»   » ಆದಿ 'ಪ್ರಕಾಶ', ಅಂತ್ಯ 'ಗಣೇಶ': 'WWR-3'ಗೆ ಶುಭಂ

ಆದಿ 'ಪ್ರಕಾಶ', ಅಂತ್ಯ 'ಗಣೇಶ': 'WWR-3'ಗೆ ಶುಭಂ

Posted By:
Subscribe to Filmibeat Kannada

ವೀಕೆಂಡ್ ನಲ್ಲಿ ಇನ್ಮುಂದೆ ರಮೇಶ್ ಅರವಿಂದ್ ಅವರು ಬರಲ್ಲ......ಸಾಧಕರ ಸೀಟಿನಲ್ಲಿ ಇನ್ಮುಂದೆ ಯಾರು ಕೂರಲ್ಲ.....ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ 'ವೀಕೆಂಡ್ ವಿತ್ ರಮೇಶ್-3' ಪ್ರಸಾರವಾಗಲ್ಲ.......

ಹೌದು, ಸಾಧಕರ ಸಾಧನೆಯನ್ನ ಗೌರವಿಸಿ, ಅವರ ಜೀವನವನ್ನ ಮೆಲುಕು ಹಾಕುತ್ತಿದ್ದ ವಿಶೇಷ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್ ಮೂರನೇ ಆವೃತ್ತಿ ಅಂತ್ಯವಾಗಿದೆ. ನಟ ಪ್ರಕಾಶ್ ರೈ ಅವರ ಸಂಚಿಕೆಯೊಂದಿಗೆ ಶುರುವಾದ ಸೀಸನ್-3, ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಶುಭಂ ಹಾಡಿದೆ.

ಮಾರ್ಚ್ 25 ರಂದು ಶುರುವಾದ ಸಾಧಕರ ಜರ್ನಿ, 15 ವಾರಗಳು, 28 ಎಪಿಸೋಡ್ ಗಳು, 21 ಸಾಧಕರ ಜೊತೆ ಜುಲೈ 2 ರಂದು ಯಶಸ್ವಿಯಾಗಿ ಮುಗಿದಿದೆ. ಹಾಗಾದ್ರೆ, ಹೇಗಿತ್ತು ಗ್ರ್ಯಾಂಡ್ ಫಿನಾಲೆಯ ಅದ್ಭುತ ಕ್ಷಣಗಳು ಎನ್ನುವುದನ್ನ ಮುಂದೆ ಓದಿ.....

ಮೂರನೇ ಸೀಸನ್ ಗೆ 'ಶುಭಂ'

ರಮೇಶ್ ಅರವಿಂದ್ ನಿರೂಪಣೆ ಮಾಡಿಕೊಡುವ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿ ನಿನ್ನೆಗೆ (ಜುಲೈ 2) ಅಂತ್ಯವಾಗಿದೆ. ಸತತವಾಗಿ 28 ಎಪಿಸೋಡ್ ಗಳ ಮೂಲಕ ಕಿರುತೆರೆ ಪ್ರೇಕ್ಷಕರನ್ನ ರಂಜಿಸಿದ್ದ ಸುಂದರ ಕಾರ್ಯಕ್ರಮದ ಮೂರನೇ ಸೀಸನ್ ಅದ್ಧೂರಿಯಾಗಿ ಮುಗಿದಿದೆ.

ಗೋಲ್ಡನ್ ಸ್ಟಾರ್ ಕೊನೆಯ ಅತಿಥಿ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೊದಲನೇ ಅತಿಥಿಯಾಗಿ ಬಹುಭಾಷ ನಟ ಪ್ರಕಾಶ್ ರೈ ಆಗಮಿಸಿದ್ದರು. ಹಾಗೂ ಕೊನೆಯ ಅತಿಥಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಆಗಮಿಸಿದ್ದರು. ಅಂತಿಮ ಎರಡು ದಿನಗಳನ್ನ ಕಾರ್ಯಕ್ರಮವನ್ನ ಗಣೇಶ್ ಅವರ ಜೀವನ ಪಯಣದ ಮೂಲಕ ಯಶಸ್ವಿಯಾಗಿ ಮುಗಿಸಲಾಯಿತು.

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ ನಟ ಗಣೇಶ್.!

ಸೀಸನ್-2 ರಲ್ಲಿ ಸುದೀಪ್ ಕೊನೆಯ ಅತಿಥಿ

2016 ರಲ್ಲಿ ನಡೆದ 'ವೀಕೆಂಡ್ ವಿತ್ ರಮೇಶ್' ಎರಡನೇ ಆವೃತ್ತಿಯಲ್ಲಿ ಕಿಚ್ಚ ಸುದೀಪ್ ಅವರು ಗ್ರ್ಯಾಂಡ್ ಫಿನಾಲೆಯ ಅತಿಥಿಯಾಗಿದ್ದರು. ಮೊದಲನೇ ಆವೃತ್ತಿಯಲ್ಲಿ ನಿರೂಪಕ ರಮೇಶ್ ಅರವಿಂದ್ ಅವರೇ ಕೊನೆಯ ಅತಿಥಿಯಾಗಿ ಸಾಧಕರ ಕುರ್ಚಿಯಲ್ಲಿ ಕೂತಿದ್ದರು.

ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?

ಮೂರನೇ ಸೀಸನ್ ನಲ್ಲಿ ಯಾರೆಲ್ಲಾ ಬಂದಿದ್ದರು?

ನಟ ಪ್ರಕಾಶ್ ರೈ, ಜಗ್ಗೇಶ್, ಅರ್ಜುನ್ ಜನ್ಯ, ಗಂಗಾವತಿ ಪ್ರಾಣೇಶ್, ಭಾರತಿ ವಿಷ್ಣುವರ್ಧನ್, ಜಯಂತ್ ಕಾಯ್ಕಿಣಿ, ರವಿ.ಡಿ.ಚೆನ್ನಣ್ಣನವರ್, ವಿ.ಹರಿಕೃಷ್ಣ, ರಕ್ಷಿತ್ ಶೆಟ್ಟಿ, ಪ್ರಿಯಾಮಣಿ, ಕಾಶೀನಾಥ್, ಸಂತೋಷ್ ಹೆಗಡೆ, ಫ್ರೋ. ಕೃಷ್ಣೇಗೌಡ, ವಿಜಯ ರಾಘವೇಂದ್ರ, ಬಿ.ಜಯಶ್ರೀ, ವಿಜಯ ಸಂಕೇಶ್ವರ್, ಹೆಚ್.ಡಿ.ದೇವೇಗೌಡ, ಶ್ರುತಿ, ಹಿರೆಮಗಳೂರು ಕಣ್ಣನ್, ಸಿದ್ದರಾಮಯ್ಯ ಮತ್ತು ಗಣೇಶ್ ಈ ಬಾರಿ ಸಾಧಕರ ಕುರ್ಚಿಯಲ್ಲಿ ಕೂತಿದ್ದರು.

ಅಪ್ಪಿ-ತಪ್ಪಿ ಗಣೇಶ್ 'ಕಾಮಿಡಿ ಟೈಮ್' ಅವಕಾಶವನ್ನ ಕೈ ಬಿಟ್ಟಿದ್ದರೆ.?!

'ವೀಕೆಂಡ್ ವಿತ್ ರಮೇಶ್-4' ನಿರೀಕ್ಷಿಸಿ.....

ಇನ್ನು ಮುಂದಿನ ವರ್ಷ ಮತ್ತಷ್ಟು ಸಾಧಕರ ಜೊತೆಯಲ್ಲಿ 'ವೀಕೆಂಡ್ ವಿತ್ ರಮೇಶ್' ನಾಲ್ಕನೇ ಆವೃತ್ತಿ ಶುರುವಾಗಲಿದೆ. ಮುಂದಿನ ಸೀಸನ್ ನಲ್ಲಿ ಯಾರೆಲ್ಲಾ ಆಗಮಿಸಬಹುದು ಎಂಬ ಕುತೂಹಲದೊಂದಿಗೆ ಕಾಯುತ್ತೀರಿ.....

English summary
Zee Kannada Channel's Popular Show Weekend With Ramesh Season 3 Grand Finale is End With Golden Star Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada