For Quick Alerts
  ALLOW NOTIFICATIONS  
  For Daily Alerts

  ವೀಕೆಂಡ್ ವಿತ್ ರಮೇಶ್ ಶೋಗೆ ಬಂದ ಶರಣ್ ಬಗ್ಗೆ ವೀಕ್ಷಕರು ಏನ್ ಹೇಳುತ್ತಿದ್ದಾರೆ?

  |
  Weekend With Ramesh Season 4: ವೀಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶರಣ್ | FILMIBEAT KANNADA

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಕನ್ನಡ ನಟ ಶರಣ್ ಭಾಗವಹಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡೂ ದಿನವೂ ಶರಣ್ ಅವರ ಸಂಚಿಕೆ ಪ್ರಸಾರವಾಗಲಿದೆ. ಪ್ರತಿ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಕೆಲವರನ್ನ ಸಾಧಕರ ಕುರ್ಚಿಯಲ್ಲಿ ಕೂರಿಸಿದ್ದಕ್ಕೆ ವೀಕ್ಷಕರು ಕೆಂಡಾಮಂಡಲರಾಗಿದ್ದರು.

  ಅದೇ ರೀತಿ ಕೆಲವು ಸಾಧಕರ ಬಗ್ಗೆ ಖುಷಿಯೂ ವ್ಯಕ್ತಪಡಿಸಿದ್ದಾರೆ. ಅರ್ಹ ವ್ಯಕ್ತಿಗಳು ಬಂದಾಗ ಸ್ವಾಗತಿಸುವುದು ಮತ್ತು ಅದಕ್ಕೆ ಸೂಕ್ತವಲ್ಲದ ವ್ಯಕ್ತಿಗಳು ಬಂದಾಗ ವಿರೋಧಿಸುವುದು ಸಾಮಾನ್ಯವಾಗಿದೆ.

  ವೀಕೆಂಡ್ ಸಾಧಕರ ಸೀಟಿನಲ್ಲಿ ಈ ವಾರ ಕನ್ನಡದ ಖ್ಯಾತ ನಟ

  ನಿರೀಕ್ಷೆಯಂತೆ ಶರಣ್ ಅವರ ಪ್ರೋಮೋ ಬರುತ್ತಿದ್ದಂತೆ ವೀಕ್ಷಕರು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ಮಾಡುವ ಮೂಲಕ ಶರಣ್ ಅವರ ಎಪಿಸೋಡ್ ಕುರಿತು ಚರ್ಚೆ ಮಾಡುತ್ತಿದ್ದಾರೆ. ಅಷ್ಟಕ್ಕೂ, ಶರಣ್ ಅವರ ಸಂಚಿಕೆ ಬಗ್ಗೆ ವೀಕ್ಷಕರ ನಿರೀಕ್ಷೆ ಏನು? ಅವರ ಬಗ್ಗೆ ಅಭಿಪ್ರಾಯವೇನು? ಮುಂದೆ ಓದಿ.....

  ನಿಮ್ಮ ಬಗ್ಗೆ ಹೆಮ್ಮೆ ಇದೆ

  ನಿಮ್ಮ ಬಗ್ಗೆ ಹೆಮ್ಮೆ ಇದೆ

  ಶರಣ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದ ಕುರಿತು ಅನೇಕರಿಗೆ ಖುಷಿ ಇದೆ. ಶರಣ್ ಅವರನ್ನ ಈ ಸೀಟಿನಲ್ಲಿ ನೋಡಲು ಹೆಮ್ಮೆ ಎಂದು ಬಹುತೇಕರು ಕಾಮೆಂಟ್ ಮಾಡಿದ್ದಾರೆ. ಸಾಧಕರ ಕುರ್ಚಿಗೆ ಉತ್ತಮ ವ್ಯಕ್ತಿಯನ್ನ ಆಯ್ಕೆ ಮಾಡಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಖುಷಿ, ನೋವು, ಕಣ್ಣೀರು ತುಂಬಿದ ಅಧ್ಯಕ್ಷ ಶರಣ್ ಪ್ರೋಮೋ

  ಅರ್ಹ ವ್ಯಕ್ತಿ ಎಂಬ ಕೂಗು

  ಅರ್ಹ ವ್ಯಕ್ತಿ ಎಂಬ ಕೂಗು

  ''ಒಬ್ಬ ಕಾಮಿಡಿ ನಟನಾಗಿ ಬಂದು ಇಂದು ಹೀರೋ ಆಗಿ ಸಕ್ಸಸ್ ಆಗಿದ್ದಾರೆ. ಇದು ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕರಿಗೆ ಸಾಧ್ಯವಾಗದ ಟಾಸ್ಕ್ ಎಂಬುದು ವೀಕ್ಷಕರ ಅಭಿಪ್ರಾಯ. ಈ ಶೋಗೆ ನೀವು ಅರ್ಹ ವ್ಯಕ್ತಿ. ಈ ಸಂಚಿಕೆಗಾಗಿ ಕಾಯುತ್ತಿದ್ದೇವೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

  ಇದು ಸಾಧಕರಿಗಲ್ಲ, ಸಿನಿಮಾದವರಿಗೆ ಮಾತ್ರ

  ಇದು ಸಾಧಕರಿಗಲ್ಲ, ಸಿನಿಮಾದವರಿಗೆ ಮಾತ್ರ

  ಸಿನಿಮಾದವರಿಗೆ ಮಾತ್ರ ಈ ಶೋ, ಬೇರೆ ಕ್ಷೇತ್ರ ಸಾಧಕರಿಗೆ ಈ ಶೋ ಅಲ್ಲ ಎಂಬ ವಿಚಾರಕ್ಕೆ ಯಾವಾಗಲೂ ಟೀಕೆ ಮಾಡುವ ಸಾಂಪ್ರದಾಯಕ ಟೀಕಾಕಾರು, ಶರಣ್ ಅವರ ಸಂಚಿಕೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶರಣ್ ಅವರ ಕೆಲವು ವೈಯಕ್ತಿಕ ವಿಚಾರದ ಬಗ್ಗೆಯೂ ಪ್ರಶ್ನಿಸುತ್ತಿದ್ದಾರೆ.

  ಅವರು ಬೇಕು, ಇವರು ಬೇಕು

  ಅವರು ಬೇಕು, ಇವರು ಬೇಕು

  ಶರಣ್ ಅವರ ಸಂಚಿಕೆ ಬಗ್ಗೆ ಹೆಚ್ಚು ಮಂದಿ ಸ್ವಾಗತಿಸಿದ್ದಾರೆ. ಉಳದವರಲ್ಲಿ ಕೆಲವರು ಕಾಮಿಡಿ ನಟ ಆಗಿ ಹೀರೋ ಆದ್ರೆ ಅದು ಸಾಧನೆನಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸಿನಿಮಾದವರು ಮಾತ್ರ ಸಾಧಕರು ಅನ್ನೋದಾದರೇ ಇದನ್ನ ವೀಕೆಂಡ್ ವಿತ್ ಸ್ಟಾರ್ಸ್ ಎಂದು ಹೆಸರು ಬದಲಾಯಿಸಿ ಎಂದು ಕಿಡಿಕಾರಿದ್ದಾರೆ. ಇದೆಲ್ಲದರ ಮಧ್ಯೆ ಅವರನ್ನ ಕರೆಸಿ, ಇವರನ್ನ ಕರೆಸಿ ಎನ್ನುವವರು ಮಾತ್ರ ಕಮ್ಮಿ ಇಲ್ಲ.

  English summary
  Weekend with ramesh 4: Kannada actor sharan has participate in weekend with ramesh show. the episode will telecasting on this weekend. here is the Viewers response about sharan episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X