For Quick Alerts
  ALLOW NOTIFICATIONS  
  For Daily Alerts

  ವಿನೋದ್ ರಾಜ್ ಜೇಬಲ್ಲಿ ಸದಾ ಕಾಲ ರಿವಾಲ್ವರ್ ಇರುತ್ತೆ! ಯಾಕೆ?

  By Harshitha
  |

  ನಿಮಗೆ ನೆನಪಿರಬಹುದು...2009 ರಲ್ಲಿ ಬೆಂಗಳೂರಿನ ಶಾಂತಲಾ ಸಿಲ್ಕ್ ಹೌಸ್ ಎದುರಿನ ಸಿಗ್ನಲ್ ನಲ್ಲಿ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಪ್ರಯಾಣ ಮಾಡುತ್ತಿದ್ದ ಕಾರ್ ಮೇಲೆ ದಾಳಿ ನಡೆದಿತ್ತು.

  ಅದು ಗುಂಡಿನ ದಾಳಿ ಅಂತ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಲೀಲಾವತಿ ಹಾಗೂ ವಿನೋದ್ ರಾಜ್ ದೂರು ನೀಡಿದರು. ಆದ್ರೆ, ಅದು ಗುಂಡಿನ ದಾಳಿ ಅಲ್ಲವೇ ಅಲ್ಲ ಅಂತ ಅಂದಿನ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಸ್ಪಷ್ಟಪಡಿಸಿದ್ದರು. [ವಿನೋದ್ ಮೇಲೆ ಗುಂಡಿನ ದಾಳಿ ನಡೆದಿಲ್ಲ : ಬಿದರಿ]

  ಇದರ ನಡುವೆ, ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಅವರ ತೋಟಕ್ಕೂ ಆಗಾಗ ಕಿಡಿಗೇಡಿಗಳು ಬೆಂಕಿ ಹಚ್ಚಿ ಬೆಳೆ ನಾಶ ಮಾಡುವ ಕಾರಣ, ವಿನೋದ್ ರಾಜ್ ಗೆ ಸದಾ ಕಾರಣ ರಿವಾಲ್ವರ್ ಇಟ್ಟುಕೊಳ್ಳಲು ಹಾಗೂ ಕಾಲಿಗೆ ಗುಂಡು ಹಾರಿಸಲು ಪೊಲೀಸರೇ ಪರ್ಮಿಷನ್ ಕೊಟ್ಟಿದ್ದಾರೆ ಅಂತ ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಿರಿಯ ನಟಿ ಲೀಲಾವತಿ ಬಾಯ್ಬಿಟ್ಟರು. [ಲೀಲಾವತಿ ಬಗ್ಗೆ ಶಿವರಾಜ್ ಕುಮಾರ್ ಮಾಡಿದ ಕಾಮೆಂಟ್]

  ಪ್ರಾಣ ಭಯದಲ್ಲಿ ಇರುವ ಲೀಲಾವತಿ ಹಾಗೂ ವಿನೋದ್ ರಾಜ್ ಈ ಘಟನೆ ಬಗ್ಗೆ ಬೇಸರದಿಂದ ಆಡಿರುವ ಮಾತುಗಳು ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

  ತೋಟದಲ್ಲಿ ಕಳ್ಳತನ ಆಗಿದ್ದಾಗ....

  ತೋಟದಲ್ಲಿ ಕಳ್ಳತನ ಆಗಿದ್ದಾಗ....

  ''ನನ್ನ ತೋಟದಲ್ಲಿ ಕಳ್ಳತನ ಆಗಿದ್ದಾಗ, ಎಂ.ಜಿ.ಆರ್ ಅವರು ಜೀಪ್ ನಲ್ಲಿ ಪೊಲೀಸ್ ರವರನ್ನ ಕಳುಹಿಸಿದ್ರು. ಇಡೀ ತೋಟವನ್ನೆಲ್ಲಾ ಪೊಲೀಸರು ಹುಡುಕುತ್ತಿದ್ರು'' - ಲೀಲಾವತಿ[ಲೀಲಾವತಿ ಚಿತ್ರರಂಗದಿಂದ ದೂರವಾದದ್ದು ಯಾಕೆ?]

  ಪಬ್ಲಿಸಿಟಿ ಯಾಕೆ ಬೇಕು?

  ಪಬ್ಲಿಸಿಟಿ ಯಾಕೆ ಬೇಕು?

  ''ಆದ್ರೀಗ, ನಮಗೆ ಯಾರೋ ಶೂಟ್ ಮಾಡಿದ್ದಾರೆ ಅಂದ್ರೆ ಸುಮ್ನೆ ಪಬ್ಲಿಸಿಟಿ ತಗೋಬೇಡಿ ಅಂತಾರೆ. ಸಾಯೋದನ್ನ ಯಾರಾದರೂ ಪಬ್ಲಿಸಿಟಿ ತೆಗೆದುಕೊಳ್ತಾರಾ? ಎರಡು ಮೂರು ಬಾರಿ ನಮ್ಮ ಮೇಲೆ ಶೂಟೌಟ್ ಆಗಿದೆ'' - ಲೀಲಾವತಿ [ನಟಿ ಲೀಲಾವತಿ ತೋಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ]

  ಶೂಟೌಟ್ ಆಗಿತ್ತು!

  ಶೂಟೌಟ್ ಆಗಿತ್ತು!

  ''ನಮ್ಮ ಕಾರ್ ಮೇಲೆ ಶೂಟೌಟ್ ಆಗಿತ್ತು. ಆಮೇಲೆ ಮಗನಿಗೆ ಪೊಲೀಸ್ ನವರು ಪರ್ಮಿಷನ್ ಕೊಟ್ಟಿದ್ದು ರಿವಾಲ್ವರ್ ಇಟ್ಟುಕೊಳ್ಳೋದಿಕ್ಕೆ. ಸೊಂಟದ ಕೆಳಗೆ ಎಲ್ಲಿಗೆ ಬೇಕಾದರೂ ಸುಡಿ ಅಂತ ಪರ್ಮಿಷನ್ ಕೊಟ್ಟರು'' - ಲೀಲಾವತಿ [ಹಿರಿಯ ನಟಿ ಲೀಲಾವತಿ ಕಣ್ಣೀರೊರೆಸುವವರು ಯಾರೂ ಇಲ್ವೇ?]

  ತೋಟಕ್ಕೆ ಬಿಡಲ್ಲ!

  ತೋಟಕ್ಕೆ ಬಿಡಲ್ಲ!

  ''ಇವತ್ತಿಗೂ ಆರು ಗಂಟೆ ಮೇಲೆ ಒಬ್ಬರನ್ನೂ ನಾವು ತೋಟಕ್ಕೆ ಬಿಡೋದಿಲ್ಲ. ಪೊಲೀಸ್ ನವರಿಗೂ ಭಯ ಬಂದುಬಿಡ್ತು'' - ಲೀಲಾವತಿ

  ಧೈರ್ಯದಿಂದ ಇದ್ದೇವೆ

  ಧೈರ್ಯದಿಂದ ಇದ್ದೇವೆ

  ''ಆದರೂ ಧೈರ್ಯ ಹೇಗೆ ಬಂತು ಗೊತ್ತಿಲ್ಲ. ಧೈರ್ಯ ತಂದುಕೊಂಡು ಅದೇ ತೋಟದಲ್ಲಿ ಈಗಲೂ ಇದ್ದೇನೆ'' - ಲೀಲಾವತಿ

  ಏಳು ಬಾರಿ

  ಏಳು ಬಾರಿ

  ''ಏಳು ಬಾರಿ ನಮಗೆ ಅಟ್ಯಾಕ್ ಆಯ್ತು. ರಿವಾಲ್ವರ್ ಅವಶ್ಯಕತೆ ಇದೆ. ಅದು ನಮಗೆ ಇದ್ದೇ ಇರುತ್ತೆ'' - ವಿನೋದ್ ರಾಜ್, ಲೀಲಾವತಿ ಪುತ್ರ

  English summary
  Kannada Veteran Actress Leelavathi revealed why her son Actor Vinod Raj carries Revolver with him always during Zee Kannada Channel's popular show Weekend With Ramesh season 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X