»   » ನಿರ್ದೇಶಕ ಕೆ.ಬಾಲಚಂದರ್ ಬಗ್ಗೆ ಪ್ರಕಾಶ್ ರೈ ಉದುರಿಸಿದ ಮಾತಿನ ಮುತ್ತುಗಳಿವು...

ನಿರ್ದೇಶಕ ಕೆ.ಬಾಲಚಂದರ್ ಬಗ್ಗೆ ಪ್ರಕಾಶ್ ರೈ ಉದುರಿಸಿದ ಮಾತಿನ ಮುತ್ತುಗಳಿವು...

Posted By:
Subscribe to Filmibeat Kannada

''ನನ್ನ ಇನ್ನೊಬ್ಬ ತಂದೆ... ನನ್ನ ಬದುಕಿನ ತಂದೆ ಅಂದ್ರೆ ಅದು ಕೆ.ಬಾಲಚಂದರ್'' - ಹೀಗಂತ ಹೆಮ್ಮೆಯಿಂದ ಹೇಳಿಕೊಂಡವರು ನಟ ಪ್ರಕಾಶ್ ರೈ. ಅದು 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ.!

ನಟ ಪ್ರಕಾಶ್ ರೈ ರವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿದವರು ನಿರ್ದೇಶಕ ಕೆ.ಬಾಲಚಂದರ್. ಹೀಗಾಗಿ ಅವರ ಬಗ್ಗೆ ಪ್ರಕಾಶ್ ರೈ ರವರಿಗೆ ಅಪಾರ ಗೌರವ.[ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ]

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಬಗ್ಗೆ ಪ್ರಕಾಶ್ ರೈ ಏನೆಲ್ಲ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ....

ಪ್ರಕಾಶ್ ರೈ ರವರಿಗೆ ದೊಡ್ಡ ಸ್ಫೂರ್ತಿ

''ಕೆ.ಬಾಲಚಂದರ್ ರವರು ನನಗೆ ದೊಡ್ಡ ಸ್ಫೂರ್ತಿ. ಅವರು ನನ್ನ ಜಾತಿ ನೋಡಲಿಲ್ಲ... ಭಾಷೆ ನೋಡಲಿಲ್ಲ... ಸಂಬಂಧಗಳನ್ನ ನೋಡಲಿಲ್ಲ... 'ನನ್ನ ಕಥೆ.. ನನ್ನ ಕಥೆಗೊಂದು ಪ್ರತಿಭೆ ಬೇಕು.. ಇವನಲ್ಲಿ ಅದು ಇದೆ.. ಇವನಿಗೆ ಮಣೆ ಹಾಕ್ತೀನಿ' ಅಂತ ಮಾಡುತ್ತಿದ್ದರು'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?]

ನನ್ನ ಇನ್ನೊಬ್ಬ ತಂದೆ

''ನನ್ನ ಇನ್ನೊಬ್ಬ ತಂದೆ. ನನ್ನ ಈ ಬದುಕಿನ ತಂದೆ ಅಂದ್ರೆ ಅದು ಕೆ.ಬಾಲಚಂದರ್'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!]

ಬುದ್ಧಿ ಮಾತು ಹೇಳುತ್ತಿದ್ದರು

''ಸಿನಿಮಾ ಮಾತ್ರ ಅಲ್ಲದೇ, ನನ್ನ ಬಗ್ಗೆ ಏನೇ ನ್ಯೂಸ್ ಬಂದರೂ ಫೋನ್ ಮಾಡುತ್ತಿದ್ದರು. ಯಾರ ಬಳಿಯಾದರೂ ಕಿತ್ತಾಡಿಕೊಂಡರೆ, ಫೋನ್ ಮಾಡಿ ಬುದ್ಧಿ ಮಾತು ಹೇಳುತ್ತಿದ್ದರು. ಮನೆಯಲ್ಲಿ ಸಮಸ್ಯೆ ಆದರೂ ಬಂದು ನಿಂತುಕೊಳ್ತಿದ್ರು'' - ಪ್ರಕಾಶ್ ರೈ, ನಟ

ಅವರ ಹಾಗೆ ಇಡೀ ಜಗತ್ತಿನಲ್ಲಿ ಇನ್ನೊಬ್ಬರಿಲ್ಲ

''ಅವರು ಕೇವಲ ನಿರ್ದೇಶಕ ಮಾತ್ರ ಆಗಿರಲಿಲ್ಲ. ಅವರಷ್ಟು ಪ್ರತಿಭೆಗಳನ್ನ ಹೊರತಂದ ನಿರ್ದೇಶಕ ಈ ಜಗತ್ತಿನಲ್ಲಿ ಇನ್ನೊಬ್ಬರಿಲ್ಲ. There can be one and only K.Balachander'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?]

ಅವರು ವಿಶ್ವಮಾನವರು

''ಇವತ್ತು ನಾವು ಭಾಷೆ ಬಗ್ಗೆ ಜಗಳ ಆಡುತ್ತೇವೆ. ಆಗೆಲ್ಲ ಅವರು ಯಾವ ಭಾಷೆ ನೋಡಿದರು.? ಅವರೆಲ್ಲ ವಿಶ್ವಮಾನವರು. ವಿಶ್ವಮಾನವರ ಹಾಗೆ ಬದುಕಬೇಕು ನಾವೆಲ್ಲರೂ. ಸಣ್ಣತನ ಇರಬಾರದು. ಕಲೆಗೆ ಭಾಷೆ ಇಲ್ಲ. ಅವರೆಲ್ಲ ಆ ರೀತಿ ಆಗ ಯೋಚನೆ ಮಾಡಿದ್ರೆ, ನಾವೆಲ್ಲ ಇಲ್ಲಿಯವರೆಗೂ ಬರುತ್ತಲೇ ಇರಲಿಲ್ಲ'' - ಪ್ರಕಾಶ್ ರೈ, ನಟ

ನಮ್ಮ ಪುಣ್ಯ

''ಅವರು ಬದುಕಿದ್ದ ಕಾಲದಲ್ಲಿ, ಅವರಿಂದ ಇಂಟ್ರೊಡ್ಯೂಸ್ ಆಗಿ, ಅವರ ಚಿತ್ರಗಳಲ್ಲಿ ಅಭಿನಯಿಸಿ, ಅವರ ಜೊತೆ ಬದುಕಿದ್ವಿ ಅನ್ನೋದೇ ನಮ್ಮ ಪುಣ್ಯ. ಆ ಭಾಗ್ಯ ಮತ್ತೆ ನಮಗೆ ಸಿಗಲ್ಲ'' - ಪ್ರಕಾಶ್ ರೈ, ನಟ

English summary
Multilingual Actor Prakash Rai spoke about K.Balachander in 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada