ್ಟಾರ್'ಗೂ ರವಿಮಾಮ ಜಡ್ಜ್

'ಜ್ಯೂನಿಯರ್ ಡ್ಯಾನ್ಸಿಂಗ್ ಸ್ಟಾರ್'ಗೂ ರವಿಮಾಮ ಜಡ್ಜ್

Posted By:
Subscribe to Filmibeat Kannada

ಕಿರುತೆರೆಯಲ್ಲಿ ಬೆಳ್ಳಿತೆರೆಯ ಕಲಾವಿದರು ಕಾಣಿಸಿಕೊಳ್ಳೋದು ಈಗ ಕಾಮನ್ ಆಗ್ಬಿಟ್ಟಿದೆ. ಕೆಲವರು ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಕಣ್ಮರೆಯಾದ್ರೆ, ಇನ್ನೂ ಕೆಲವರು ರಿಯಾಲಿಟಿ ಶೋಗಳಲ್ಲೇ ಬಿಜಿಯಾಗಿರುತ್ತಾರೆ. ಅದೇ ಸಾಲಿಗೆ ಈಗ ಸೇರುತ್ತಿರುವವರು ಕ್ರೇಜಿ ಸ್ಟಾರ್ ರವಿಚಂದ್ರನ್.

ಹೌದು, ಕಲರ್ಸ್ ಕನ್ನಡ (ಈಟಿವಿ ಕನ್ನಡ) ದಲ್ಲಿ ಪ್ರಸಾರವಾಗುತ್ತಿದ್ದ, 'ಡಾನ್ಸಿಂಗ್ ಸ್ಟಾರ್-2' ಮುಕ್ತಾಯದ ಹಂತಕ್ಕೆ ತಲುಪಿರುವುದು ನಿಮಗೆಲ್ಲಾ ಗೊತ್ತೆ ಇದೆ. 'ಡ್ಯಾನ್ಸಿಂಗ್ ಸ್ಟಾರ್-2' ವಿನ್ನರ್, ಮಾಸ್ಟರ್ ಆನಂದ್ ಅನ್ನೋದು ಈಗ ಜಗಜ್ಜಾಹೀರಾಗಿರುವ ಸಂಗತಿ. ಇದೇ ವಾರ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಪ್ರಸಾರವಾಗಲಿದೆ.

v-ravichandran-to-judge-junior-dancing-star

'ಡ್ಯಾನ್ಸಿಂಗ್ ಸ್ಟಾರ್-2' ಮುಗಿದ ಬಳಿಕ ಮುಂದೇನು? ಅನ್ನುವ ಪ್ರಶ್ನೆಗೆ ಕಲರ್ಸ್ ಕನ್ನಡ ವಾಹಿನಿ 'ಜ್ಯೂನಿಯರ್ ಡ್ಯಾನ್ಸಿಂಗ್ ಸ್ಟಾರ್' ಅಂತ ಉತ್ತರ ಕೊಟ್ಟಿದೆ. ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರವಿಚಂದ್ರನ್ ಮುಂದುವರಿಯಲಿದ್ದಾರೆ. [ಕಿರುತೆರೆಗೆ ಅಡಿಯಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್]

ವಿಶೇಷ ಅಂದ್ರೆ, ರವಿಚಂದ್ರನ್ ಜೊತೆ ತೀರ್ಪುಗಾರರಾಗಿದ್ದ ಪ್ರಿಯಾಮಣಿ ಮತ್ತು ಮಯೂರಿ 'ಜ್ಯೂನಿಯರ್ ಡ್ಯಾನ್ಸಿಂಗ್ ಸ್ಟಾರ್' ಕಾರ್ಯಕ್ರಮದಲ್ಲಿ ಮಾರ್ಕ್ಸ್ ನೀಡಲಿದ್ದಾರೆ. [ಕನ್ನಡ ಕಿರುತೆರೆಗೆ ಕನ್ಯಾಮಣಿ ಪ್ರಿಯಾಮಣಿ ಎಂಟ್ರಿ]

ಮನರಂಜನೆಯ ರಸದೌತಣ ನೀಡ್ತಿದ್ದ 'ಡ್ಯಾನ್ಸಿಂಗ್ ಸ್ಟಾರ್-2' ಮುಗಿದೇ ಹೋಯ್ತಲ್ಲಾ ಅಂತ ಗೊಣಗುತ್ತಿದ್ದವರಿಗೆ 'ಜ್ಯೂನಿಯರ್ ಡ್ಯಾನ್ಸಿಂಗ್ ಸ್ಟಾರ್' ಹಬ್ಬದೂಟ ಸಿಕ್ಕಿದ ಹಾಗಾಗಿದೆ.

English summary
Crazy Star V.Ravichandran is roped into judge 'Junior dancing star' show along with Actress Priyamani and Mayuri which will be aired in Colours Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada