»   » ವಿ.ಹರಿಕೃಷ್ಣ ರವರ ಮೊಟ್ಟ ಮೊದಲ ಸಂದರ್ಶನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ.!

ವಿ.ಹರಿಕೃಷ್ಣ ರವರ ಮೊಟ್ಟ ಮೊದಲ ಸಂದರ್ಶನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ.!

Posted By:
Subscribe to Filmibeat Kannada

ಹನ್ನೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಲೀಡಿಂಗ್ ಮ್ಯೂಸಿಕ್ ಡೈರೆಕ್ಟರ್ ಅಗಿ, ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಾ ಬಂದಿರುವ ವಿ.ಹರಿಕೃಷ್ಣ ರವರ ಸಂದರ್ಶನ ಇಲ್ಲಿಯವರೆಗೂ ಎಲ್ಲೂ ಬಂದಿಲ್ಲ.[ಪ್ರೋಮೋ ನೋಡಿ: 'ವೀಕೆಂಡ್' ಸಾಧನೆಯ ಸೀಟ್ ಮೇಲೆ ಐಪಿಎಸ್ ಅಧಿಕಾರಿ.!]

ಟಿವಿ ಚಾನೆಲ್ ಗಳಿಗೆ 'ಬೈಟ್' ನೀಡುವ ಮಿತ ಮಾತುಗಾರ ವಿ.ಹರಿಕೃಷ್ಣ ಕೂಡ ಇಂಟರ್ ವ್ಯೂ ಬೇಸ್ಡ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಒಪ್ಪಿಕೊಳ್ಳುತ್ತಿರಲಿಲ್ಲ. ಆದ್ರೀಗ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ರವರನ್ನ ಕರೆದುಕೊಂಡು ಬರುವಲ್ಲಿ ಜೀ ಕನ್ನಡ ವಾಹಿನಿ ಯಶಸ್ವಿ ಆಗಿದೆ. ಮುಂದೆ ಓದಿ....

ಸಾಧಕರ ಕುರ್ಚಿ ಮೇಲೆ ವಿ.ಹರಿಕೃಷ್ಣ ಆಸೀನ

ಅಂತೂ ಸಾಧಕರ ಕುರ್ಚಿ ಮೇಲೆ ವಿ.ಹರಿಕೃಷ್ಣ ಆಸೀನರಾಗಿದ್ದಾರೆ. ವಿ.ಹರಿಕೃಷ್ಣ ರವರ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಗಲಿದೆ.

ಭಯ ಇದ್ಯಂತೆ.!

ಸಾಧಕರ ಸೀಟ್ ಮೇಲೆ ಕೂತ ನಂತರ, ''ನೀವು ಬಂದಿದ್ದು ಬಹಳ ಖುಷಿ ಆಗ್ತಿದೆ'' ಅಂತ ರಮೇಶ್ ಅರವಿಂದ್ ಹೇಳಿದಕ್ಕೆ, ''ನನಗೂ ಅಷ್ಟೆ. ಆದ್ರೆ ಭಯ'' ಎಂದಿದ್ದಾರೆ ವಿ.ಹರಿಕೃಷ್ಣ.

ವಿ.ಹರಿಕೃಷ್ಣ ರವರಿಗೆ ಟ್ರೋಲ್ಸ್ ದರ್ಶನ.!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ವಿ.ಹರಿಕೃಷ್ಣ ಅತಿಥಿಯಾಗಲಿದ್ದಾರೆ ಎಂಬ ಸುದ್ದಿ ಬಿತ್ತರವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟ್ರೋಲ್ ಮಾಡಿದ್ದರು. ಅದನ್ನೆಲ್ಲ ವಿ.ಹರಿಕೃಷ್ಣ ರವರಿಗೆ ರಮೇಶ್ ದರ್ಶನ ಮಾಡಿಸಿದರು. ಇದನ್ನೆಲ್ಲ ನೋಡಿದ ಬಳಿಕ, ''ಹೀಗೆಲ್ಲ ಆಗ್ಬಿಟ್ರೆ, ಇನ್ನೂ ಭಯ ಜಾಸ್ತಿ ಆಗುತ್ತೆ'' ಅಂತ ಹೇಳಿದ್ದಾರೆ ವಿ.ಹರಿಕೃಷ್ಣ.

ಪ್ರೋಮೋ ನೋಡಿದ್ರಾ.?

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವಿ.ಹರಿಕೃಷ್ಣ ಭಾಗವಹಿಸಿರುವ ಪ್ರೋಮೋ ಜೀ ಕನ್ನಡ ವಾಹಿನಿಯಿಂದ ಔಟ್ ಆಗಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಭಾನುವಾರ ಮಿಸ್ ಮಾಡ್ಬೇಡಿ.!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವಿ.ಹರಿಕೃಷ್ಣ ಭಾಗವಹಿಸಿರುವ ಸಂಚಿಕೆ ಈ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ತಪ್ಪದೇ ವೀಕ್ಷಿಸಿ.

English summary
Music Director V.Harikrishna has taken part in Zee Kannada Channel's popular show Weekend With Ramesh 3. Watch promo here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada