For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್ ಬಾಯಿಂದ Sorry ಎಂಬ ಪದ

  By Rajendra
  |

  ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕಾಲನಿಷ್ಠೆಯುಳ್ಳವರು. ಅವರು ಸದಾ ಶಿಸ್ತಿನ ಸಿಪಾಯಿ. ಇಷ್ಟೊತ್ತಿಗೆ ಚಿತ್ರೀಕರಣ ಇದೆ ಎಂದರೆ ಸಮಯಕ್ಕೆ ಸರಿಯಾಗಿ ಅಲ್ಲಿರುತ್ತಾರೆ. ಯಾರನ್ನೂ ಕಾಯಿಸುವವರಲ್ಲ. ವೃತ್ತಿ ವಿಚಾರದಲ್ಲಿ ಅಷ್ಟೊಂದು ಪರ್ಫೆಕ್ಟ್.

  ಆದರೆ ಮೊನ್ನೆ ಅವರು ತಮ್ಮ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಪ್ರಚಾರಕ್ಕೆ ಸಮಯಕ್ಕೆ ಸರಿಯಾಗಿ ಹೋಗಲು ಆಗಲಿಲ್ಲ. ಸ್ವಲ್ಪ ತಡವಾಗಿ ಬಂದ ಅವರು ಎಲ್ಲರನ್ನೂ ಕ್ಷಮೆಯಾಚಿಸಿ ತಮ್ಮ ದೊಡ್ಡತನವನ್ನು ಮೆರೆದು ಎಲ್ಲರ ಚಕಿತಗೊಳಿಸಿದ್ದಾರೆ. ದೊಡ್ಡವರ ದೊಡ್ಡತನ ಅಂದರೆ ಇದೇ ನೋಡಿ.

  "I am extremely sorry for coming late. ಮನೆಯನ್ನು ಬೆಳಗ್ಗೆ 10ಗಂಟೆಗೆ ಬಿಟ್ಟೆ. ಆದರೆ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡ ಕಾರಣ ಒಂದೂವರೆ ಗಂಟೆ ತಡವಾಯಿತು. ಇದಕ್ಕೆ ನಾನು ಕ್ಷಮೆಯಾಚಿಸುತ್ತಿದ್ದೇನೆ" ಎಂದಿದ್ದಾರೆ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ.

  ಈ ಕಾರ್ಯಕ್ರಮಕ್ಕೆ ಅಮಿತಾಬ್ 11 ಗಂಟೆಗೆ ಆಗಮಿಸಬೇಕಾಗಿತ್ತು. ಆದರೆ ಅವರು ಬಂದಿದ್ದು ಮಧ್ಯಾಹ್ನ 12.30ಕ್ಕೆ. ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಕಾರಣ ಹೀಗಾಗಿದೆ. ಈ ಕಾರ್ಯಕ್ರಮಕ್ಕಾಗಿ ಹಲವಾರು ಮಾಧ್ಯಮಗಳು ಕಾಯುತ್ತಿದ್ದವು. ತಮ್ಮ ಪಿಆರ್ಓ ಮೂಲಕವೂ ಕ್ಷಮಾಪಣೆ ಸಂದೇಶವನ್ನು ಬಿಗ್ ಬಿ ರವಾನಿಸಿದ್ದರು.

  ಸೋನಿ ಎಂಟರ್ ಟೈನ್ ಮೆಂಟ್ ವಾಹಿನಿಯ ಆರನೇ ಆವೃತ್ತಿ 'ಕೌನ್ ಬನೇಗಾ ಕರೋಡ್ ಪತಿ' ಗೇಮ್ ಶೋ ಸೆಪ್ಟೆಂಬರ್ 7ರಿಂದ ಆರಂಭವಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಪ್ರಸಾರವಾಗಲಿದೆ. ಒಟ್ಟಿನಲ್ಲಿ 69ರ ಇಳಿಪ್ರಾಯದಲ್ಲೂ ಅಮಿತಾಬ್ ಅವರ ಲವಲವಿಕೆ ಮೆಚ್ಚಬೇಕಾದದ್ದೇ. (ಪಿಟಿಐ)

  English summary
  Megastar Amitabh Bachchan is a true professional and is well-known for his punctuality. But recently, Big B failed to make it on time for a promotional event of his upcoming game show Kaun Banega Crorepati. Mr Bachchan also apologised for being late.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X