»   » ದಸರಾ ವಿಶೇಷ: ಉದಯ ಟಿವಿಯಲ್ಲಿ 'ಸೀರಿಯಲ್ ಹಬ್ಬ'

ದಸರಾ ವಿಶೇಷ: ಉದಯ ಟಿವಿಯಲ್ಲಿ 'ಸೀರಿಯಲ್ ಹಬ್ಬ'

Posted By:
Subscribe to Filmibeat Kannada

ದಸರಾ ಹಬ್ಬದ ವಿಶೇಷವಾಗಿ ಕನ್ನಡದ ಪ್ರತಿಷ್ಠಿತ ಮನರಂಜನಾ ವಾಹಿನಿ ಉದಯ ಟಿವಿ ಧಾರವಾಡದ ಸನ್ನಿಧಿ ಕಲಾಕ್ಷೇತ್ರದಲ್ಲಿ ಅದ್ಧೂರಿಯಾಗಿ 'ಸೀರಿಯಲ್ ಹಬ್ಬ' ಆಚರಿಸಿದೆ.

ಸೀರಿಯಲ್ ತಾರೆಯರ ಡ್ಯಾನ್ಸ್-ಮಸ್ತಿ ಈ 'ನವರಾತ್ರಿ'ಗೆ ವೀಕ್ಷಕರ ಮುಂದೆ ಬರಲಿದೆ. ಸೆಪ್ಟೆಂಬರ್ 29, ಶುಕ್ರವಾರ 'ಮಹಾನವಮಿ'ಯಂದು ಸಂಜೆ 4.30ಕ್ಕೆ 'ಸೀರಿಯಲ್ ಹಬ್ಬ' ಪ್ರಸಾರಗೊಳ್ಳಲಿದೆ. ಮುಂದೆ ಓದಿರಿ....

ಜನಪ್ರಿಯ ಧಾರಾವಾಹಿ ತಂಡಗಳಿಂದ 'ಸೀರಿಯಲ್ ಹಬ್ಬ'

ನವರಾತ್ರಿಯ ವಿಶೇಷವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಉದಯ ಟಿವಿಯ ಜನಪ್ರಿಯ ಧಾರಾವಾಹಿಗಳಾದ 'ಜೋ ಜೋ ಲಾಲಿ', 'ಸರಯೂ' ಮತ್ತು 'ಕಾವೇರಿ' ತಂಡದ ತಾರೆಯರು ಕುಣಿದು ಕುಪ್ಪಳಿಸಿ, ಹಬ್ಬಕ್ಕೆ ಹೊಸ ಕಳೆ ತಂದಿದ್ದಾರೆ.

ಕನ್ನಡದ ಜನಪ್ರಿಯ ಗೀತೆಗಳಿಗೆ ನೃತ್ಯ

ಕನ್ನಡದ ಪ್ರಸಿದ್ಧ ಚಲನಚಿತ್ರ ಗೀತೆಗಳಿಗೆ ಎಲ್ಲ ಕಲಾವಿದರೂ ಕೂಡ ಹೆಜ್ಜೆ ಹಾಕಿದ್ದಲ್ಲದೇ, ಹಿರಿಯ ನಟ-ನಟಿಯರು ರೆಟ್ರೋ ಶೈಲಿಯ ನೃತ್ಯ ಪ್ರಸ್ತುತಿಯ ಮೂಲಕ ಜನಮನ ಗೆದ್ದರು.

ನಿರಂಜನ್ ದೇಶಪಾಂಡೆ-ಶಾಲಿನಿ ನಿರೂಪಣೆ

ನಿರಂಜನ್ ದೇಶಪಾಂಡೆ ಮತ್ತು ಶಾಲಿನಿ ಕಾರ್ಯಕ್ರಮವನ್ನ ನಿರೂಪಿಸಿ ತಮ್ಮ ಚುರುಕು ಮಾತುಗಳ ಮೂಲಕ ನಗೆಯ ಮಿಂಚು ಹರಿಸಿದರು.

'ಉದಯ ಪುರಸ್ಕಾರ'

ಕೇವಲ ಮನರಂಜನೆ ಮಾತ್ರವಲ್ಲದೇ, ಸಾಮಾಜಿಕ ಕಳಕಳಿಯನ್ನು ಕೂಡ ಗಮನದಲ್ಲಿಟ್ಟುಕೊಂಡಿದ್ದ ಉದಯ ಟಿವಿ, 'ಉದಯ ಪುರಸ್ಕಾರ' ಎಂಬ ಹೆಸರಿನ ಗೌರವವನ್ನು ಕೂಡ ಆಯ್ದ ಮಹನೀಯರಿಗೆ ಸಲ್ಲಿಸಿತ್ತು. ಸಿಯಾಚಿನ್ ನಲ್ಲಿ ಮೃತರಾದ ಕನ್ನಡ ಮಣ್ಣಿನ ವೀರ ಯೋಧ ಹನುಮಂತಪ್ಪ ಕೊಪ್ಪದ್ ಕುಟುಂಬದವರಿಗೆ ಹಾಗೂ ಪ್ರಸಿದ್ಧ ಸಂಗೀತ ವಿದ್ವಾಂಸ ಪಂಡಿತ ಪ್ರಸನ್ನ ಮಾಧವ ಗುಡಿ ಅವರಿಗೆ ಉದಯ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ಪ್ರತಿಭಾವಂತರಾದ ಇಬ್ಬರು ಹೆಣ್ಣು ಮಕ್ಕಳಿಗೆ ಸಹಾಯಧನವನ್ನು ನೀಡಿ ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.

ತಪ್ಪದೇ ವೀಕ್ಷಿಸಿ

ಈ ಎಲ್ಲವನ್ನ ಒಳಗೊಂಡ ಉದಯ 'ಸೀರಿಯಲ್ ಹಬ್ಬ' ಇದೇ ಸೆಪ್ಟೆಂಬರ್ 29 ರಂದು ಉದಯ ಟಿವಿಯಲ್ಲಿ ಸಂಜೆ 4.30ಕ್ಕೆ ಪ್ರಸಾರವಾಗಲಿದೆ.

English summary
Watch Serial Habba in Udaya TV on September 29th at 4.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada