For Quick Alerts
  ALLOW NOTIFICATIONS  
  For Daily Alerts

  ನಟಿ ವೈಷ್ಣವಿ ಗೌಡರನ್ನು ಕುಣಿಸುತ್ತಿದೆ ರಾ.. ರಾ.. ರಕ್ಕಮ್ಮ ಸಾಂಗ್: ಏನಂದ್ರು ನೆಟ್ಟಿಗರು?

  By ಎಸ್ ಸುಮಂತ್
  |

  ರಾ.. ರಾ.. ರಕ್ಕಮ್ಮ.. ಅದ್ಯಾವಾಗ 'ವಿಕ್ರಾಂತ್ ರೋಣ' ಟೀಂನಿಂದ ಈ ಹಾಡು ಹೊರಗೆ ಬಂತೋ ಯಾರ ಕೈಕಾಲು ನಿಲ್ಲುತ್ತಿಲ್ಲ. ಆ ಸಾಂಗ್ ಅಷ್ಟು ಕಿಕ್ ಕೊಟ್ಟಿದೆ. ಅಷ್ಟು ಜನರಿಗೆ ಸಖತ್ ಜೋಷ್ ಕೊಟ್ಟಿದೆ. ಈ ಹಾಡಿನ ಮತ್ತಿಗೆ ಎಲ್ಲರೂ ಒಂದೆರಡು ಭರ್ಜರಿ ಸ್ಟೆಪ್ ಹಾಕುತ್ತಿದ್ದಾರೆ. ಆ ಸಾಲಿಗೆ ಇದೀಗ ವೈಷ್ಣವಿ ಕೂಡ ಸೇರಿದ್ದಾರೆ. ರಾ.. ರಾ.. ರಕ್ಕಮ್ಮ ಅಂತ ಕುಣಿದು ಪೋಸ್ಟ್ ಮಾಡಿದ್ದಾರೆ.

  ರೀಲ್ಸ್ ಮಾಡೋದು ಈಗ ಕ್ರೇಜ್ ಆಗಿ ಬಿಟ್ಟಿದೆ. ಹೀಗಾಗಿ ಆ ರೀಲ್ಸ್‌ಗೆ ಇತಿಮಿತಿ ಇಲ್ಲ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳು ಕೂಡ ಸೈಕಲ್ ಗ್ಯಾಪ್‌ನಲ್ಲಿ ರೀಲ್ಸ್ ಮಾಡುತ್ತಾ ಇರುತ್ತಾರೆ. ಆದರೆ ನಟ ಕಿಚ್ಚ ಸುದೀಪ್, ಸ್ಯಾಂಡಲ್‌ವುಡ್‌ನ ಬಾದ್‌ಶಾ ರೀಲ್ಸ್ ಮಾಡ್ತಾರೆ ಅಂದರೆ ಸುಮ್ನೇನಾ..? ರಾ..ರಾ..ರಕ್ಕಮ್ಮ ಹಾಡು ಸುದೀಪ್ ಅವರನ್ನು ಕಾಡಿರೋದು ಸತ್ಯ. ಆ ಹಾಡಿಗೆ ಇಂದು ರೀಲ್ಸ್ ಮಾಡಿ ಅವರು ಕೂಡ ಪೋಸ್ಟ್ ಮಾಡಿದ್ದಾರೆ.

  ರಾ…ರಾ…ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ವೈಷ್ಣವಿ

  ರಾ..ರಾ..ರಕ್ಕಮ್ಮ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ರೆಸ್ಪಾನ್ಸ್ ಪಡೆದುಕೊಂಡಿದೆ. ಹಾಗೇ ಕುಳಿತಿದ್ದವರನ್ನು ಕುಣಿಸುತ್ತಿದೆ. ಇಷ್ಟು ಕ್ರೇಜ್ ಇರುವ ಹಾಡಿಗೆ ವೈಷ್ಣವಿ ಕುಣಿದಿದ್ದು, ಮತ್ತಷ್ಟು ಕಿಕ್ ಏರಿಸಿದೆ. ಬ್ಲಾಕ್ ಡ್ರೆಸ್ ಹಾಕಿ ಹೆಜ್ಜೆ ಹಾಕಿರುವ ವೈಷ್ಣವಿಯ ಈ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಈ ರೀಲ್ಸ್ ಅನ್ನು ಶೇರ್ ಮಾಡುತ್ತಿದ್ದಾರೆ.

  ರಕ್ಕಮ್ಮನ ಕರೆದ ಸೆಲೆಬ್ರೆಟಿಗಳು

  ರಕ್ಕಮ್ಮನ ಕರೆದ ಸೆಲೆಬ್ರೆಟಿಗಳು

  ಈಗಂತು ರೀಲ್ಸ್‌ನಲ್ಲಿ ಹಳೇ ಹಾಡು, ಹೊಸ ಹಾಡು ಎಲ್ಲವೂ ಸಿಕ್ಕಿ ಬಿಡುತ್ತದೆ. ಆದರೆ ಎಲ್ಲರ ಮನಸ್ಸಿಗೂ ಇಷ್ಟವಾಗುವ ಹಾಡು ಸ್ವಲ್ಪ ಕಡಿಮೆಯೇ. ಆದರೆ ವಿಕ್ರಾಂತ್ ರೋಣನ ಅಂಗಳದಿಂದ ಬಂದಂತ ರಾ..ರಾ..ರಕ್ಕಮ್ಮ ಹಾಡಂತು ಇಂತಿಷ್ಟು ಮಂದಿ ಅಂತ ಅಲ್ಲ. ಎಲ್ಲರನ್ನೂ ಕಾಡಿ ಕೆಂಗಡಿಸಿದೆ. ಅದರಲ್ಲೂ ಸೆಲೆಬ್ರೆಟಿಗಳೆಲ್ಲಾ ರಕ್ಕಮ್ಮನ ಹಿಂದೆ ಬಿದ್ದಿದ್ದಾರೆ. ಹಾಡಿಗೆ ಒಂದೆರಡು ಸ್ಟೆಪ್ ಹಾಕಿದ್ದಾರೆ. ಅದರಲ್ಲಿ ವೈಷ್ಣವಿ, ಅಕುಲ್ ಬಾಲಾಜಿ, ಅರವಿಂದ್, ದಿವ್ಯಾ, ಶ್ವೇತಾ ಚಂಗಪ್ಪ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲ ಡ್ಯಾನ್ಸ್ ಕ್ಲಾಸ್‌ಗಳಲ್ಲಿ ರಾ..ರಾ..ರಕ್ಕಮ್ಮ ರಾರಾಜಿಸುತ್ತಿದೆ. ಜೊತೆಗೆ ರೀಲ್ಸ್ ಪ್ರಿಯರು 'ವಿಕ್ರಾಂತ್ ರೋಣ'ನ ಹುಡುಗಿಯ ಹಾಡನ್ನೇ ಆಯ್ದುಕೊಳ್ಳುತ್ತಿದ್ದಾರೆ.

  ವೈಷ್ಣವಿ ಡ್ಯಾನ್ಸಿಗೆ ಫುಲ್ ಮಾರ್ಕ್ಸ್

  ವೈಷ್ಣವಿ ಡ್ಯಾನ್ಸಿಗೆ ಫುಲ್ ಮಾರ್ಕ್ಸ್

  ವಿಕ್ರಾಂತ್ ರೋಣ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಹಾಡು ದುಪ್ಪುಟ್ಟು ಮಾಡಿದೆ. ಅದರಲ್ಲೂ ರಾ..ರಾ..ರಕ್ಕಮ್ಮ ಹಾಡಿನಲ್ಲಿ ಸುದೀಪ್ ಸ್ಟೆಪ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡಿಗೆ ಸ್ಟೆಪ್ ಹಾಕುವುದು ತುಂಬಾ ಸುಲಭವಂತು ಅಲ್ಲ. ಆದರೆ ವೈಷ್ಣವಿ ಅದಕ್ಕೆ ಮ್ಯಾಚ್ ಆಗುವಂತೆ ಹೆಜ್ಜೆ ಹಾಕಿದ್ದಾರೆ. ಮತ್ತೆ ಮತ್ತೆ ನೋಡಬೇಕೆನ್ನಿಸುವಷ್ಟು ಸೊಂಟ ಬಳುಕಿಸಿದ್ದಾರೆ. ಇದೇ ಕಾರಣಕ್ಕೆ ನೆಟ್ಟಿಗರ ಮನಸ್ಸು ಕದ್ದಿದ್ದು, ಜಾಕ್ವೆಲಿನ್‌ಗಿಂತ ಸಖತ್ತಾಗಿ ಕುಣಿದಿದ್ದೀರಾ ಅಂತ ಹೊಗಳಿದ್ದಾರೆ.

  ಹೊಸ ಮನೆಯಲ್ಲಿ ರೀಲ್ಸ್ ಸುರಿಮಳೆ

  ಹೊಸ ಮನೆಯಲ್ಲಿ ರೀಲ್ಸ್ ಸುರಿಮಳೆ

  ವೈಷ್ಣವಿ ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ. ಅಷ್ಟೇ ಅಲ್ಲ ತಮ್ಮದೆ ಆದ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿರುವ ವೈಷ್ಣವಿ ಗೌಡ ಹೊಸ ಹೊಸ ವಿಡಿಯೋಗಳನ್ನು ಮಾಡಿ ಹಾಕುತ್ತಿರುತ್ತಾರೆ. ಅದರಲ್ಲೂ ಶಾಪಿಂಗ್, ಮೇಕಪ್ ಹೀಗೆ ಹೆಣ್ಣು ಮಕ್ಕಳಿಗೆ ಅಗತ್ಯವೆನಿಸುವ, ತುಂಬಾ ಸುಲಭದಲ್ಲಿ ಸಿಗುವ ವಸ್ತುಗಳ ಬಗ್ಗೆ ವಿಡಿಯೋ ಮಾಡಿ ಹಾಕುತ್ತಿರುತ್ತಾರೆ. ಅದರಿಂದಲೂ ಒಳ್ಳೆ ಸಂಪಾದನೆ ಮಾಡುತ್ತಾರೆ. ಇತ್ತೀಚೆಗೆ ಹೊಸ ಮನೆ ಖರೀದಿಸಿ, ಗೃಹ ಪ್ರವೇಶ ಕೂಡ ಮಾಡಿದ್ದಾರೆ. ಕಂಪ್ಲೀಟ್ ಆಗಿ ಮನೆ ನೋಡಲು ಸಾಧ್ಯವಾಗದೆ ಇದ್ದರೂ, ಅವರು ಮಾಡುವ ರೀಲ್ಸ್‌ನಲ್ಲಿ ಮನೆಯ ಅಂದ ಕಾಣುತ್ತಿದೆ.

  English summary
  Vaishnavi Gowda Dance On Kichcha Sudeep Starrer Ra Ra Rakkamma Song, Know More.
  Saturday, May 28, 2022, 9:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X