Don't Miss!
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Sports
IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್
- News
Srirangapatna bypass: ಸಂಚಾರಕ್ಕೆ ಮುಕ್ತವಾದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯ ಶ್ರೀರಂಗಪಟ್ಟಣ ಬೈಪಾಸ್
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವೀಕೆಂಡ್ ವಿತ್ ರಮೇಶ್' ಟಿ.ಆರ್.ಪಿಗೆ ಎದುರಾಯ್ತು ಆತಂಕ.!
ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ಆರಂಭವಾಗುತ್ತಿದೆ. ಇದೇ ವಾರದಿಂದ ಸಾಧಕರ ಜರ್ನಿ ಶುರುವಾಗುತ್ತಿದ್ದು, ಇನ್ಮುಂದೆ ವೀಕೆಂಡ್ ನಲ್ಲಿ ಮನರಂಜನೆ ಪಕ್ಕಾ ಎನ್ನಲಾಗುತ್ತಿದೆ. ಕೆಲವು ವಿರೋಧಗಳ ನಡುವೆಯೂ ಈ ಕಾರ್ಯಕ್ರಮ ಕಳೆದ ಮೂರು ಸೀಸನ್ ನಲ್ಲೂ ಯಶಸ್ವಿಯಾಗಿದೆ.
ಇದೀಗ, ನಾಲ್ಕನೇ ಸೀಸನ್ ಕೂಡ ಯಶಸ್ಸು ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಭರವಸೆಯಲ್ಲಿದ್ದಾರೆ ಜೀ ತಂಡ. ಆದ್ರೆ, ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿಯ ಯಶಸ್ಸಿಗೆ ಕೆಲವು ಪ್ರಮುಖ ಕಾರ್ಯಕ್ರಮಗಳು ಅಡ್ಡಿಯಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ.
'ವೀಕೆಂಡ್
ವಿತ್
ರಮೇಶ್'ನಲ್ಲಿ
ಅತಿ
ಹೆಚ್ಚು
ಟಿ.ಆರ್.ಪಿ
ಬಂದಿದ್ದು
ಇವರ
ಸಂಚಿಕೆಗೆ.!
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿದೆ. ಲೋಕಸಭೆ ಎಲೆಕ್ಷನ್ ಕೂಡ ಅಂತಿಮ ಹಂತದಲ್ಲಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮತ್ತೇನು ಅಡ್ಡಿ ಎಂದು ನೋಡಿದ್ರೆ ಬೇರೆಯದ್ದೇ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಕಾಡುತ್ತಿದೆ. ಅಷ್ಟಕ್ಕೂ, ವೀಕೆಂಡ್ ಶೋಗೆ ಅಡ್ಡಿಯಾಗಲಿರುವ ಆ ಶೋ ಯಾವುದು? ಮುಂದೆ ಓದಿ....

ಐಪಿಎಲ್ ಕ್ರಿಕೆಟ್
ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿ ಈಗಾಗಲೇ ನಡೆಯುತ್ತಿದೆ. ಸುಮಾರು 33ಕ್ಕೂ ಅಧಿಕ ಪಂದ್ಯಗಳು ಮುಗಿದು ಹೋಗಿದೆ. ಇನ್ನು ಅರ್ಧದಷ್ಟು ಟೂರ್ನಿ ಬಾಕಿ ಇದೆ. ಪ್ರತಿ ದಿನ ಒಂದು ಪಂದ್ಯ ಹಾಗೂ ವೀಕೆಂಡ್ ನಲ್ಲಿ ಎರಡೆರಡು ಪಂದ್ಯಗಳು ನಡೆಯುತ್ತಿದೆ. ಕರ್ನಾಟಕದಲ್ಲಿ ಐಪಿಎಲ್ ಜ್ವರ ದೊಡ್ಡ ಮಟ್ಟದಲ್ಲೇ ಇದ್ದು, ವೀಕೆಂಡ್ ವಿತ್ ರಮೇಶ್ ಶೋಗೆ ಇದು ಕಂಟಕವಾಗಬಹುದು.
Big
Breaking:
ವೀಕೆಂಡ್
ವಿತ್
ರಮೇಶ್
ನಲ್ಲಿ
ರಜನಿಕಾಂತ್,
ರಾಜಮೌಳಿ.!

ಯುವ ಪ್ರೇಕ್ಷಕರನ್ನ ಕಳೆದುಕೊಳ್ಳುವ ಆತಂಕ
ಐಪಿಎಲ್ ಕ್ರಿಕೆಟ್ ನೋಡುವ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಹೆಚ್ಚು. ಸಂಜೆಯಾಗುತ್ತಿದ್ದಂತೆ ಮನೆ ಸೇರುವ ಯುವಕರು, ಟಿವಿ ರಿಮೋರ್ಟ್ ಕೈಯಲ್ಲಿಡಿದು ಐಪಿಎಲ್ ನೋಡುತ್ತಾ ಕೂರುತ್ತಾರೆ. ಏಳು ಗಂಟೆಗೆ ಶುರುವಾಗುವ ಪಂದ್ಯ 12 ಗಂಟೆಯವರೆಗೂ ನಡೆಯುತ್ತೆ. ಈ ಸಮಯದವರೆಗೂ ಹಲವು ಮನೆಯಲ್ಲಿ ಧಾರಾವಾಹಿ, ನ್ಯೂಸ್, ರಿಯಾಲಿಟಿ ಶೋ ಎಲ್ಲವೂ ಬಂದ್. ಹಾಗಾಗಿ, ವೀಕೆಂಡ್ ವಿತ್ ರಮೇಶ್ ಶೋ ಟಿ.ಆರ್.ಪಿಯಲ್ಲಿ ವ್ಯತ್ಯಾಸವಾಗಬಹುದು.

ಐಪಿಎಲ್ ನಂತರ ವಿಶ್ವಕಪ್
ಮೇ 12ಕ್ಕೆ ಐಪಿಎಲ್ ಕ್ರಿಕೆಟ್ ಮುಗಿಯುತ್ತೆ. ಅಷ್ಟರಲ್ಲೇ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗುತ್ತೆ. ಮೇ 30ಕ್ಕೆ ವಿಶ್ವಕಪ್ ಪಂದ್ಯಗಳು ಆರಂಭವಾಗಲಿದೆ. ಇದು ಕೂಡ ವೀಕೆಂಡ್ ವಿತ್ ರಮೇಶ್ ಗೆ ಪ್ರೇಕ್ಷಕರ ಸಂಖ್ಯೆಯನ್ನ ಕಡಿಮೆಗೊಳಿಸಬಹುದು. ಆದ್ರೆ, ಐಪಿಎಲ್ ಮಟ್ಟಿಗೆ ಪ್ರಭಾವ ಬೀರುತ್ತೆ ಎಂದು ಹೇಳಲು ಸಾಧ್ಯವಿಲ್ಲ.
'ವೀಕೆಂಡ್
ವಿತ್
ರಮೇಶ್'ಗೆ
ದ್ರಾವಿಡ್
ಬರಬೇಕೆ?,
ಹಾಗಾದ್ರೆ
ಹೀಗೆ
ಮಾಡಿ!

ಪದವಿ ಕಾಲೇಜುಗಳ ಪರೀಕ್ಷೆ
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ಮುಗಿದಿದ್ದರೂ, ಪದವಿ ಕಾಲೇಜುಗಳ ಪರೀಕ್ಷೆ ಇನ್ನು ಮುಗಿದಿಲ್ಲ. ಎಲೆಕ್ಷನ್ ನಂತರ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಹುಶಃ ಇದು ಕೂಡ ವೀಕೆಂಡ್ ವಿತ್ ರಮೇಶ್ ಟಿ.ಆರ್.ಪಿಗೆ ಅಡ್ಡಿಯಾಗಬಹುದು.

ಇದನ್ನ ಮೀರಿ ಯಶಸ್ಸು ಪಡೆಯುತ್ತಾ?
ಇದೆಲ್ಲಾ ಏನೇ ಇದ್ದರೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ತನ್ನದೇ ಆದ ಪ್ರೇಕ್ಷಕರು ಇದ್ದಾರೆ ಎಂಬ ನಂಬಿಕೆ. ಮತ್ತು ಈ ಶೋಗೆ ಹೆಚ್ಚು ಮೆಚ್ಚುಗೆ ಸಿಕ್ಕಿರುವುದರಿಂದ ಸಾಧಕರ ಮೇಲೆ ಪ್ರೇಕ್ಷಕರ ಸಂಖ್ಯೆ ನಿರ್ಣಯವಾಗುತ್ತೆ. ಹಾಗಾಗಿ, ಒಂದು ಪ್ರಮಾಣದಲ್ಲಿ ಕ್ರಿಕೆಟ್, ಪರೀಕ್ಷೆ ಇದ್ದರೂ ವೀಕೆಂಡ್ ಶೋಗೆ ಸಮಸ್ಯೆಯಾಗಲ್ಲ ಎನ್ನುವುದು ಆಯೋಜಕರ ಭರವಸೆ.