Don't Miss!
- Technology
ಏರ್ಟೆಲ್ ಗ್ರಾಹಕರಿಗೆ ಶಾಕ್; ಕರ್ನಾಟಕವೂ ಸೇರಿದಂತೆ 7 ರಾಜ್ಯಗಳಲ್ಲಿ ರೀಚಾರ್ಜ್ ದರ ಹೆಚ್ಚಳ!
- News
Republic Day Parade 2023: ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ: ಪ್ರಲ್ಹಾದ್ ಜೋಶಿ ಹೇಳಿದ್ದೇನು?
- Automobiles
ಟಾಟಾ ಪಂಚ್ ಎಂಜಿನ್ನಲ್ಲಿ ಭಾರೀ ಬದಲಾವಣೆ... ಇನ್ಮುಂದೆ ಕಡಿಮೆ ಕಂಪನ, ಒಳಗೆ ಪಿನ್ಡ್ರಾಪ್ ಸೈಲೆನ್ಸ್
- Sports
ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಖುಷಿ, ನೋವು, ಕಣ್ಣೀರು ತುಂಬಿದ ಅಧ್ಯಕ್ಷ ಶರಣ್ ಪ್ರೋಮೋ
ಕಳೆದ ವಾರ ಸುಮಲತಾ ಅಂಬರೀಶ್ ಮತ್ತು ಟಿಎಸ್ ನಾಗಾಭರಣ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದು ಹೋಗಿದ್ದರು. ಈ ವಾರ ಯಾರು ಎಂಬ ಕುತೂಹಲಕ್ಕೆ ಜೀ ಕನ್ನಡ ಬ್ರೇಕ್ ಹಾಕಿದ್ದು, ಪ್ರೋಮೋ ಕೂಡ ಬಿಡುಗಡೆ ಮಾಡಿದೆ.
ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್, ಅಧ್ಯಕ್ಷ, ವಿಕ್ಟರಿ ಹೀರೋ ಶರಣ್ ಈ ವಾರ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಇದೀಗ, ಶರಣ್ ಸಂಚಿಕೆಯ ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ವಾಹ್ ಎನ್ನುವಂತಿದೆ.
ವೀಕೆಂಡ್
ವಿತ್
ರಮೇಶ್
ಸಾಧಕರ
ಕುರ್ಚಿ
ಮೇಲೆ
ಕಾಮಿಡಿ
ಸ್ಟಾರ್
ಶರಣ್
ಈ ಪ್ರೋಮೋದಲ್ಲಿ ಹೆಚ್ಚಾಗಿ ಏನೂ ಬಿಟ್ಟು ಕೊಡದ ಜೀ ವಾಹಿನಿ, ಶರಣ್ ಅವರ ಯಶಸ್ವಿ ಜರ್ನಿ ಹಿಂದೆಯೂ ನೋವಿನ ಕಥೆ ಇದೆ ಎಂಬ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲ ಶರಣ್ ಅವರ ಕಾರ್ಯಕ್ರಮಕ್ಕೆ ಯಾರೆಲ್ಲ ಬಂದಿದ್ದರು ಎಂಬುದನ್ನ ಕೂಡ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....

ಯಾರು ಆ ಮಮ್ಮಿ?
ಶರಣ್ ಅವರ ಸಹೋದರಿ ನಟಿ ಶ್ರುತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ತಂದೆಗೆ ಇಬ್ಬರು ಅವಳಿ ಜವಳಿ ಪತ್ನಿಯರು ಎಂಬುದು ತಿಳಿದ ಮಾಹಿತಿಯೇ. ಆದರೆ ಶರಣ್ ಅವರ ಸಂಚಿಕೆಯಲ್ಲಿ ಒಬ್ಬರು ಮಮ್ಮಿ ಗಮನ ಸೆಳೆದಿದ್ದಾರೆ. ಅವರ ಬಗ್ಗೆ ಮಾತನಾಡುತ್ತಾ ಶರಣ್ ಬಾವುಕರಾದರು. ಶ್ರುತಿ ಕೂಡ ಬಾವುಕರಾದರು. ಅಷ್ಟಕ್ಕೂ ಯಾರು ಆ ಮಮ್ಮಿ ಎನ್ನುವುದು ಕುತೂಹಲ ಮೂಡಿಸಿದೆ.

Rambo ನಾನು ಹೀರೋ ಅಲ್ಲ
ಸಿನಿಮಾ ಇಂಡಸ್ಟ್ರಿಗೆ ಬಂದು ಹಲವು ವರ್ಷಗಳವರೆಗೂ ಹಾಸ್ಯನಟನಾಗಿಯೇ ಅಭಿನಯಿಸುತ್ತಿದ್ದ ಶರಣ್, ತಮ್ಮ ನೂರನೇ ಸಿನಿಮಾ Rambo ಚಿತ್ರದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡ್ತಾರೆ. ಇಲ್ಲಿಂದ ಸತತವಾಗಿ ಹಿಟ್ ಚಿತ್ರಗಳನ್ನ ಕೊಡ್ತಾರೆ. ಆದರೆ, ಈ ಚಿತ್ರಕ್ಕೆ ನಾನು ಹೀರೋ ಅಲ್ಲ ಎಂದು ಕಣ್ಣಲ್ಲಿ ನೀರು ಚಿಮ್ಮಿದರು.
ವೀಕೆಂಡ್
ಸಾಧಕರ
ಸೀಟಿನಲ್ಲಿ
ಈ
ವಾರ
ಕನ್ನಡದ
ಖ್ಯಾತ
ನಟ

ಎಲ್ಲರೂ ರಿಜೆಕ್ಟ್ ಮಾಡಿದ್ರು
ಶರಣ್ ಹೀರೋ ಎಂದು ಹೇಳಿ ಅನೇಕರ ಬಳಿ ಹೋದ ಸಂದರ್ಭದಲ್ಲಿ ಎಲ್ಲರೂ ರಿಜೆಕ್ಟ್ ಮಾಡಿದರಂತೆ. 20 ನಿಮಿಷ ಬರುವ ಕಾಮಿಡಿ ಆಕ್ಟರ್ ನ ಹೀರೋ ಮಾಡ್ತೀರಾ ಎಂದು ಕಾಲೆಳೆದಿದ್ದರಂತೆ. ಈ ನೋವನ್ನ ಕೂಡ ಶರಣ್ ಹೇಳಿಕೊಂಡಿದ್ದಾರೆ.

ನನ್ನ ಹಣೆ ಬರಹವೇ ಫೇಲ್ ಆಗಿತ್ತಾ?
ಆಗೊಂದು ಯಶಸ್ಸಿಗಾಗಿ, ಅವಕಾಶಕ್ಕಾಗಿ ಕಾಯುತ್ತಿದ್ದ ಶರಣ್ ಗೆ ಎಲ್ಲಿಯೂ ಸಕ್ಸಸ್ ಸಿಗಲಿಲ್ಲವಂತೆ. ನನ್ನ ಹಣೆ ಬರಹದಲ್ಲೇ ಆ ದೇವರು ಎಲ್ಲದರಲ್ಲಿಯೂ ನೀನು ಫೇಲ್ ಫೇಲ್ ಎಂದು ಬರೆದಿದ್ದಾನಾ ಎಂಬ ಭಾವನೆ ಮೂಡಿತ್ತಂತೆ. ಹೀಗೆ, ಅಧ್ಯಕ್ಷ, ವಿಕ್ಟರಿ ಬಾರಿಸಿದ ಕಥೆಯೊಂದಿಗೆ ಅದನ್ನ ಸಾಧಿಸಿದ ಕಥೆಯೂ ಈ ವಾರ ಅನಾವರಣವಾಗಲಿದೆ.

ಗಮನ ಸೆಳೆದ ಸ್ಟಾರ್ ಕಲಾವಿದರು
ಇನ್ನು ನೆನಪಿರಲಿ ಪ್ರೇಮ್, ಮಾಸ್ಟರ್ ಆನಂದ್, ನಿರ್ದೇಶಕ ತರುಣ್ ಸುಧೀರ್ ಅವರು ಶರಣ್ ಅವರ ಸಂಚಿಕೆಯಲ್ಲಿ ಸರ್ಪೈಸ್ ಆಗಿ ಎಂಟ್ರಿ ಕೊಟ್ಟರು. ಶನಿವಾರ ರಾತ್ರಿ 9.30ಕ್ಕೆ ಶರಣ್ ಅವರ ವೀಕೆಂಡ್ ವಿತ್ ರಮೇಶ್ ಸಂಚಿಕೆ ಪ್ರಸಾರವಾಗಲಿದೆ.
ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ