»   » 'ಶಾಂತಿ ನಿವಾಸ'ವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಬೀಸಿದೆ ಅಶಾಂತಿಯ ಬಿರುಗಾಳಿ!

'ಶಾಂತಿ ನಿವಾಸ'ವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಬೀಸಿದೆ ಅಶಾಂತಿಯ ಬಿರುಗಾಳಿ!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ತೇಜಸ್ವಿನಿ ದಿವಾಕರ್ ವಿರುದ್ಧ ಯುದ್ಧ | Filmibeat Kannada

ಕಳೆದ ನಾಲ್ಕು ಆವೃತ್ತಿಗಳಿಗೆ ಹೋಲಿಸಿದರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಪ್ಪೆ ಅಂತ ಅನೇಕ ಮಂದಿ ಮೂಗು ಮುರಿಯುತ್ತಿರುವಾಗಲೇ, 'ಬಿಗ್ ಬಾಸ್' ಮನೆಯಲ್ಲಿ ಗದ್ದಲ-ಗಲಾಟೆ ಆರಂಭವಾಗಿದೆ.

ಇಷ್ಟು ದಿನ 'ಶಾಂತಿ ನಿವಾಸ'ದಂತೆ ಇದ್ದ 'ಬಿಗ್ ಬಾಸ್' ಮನೆಯಲ್ಲಿ ಇದೀಗ ಅಶಾಂತಿಯ ಬಿರುಗಾಳಿ ಬೀಸಿದೆ.

'ದೊಡ್ಮನೆ'ಯಲ್ಲಿ ನಟಿ ತೇಜಸ್ವಿನಿ ಹಾಗೂ 'ಮಾತಿನ ಮಲ್ಲ' ದಿವಾಕರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮುಂದೆ ಓದಿರಿ...

ಎರಡನೇ ವಾರವೂ ಟಾರ್ಗೆಟ್ ಆಗುತ್ತಾರಾ ದಿವಾಕರ್.?

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಕಂಡ್ರೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಅಷ್ಟಕಷ್ಟೆ. ಅನೇಕ ಕಾರಣಗಳನ್ನು ನೀಡಿ ಮೊದಲ ವಾರವೇ ದಿವಾಕರ್ ರವರನ್ನ ಬಹುತೇಕ ಮಂದಿ ನಾಮಿನೇಟ್ ಮಾಡಿದ್ದರು. ಮೊದಲ ವಾರ ಬಚಾವ್ ಆಗಿದ್ದ ದಿವಾಕರ್ ಈಗ ಎರಡನೇ ವಾರವೂ ಟಾರ್ಗೆಟ್ ಆಗುವಂತೆ ಕಾಣುತ್ತಿದೆ.

ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ

ದಿವಾಕರ್ ವರ್ಸಸ್ ತೇಜಸ್ವಿನಿ

ದಿವಾಕರ್ ಹಾಗೂ ನಟಿ ತೇಜಸ್ವಿನಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ನೀವು ಇಂದಿನ ಸಂಚಿಕೆ ಪ್ರಸಾರ ಆಗುವವರೆಗೂ ಕಾಯಲೇಬೇಕು.

ವಿಷ್ಣುವರ್ಧನ್ ಮಗಳಾಗಿದ್ದ ತೇಜಸ್ವಿನಿ ಪ್ರಕಾಶ್ ಈಗ 'ಬಿಗ್ ಬಾಸ್' ಮೆಟ್ಟಿಲೇರಿದ್ದಾರೆ!

ಪ್ರೋಮೋ ನೋಡಿ

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಮತ್ತು ತೇಜಸ್ವಿನಿ ನಡುವೆ ಆದ ಗಲಾಟೆಯ ಪ್ರೋಮೋ ಸದ್ಯ ಔಟ್ ಆಗಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

ಇಂದು ನಡೆಯಲಿದೆ ನಾಮಿನೇಷನ್ ಪ್ರಕ್ರಿಯೆ

ಅಂದ್ಹಾಗೆ, ಇಂದು ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಯಲಿದೆ. ಈ ಬಾರಿ ಯಾರೆಲ್ಲ ಡೇಂಜರ್ ಝೋನ್ ಗೆ ಹೋಗ್ತಾರೋ, ಕಾದು ನೋಡೋಣ.

English summary
Watch promo: Verbal spat between Divakar and Tejaswini in #BBK5 house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada