»   » 'ಲೋಕೇಶ್ ಕುಮಾರ್'ಗೆ ಅರ್ಜುನ್ ಎಂದು ಹೆಸರಿಟ್ಟಿದ್ದು ಒಬ್ಬ ಸಾಹಿತಿ!

'ಲೋಕೇಶ್ ಕುಮಾರ್'ಗೆ ಅರ್ಜುನ್ ಎಂದು ಹೆಸರಿಟ್ಟಿದ್ದು ಒಬ್ಬ ಸಾಹಿತಿ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸ್ಟಾರ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ. ಅರ್ಜುನ್ ಜನ್ಯ ಅವರ ಮೂಲ ಹೆಸರು ಲೋಕೇಶ್ ಕುಮಾರ್. ಆದ್ರೆ, ಈ ಲೋಕೇಶ್ ಕುಮಾರ್ ಅರ್ಜುನ್ ಆಗಲು ಕಾರಣ ಕನ್ನಡದ ಖ್ಯಾತ ಸಾಹಿತಿ.[ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?]

ಹೌದು, ಲೋಕೇಶ್ ಕುಮಾರ್ ಹೋಗಿ ಅರ್ಜುನ್ ಹೇಗಾದ್ರೂ ಎಂಬುದನ್ನ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಸ್ವತಃ ಆ ಖ್ಯಾತ ಸಾಹಿತಿಗಳೇ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ....

ಅರ್ಜುನ್ ಜನ್ಯಗೆ ಹೆಸರು ಬದಲಿಸಿದ್ದು ಕೆ.ಕಲ್ಯಾಣ್!

ಲೋಕೇಶ್ ಕುಮಾರ್ ಆಗಿದ್ದ ವ್ಯಕ್ತಿ ಅರ್ಜುನ್ ಆಗಲು ಕಾರಣ ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿ ಕೆ.ಕಲ್ಯಾಣ್ ಅವರಂತೆ.[ ಅನುಶ್ರೀ ಮೇಲೆ ಅರ್ಜುನ್ ಜನ್ಯಾ ಪತ್ನಿಗೆ ಕೋಪ ಇದ್ಯಾ?]

ಹೆಸರು ಬದಲಿಸುವಂತೆ ಕೇಳಿದ್ದ ಲೋಕೇಶ್!

ಒಂದು ದಿನ ಕೆ.ಕಲ್ಯಾಣ್ ಅವರು ಆರಾಮಗಿ ಮಲಗಿದ್ದರಂತೆ. ಆಗ ಕಲ್ಯಾಣ್ ಅವರಿಗೆ ಫೋನ್ ಕಾಲ್ ಮಾಡಿದ ಲೋಕೇಶ್ ಕುಮಾರ್ (ಅರ್ಜುನ್ ಜನ್ಯ), ''ಸರ್, ನಾನು ಒಂದು ಸಿನಿಮಾಗೆ ಸಂಗೀತ ನೀಡುತ್ತಿದ್ದೀನಿ, ನನ್ನ ಹೆಸರು ಬದಲಿಸಿ ಎಂದು ಕೇಳಿದ್ದನಂತೆ''- ಕೆ.ಕಲ್ಯಾಣ್

ಅರ್ಜುನ್ ಎಂದು ಹೆಸರಿಟ್ಟೆ!

''ಯೋಚನೆ ಮಾಡಲಿಲ್ಲ. ಸಡನ್ ಆಗಿ ಮನಸ್ಸಿಗೆ ಬಂದಿದ್ದು ಅರ್ಜುನ್. ಹಾಗಾಗಿ, ಅರ್ಜುನ್ ಅಂತ ಇಟ್ಕೊ ಅಂದೆ. ಅದಕ್ಕೆ ಲೋಕಿ ಕೂಡ ಸರ್ ಚೆನ್ನಾಗಿದೆ ಅಂತ ಒಪ್ಪುಕೊಂಡ''-ಕೆ.ಕಲ್ಯಾಣ್

ಅರ್ಜುನ ಹೆಸರಿಗೆ ತಕ್ಕಂತೆ ಅರ್ಜುನ್!

''ಬಿಲ್ವಿದ್ಯೆಯಲ್ಲಿ ಅರ್ಜುನ ಎಷ್ಟು ನಿಪುಣನೋ, ಹಾಗೇ ಅರ್ಜುನ್ ಗೆ ಸ್ವಾಮಿ ನಿಷ್ಠೆ, ಕೆಲಸದ ಮೇಲೆ ಭಕ್ತಿ ಅದು ಮ್ಯೂಸಿಕಲಿ ಹೆಚ್ಚಿದೆ ಎಂಬುದು ನನ್ನ ಭಾವನೆ''- ಕೆ.ಕಲ್ಯಾಣ್

ಅರ್ಜುನ್ ನನ್ನ ಪ್ರೀತಿಯ 'ತಮ್ಮ'!

''ನಮ್ಮ ತಾಯಿಯ ಇವರಿಗೆ ಕೈತುತ್ತು ಹಾಕಿದಾಗೆ, ಅವರಮ್ಮ ನನಗೆ ಕೈತುತ್ತು ಹಾಕಿದ್ದಾರೆ. ಹಾಗಾಗಿ, ಯಾವತ್ತಿದ್ರೂ ಅರ್ಜುನ್ ನನ್ನ ಪ್ರೀತಿಯ ತಮ್ಮ. ಆಮೇಲೆ ಮ್ಯೂಸಿಕ್ ಡೈರೆಕ್ಟರ್''-ಕೆ.ಕಲ್ಯಾಣ್

English summary
Weekend With Ramesh 3: K.Kalyan Talk About Arjun Janya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada