For Quick Alerts
  ALLOW NOTIFICATIONS  
  For Daily Alerts

  'ಮಗಳು ಜಾನಕಿ': ಮರಳುಗಾಡಿನಲ್ಲಿ ವೀಕ್ಷಕರಿಗೆ ಒಯಾಸಿಸ್ ಸಿಕ್ಕ ಹಾಗಿದೆ.!

  By Harshitha
  |

  ನಾಲ್ಕೈದು ವರ್ಷಗಳ ಗ್ಯಾಪ್ ಬಳಿಕ ಟಿ.ಎನ್.ಸೀತಾರಾಮ್ ಮತ್ತೆ ಕರಿ ಕೋಟು ಧರಿಸಿ ಕಿರುತೆರೆ ಕಡೆಗೆ ಮುಖ ಮಾಡಿದ್ದಾರೆ. ಕಿರುತೆರೆ ವೀಕ್ಷಕರ ನಾಡಿಮಿಡಿತ ಅರಿತಿರುವ ಟಿ.ಎನ್.ಎಸ್ ಅಪ್ಪ-ಮಗಳ ಬಾಂಧವ್ಯ ಹೊಂದಿರುವ 'ಮಗಳು ಜಾನಕಿ'ಯ ಕಥೆ ಹೊತ್ತು ತಂದಿದ್ದಾರೆ.

  ಬರೀ ಕಿಡ್ನ್ಯಾಪ್... ಮನೆಯಲ್ಲೇ ಅಡಗಿ ಕುಳಿತಿರುವ ಲೇಡಿ ವಿಲನ್ ಸುತ್ತ ಹೆಣೆದಿರುವ ಅಬ್ಬರ, ಆಡಂಬರದ ಸೀರಿಯಲ್ ಗಳನ್ನು ನೋಡಿ ನೋಡಿ ತಲೆ ಚಚ್ಚಿಕೊಳ್ತಿದ್ದ ವೀಕ್ಷಕರು 'ಮಗಳು ಜಾನಕಿ' ನೋಡಿ ಅಕ್ಷರಶಃ ಸಂತಸ ಪಟ್ಟಿದ್ದಾರೆ.

  'ಮಗಳು ಜಾನಕಿ' ಧಾರಾವಾಹಿ ಶುರುವಾಗಿ ಒಂದು ವಾರ ಆಗಿದೆ ಅಷ್ಟೆ. ಅಷ್ಟು ಬೇಗ ಕಥೆ ಹೋಗುತ್ತಿರುವ ಸ್ಪೀಡ್ ಕಂಡು ವೀಕ್ಷಕರು ಹರ್ಷಚಿತ್ತರಾಗಿದ್ದಾರೆ. ರಬ್ಬರ್ ಎಳೆದಂತೆ ಎಳೆಯುವ ಸೀರಿಯಲ್ ಗಳ ನಡುವೆ 'ಮಗಳು ಜಾನಕಿ' ಬಂದಿರುವುದು ವೀಕ್ಷಕರಿಗೆ ಮರಳುಗಾಡಿನಲ್ಲಿ ಒಯಾಸಿಸ್ ಸಿಕ್ಕ ಹಾಗಾಗಿದೆ. ಮುಂದೆ ಓದಿರಿ....

  ಭೇಷ್ ಎನ್ನುತ್ತಿದ್ದಾರೆ ವೀಕ್ಷಕರು

  ಭೇಷ್ ಎನ್ನುತ್ತಿದ್ದಾರೆ ವೀಕ್ಷಕರು

  'ಮಗಳು ಜಾನಕಿ' ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಅಂತಹ ಕಾಮೆಂಟ್ ಗಳ ಕಲೆಕ್ಷನ್ ಇಲ್ಲಿದೆ ಓದಿರಿ...

  ಕಡೆಗೂ ಚುನಾವಣೆಗೆ ಚಂದು ಬಾರ್ಗಿ ನಾಮಿನೇಷನ್ ಫೈಲ್ ಮಾಡಲೇ ಇಲ್ಲ.!ಕಡೆಗೂ ಚುನಾವಣೆಗೆ ಚಂದು ಬಾರ್ಗಿ ನಾಮಿನೇಷನ್ ಫೈಲ್ ಮಾಡಲೇ ಇಲ್ಲ.!

  ಸೂಪರ್ ಸೀರಿಯಲ್

  ಸೂಪರ್ ಸೀರಿಯಲ್

  'ಮಗಳು ಜಾನಕಿ' ಉತ್ತಮ ಧಾರಾವಾಹಿ, ಸೂಪರ್ ಸೀರಿಯಲ್ ಎನ್ನುವುದೇ ಬಹುತೇಕರ ಅಭಿಪ್ರಾಯ.

  ಸೂಪರ್ ಸ್ಪೀಡ್ ಆಗಿ ಸಾಗುತ್ತಿದೆ 'ಮಗಳು ಜಾನಕಿ' ಸೀರಿಯಲ್ ಕಥೆಸೂಪರ್ ಸ್ಪೀಡ್ ಆಗಿ ಸಾಗುತ್ತಿದೆ 'ಮಗಳು ಜಾನಕಿ' ಸೀರಿಯಲ್ ಕಥೆ

  ಒಯಾಸಿಸ್ ತರಹ

  ಒಯಾಸಿಸ್ ತರಹ

  ಲಾಜಿಕ್ ಇಲ್ಲದೆ, ಹೇಗೆಂದರೆ ಹಾಗೆ ಎಳೆದಾಡುವ, ಸ್ವಲ್ಪವೂ ಸಹಜತೆ ಇಲ್ಲದ ಧಾರಾವಾಹಿಗಳನ್ನು ನೋಡಿ ಬೇಸೆತ್ತಿದ್ದ ಮನಕ್ಕೆ ಸೀತಾರಾಮ್ ಧಾರಾವಾಹಿ ಖುಷಿ ಕೊಟ್ಟಿದೆ ಅಂತಿದ್ದಾರೆ ವೀಕ್ಷಕರು.

  'ಮಗಳು ಜಾನಕಿ': ಮೊದಲ ಸಂಚಿಕೆಯಲ್ಲೇ ವೀಕ್ಷಕರನ್ನು ಕಟ್ಟಿಹಾಕಿ ಕೂರಿಸಿದ ಟಿ.ಎನ್.ಎಸ್'ಮಗಳು ಜಾನಕಿ': ಮೊದಲ ಸಂಚಿಕೆಯಲ್ಲೇ ವೀಕ್ಷಕರನ್ನು ಕಟ್ಟಿಹಾಕಿ ಕೂರಿಸಿದ ಟಿ.ಎನ್.ಎಸ್

  ಬೇರೆ ಧಾರಾವಾಹಿ ಆಗಿದ್ರೆ...

  ಬೇರೆ ಧಾರಾವಾಹಿ ಆಗಿದ್ರೆ...

  'ಮಗಳು ಜಾನಕಿ'ಯ ಕಥೆ ಬೇರೆಯವರಿಗೆ ಸಿಕ್ಕಿದ್ರೆ, ಒಂದು ದಿನದ ಕಥೆಯನ್ನ 50 ಸಂಚಿಕೆ ಮಾಡ್ತಿದ್ರೇನೋ ಎಂಬುದು ಗೌರವ್ ಅವರ ಅಭಿಪ್ರಾಯ.

  ಸಂಜೀವಿನಿ ಸಿಕ್ಕ ಹಾಗೆ.!

  ಸಂಜೀವಿನಿ ಸಿಕ್ಕ ಹಾಗೆ.!

  'ಪುಟ್ಟಗೌರಿ ಮದುವೆ' ಅಂತಹ ಸ್ಲೋ ಮೋಷನ್ ಧಾರಾವಾಹಿಗಳನ್ನ ನೋಡಿ ಬೇಸೆತ್ತಿದ್ದ ಜನತೆಗೆ 'ಮಗಳು ಜಾನಕಿ' ಸಂಜೀವಿನಿ ಆಗಿದೆ.

  English summary
  Viewers have taken Colors Super official Facebook page to appreciate TN Seetharam's 'Magalu Janaki' serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X