»   » ವೀಕೆಂಡ್ ವಿತ್ ರಮೇಶ್ ಅಥವಾ ಸುದೀಪ್? ನಿಮ್ಮ ಆಯ್ಕೆ ಯಾವುದು?

ವೀಕೆಂಡ್ ವಿತ್ ರಮೇಶ್ ಅಥವಾ ಸುದೀಪ್? ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಶನಿವಾರ ಮತ್ತು ಭಾನುವಾರ ಬಂತೂಂದ್ರೆ 'ಬಿಗ್ ಬಾಸ್' ಪ್ರಿಯರು ಕರೆಕ್ಟ್ ಆಗಿ 9 ಗೆ 'ಕಲರ್ಸ್ ಕನ್ನಡ' ಚಾನೆಲ್ ಆನ್ ಮಾಡ್ತಿದ್ರು. ಯಾಕಂದ್ರೆ, 'ವಾರದ ಕಥೆ ಕಿಚ್ಚನ ಜೊತೆ' ಮತ್ತು 'ಸೂಪರ್ ಸಂಡೆ ವಿತ್ ಸುದೀಪ್' ಶೋ ಪ್ರಸಾರವಾಗುವುದೇ ಆ ಟೈಮ್ ನಲ್ಲಿ.

ಸುದೀಪ್ ರವರ ಕಚಗುಳಿ ಇಡುವ ಮಾತು, ವಾರದ ಎಲಿಮಿನೇಷನ್ ಮತ್ತು 'ಬಿಗ್ ಬಾಸ್' ವೇದಿಕೆ ಮೇಲೆ ಸ್ಪೆಷಲ್ ಗೆಸ್ಟ್...ಎಲ್ಲವೂ ವೀಕೆಂಡ್ ನಲ್ಲಿ ಇರುತ್ತಿದ್ದ ಕಾರಣ 'ಬಿಗ್ ಬಾಸ್' ಪ್ರಿಯರಿಗೆ ಶನಿವಾರ ಮತ್ತು ಭಾನುವಾರ ಹಬ್ಬ.

ಈಗ 'ಬಿಗ್ ಬಾಸ್-3' ಮತ್ತು ಸುದೀಪ್ ಗೆ ಪೈಪೋಟಿ ನೀಡುವುದಕ್ಕೆ ರಮೇಶ್ ಇಳಿದಿದ್ದಾರೆ. ಅದು ತಮ್ಮ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂಲಕ. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ramesh-or-sudeep

ಹೌದು, ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಎರಡನೇ ಆವೃತ್ತಿ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ 'ಜೋಗಿ' ಪ್ರೇಮ್, ಅಂಬರೀಶ್, ದರ್ಶನ್ ಸೇರಿದಂತೆ ಅನೇಕ ಸಾಧಕರ ಜೀವನಚರಿತ್ರೆ ಬಿಚ್ಚಿಡಲಾಗುತ್ತೆ. [ವೀಕೆಂಡ್ ವಿಥ್ ರಮೇಶ್ ಶೋ ಮೊದಲ ಗೆಸ್ಟ್ ಪ್ರೇಮ್!]

ಎರಡೂ ಕಾರ್ಯಕ್ರಮಗಳು ಒಂದೇ ಸಮಯಕ್ಕೆ ಪ್ರಸಾರವಾಗುವುದರಿಂದ ನೀವು 'ವೀಕೆಂಡ್ ವಿತ್ ರಮೇಶ್' ನೋಡ್ತೀರಾ, ಇಲ್ಲಾ ಎಂದಿನಂತೆ 'ಬಿಗ್ ಬಾಸ್-3' ಕಾರ್ಯಕ್ರಮ ನೋಡ್ತೀರಾ..? ನಿಮ್ಮ ಆಯ್ಕೆ ಯಾವುದು ಅಂತ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Weekend With Ramesh 2nd season will telecast from today in Zee Kannada Channel at 9 PM. Since, Bigg Boss will also be aired in Colors Kannada Channel at the same time, which show will you watch? Comment and share your views.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada