twitter
    For Quick Alerts
    ALLOW NOTIFICATIONS  
    For Daily Alerts

    ಟಿವಿ ಮುಂದೆ ಹೆಚ್ಚು ಕೂರುವವರು ಮಹಿಳೆಯರೊ? ಪುರುಷರೊ? ಸಮೀಕ್ಷೆ ಕೊಟ್ಟಿದೆ ಉತ್ತರ

    |

    'ಮದುವೆ ಆದ ಮೇಲೆ ಟಿವಿ ಚಾನೆಲ್ ಸಹ ಬದಲಾಯಿಸಲು ಸಾಧ್ಯವಿಲ್ಲ' ಎಂಬುದು ವಿವಾಹಿತ ಪುರುಷರು ಅವಿವಾಹಿತ ಯುವಕರಿಗೆ ಹೇಳುವ ಜನಪ್ರಿಯ ಜೋಕು. ಆದರೆ ಈ ಜೋಕ್ ಅನ್ನು ಬದಲಾಯಿಸಬೇಕಾದ ಕಾಲ ಬಂದಿದೆ ಎನ್ನುತ್ತಿದೆ ಹೊಸದೊಂದು ಸಮೀಕ್ಷೆ. ಭಾರತದಲ್ಲಿ ಟಿವಿ ಮುಂದೆ ಕೂರುವ ಪುರುಷರ ಸಂಖ್ಯೆ ಹೆಚ್ಚಾಗಿದೆಯಂತೆ. ಮಹಿಳೆಯರು ಟಿವಿಯಿಂದ ದೂರ ಸರಿಯುತ್ತಿದ್ದಾರೆ ಎನ್ನುತ್ತಿದೆ 'ಒರ್ಮ್ಯಾಕ್ಸ್ ಮೀಡಿಯಾ' ಮಾಡಿರುವ ಹೊಸ ಸಮೀಕ್ಷೆ.

    ಸ್ಮಾರ್ಟ್‌ಫೋನ್‌ಗಳು ಮನೆ-ಮನೆ ತಲುಪಿದ್ದರೂ ಸಹ ಟಿವಿಗಳು ಈಗಲೂ ಕುಟುಂಬದ ಮನರಂಜನೆ, ಮಾಹಿತಿ ಸಾಧನವಾಗಿ ಉಳಿದಿದೆ. ಕಾಲವೊಂದಿತ್ತು, ರಾತ್ರಿ ಏಳು ದಾಟುತ್ತಿದ್ದಂತೆ ಮನೆಮಂದಿಯೆಲ್ಲಾ ಟಿವಿ ಮುಂದೆ ಹಾಜರಾಗುತ್ತಿದ್ದರು. ಅದರಲ್ಲೂ ಮಹಿಳೆಯರು ಟಿವಿ ರಿಮೋಟ್‌ನ ಒಡೆಯರಾಗಿದ್ದರು. ಆದರೆ ಹೊಸ ಸಮೀಕ್ಷೆ ಪ್ರಕಾರ ಪರಿಸ್ಥಿತಿ ಬದಲಾಗಿದೆ. ಅದರಲ್ಲಿಯೂ ಕೊರೊನಾ ಲಾಕ್‌ಡೌನ್‌ನ ಬಳಿಕ ಬದಲಾವಣೆಯು ದ್ವಿಗುಣ ವೇಗದಲ್ಲಿ ಆಗುತ್ತಿದೆಯಂತೆ.

    'ಯಾವ ಸಮಯದಲ್ಲಿ ಯಾವ ಚಾನೆಲ್‌ ಪ್ರಸಾರ ಆಗಬೇಕು ಎಂಬುದನ್ನು ಯಾರು ನಿರ್ಧರಿಸುತ್ತಾರೆ? ಹೀಗೆ ನಿರ್ಧರಿಸುವವರ ಲಿಂಗ ಹಾಗೂ ವಯಸ್ಸು ಏನು? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಈ ಸಮೀಕ್ಷೆ ಮಾಡಲಾಗಿದೆ. ಇದೇ ಮಾದರಿಯ ಸಮೀಕ್ಷೆಯನ್ನು 2012 ರಲ್ಲಿ ಮಾಡಲಾಗಿತ್ತು.

     Who Watches TV More In India Men Or Women

    ಸಮೀಕ್ಷೆಯ ವರದಿಯಂತೆ, ಮಧ್ಯಾಹ್ನ 11 ರಿಂದ 2 ಗಂಟೆ ವರೆಗೆ ಮಾತ್ರವೇ ಮಹಿಳೆಯರ ಕೈಲಿ ರಿಮೋಟ್ ಕಂಟ್ರೋಲ್ ಇರುತ್ತದೆ. ಅವರು ತಮಗೆ ಇಷ್ಟವಾದ ಚಾನೆಲ್‌ಗಳನ್ನು ನೋಡುತ್ತಾರೆ. ಈ ಸಮಯದಲ್ಲಿ 67% ನಷ್ಟು ಮಹಿಳೆಯರು ಟಿವಿ ವೀಕ್ಷಿಸುತ್ತಾರೆ. ಆದರೆ 7 ಗಂಟೆ ಬಳಿಕ ಪುರುಷರೇ ಹೆಚ್ಚು ಟಿವಿ ವೀಕ್ಷಿಸುತ್ತಾರೆ. ಆ ಸಮಯದಲ್ಲಿ ಪುರುಷರ ಟಿವಿ ವೀಕ್ಷಣೆ 51% ಆಗಿರುತ್ತದೆ.

    ಅದರಲ್ಲೂ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಸಂಜೆಯ ಬಳಿಕ ಮಹಿಳೆಯರು ಟಿವಿ ವೀಕ್ಷಿಸುವುದು ಕಡಿಮೆ. ತಮಿಳುನಾಡು, ಕರ್ನಾಟಕಗಳಲ್ಲಿ ಸಂಜೆಯ ಮೇಲೆ ಕೇವಲ 42% ಮಹಿಳೆಯರಷ್ಟೆ ಟಿವಿ ವೀಕ್ಷಿಸುತ್ತಾರೆ.

    ಇನ್ನು ವೀಕೆಂಡ್ ಸಮಯದಲ್ಲಿ ಟಿವಿ ರಿಮೋಟ್ ಮಾಲೀಕತ್ವ ಪುರುಷರದ್ದೇ ಆಗಿರುತ್ತದೆ. ಮಹಾರಾಷ್ಟ್ರದಲ್ಲಿ ಹೊರತುಪಡಿಸಿದರೆ ಭಾರತದ ಇನ್ನಾವ ರಾಜ್ಯದಲ್ಲಿಯೂ ವೀಕೆಂಡ್‌ನಲ್ಲಿ ದಿನದ ಯಾವುದೇ ಸಮಯದಲ್ಲಿ ಮಹಿಳೆಯರ ಟಿವಿ ವೀಕ್ಷಣೆ 50% ಗಿಂತ ಹೆಚ್ಚಾಗಿಲ್ಲ ಎಂಬುದು ವಿಶೇಷ.

    'ಪ್ರೈಂ ಟೈಮ್‌'ನಲ್ಲಿ ಟಿವಿ ರಿಮೋಟ್ ಬಹುತೇಕ ಪುರುಷರ ಕೈಯಲ್ಲಿಯೇ ಇರುತ್ತದೆ ಎನ್ನುತ್ತಿದೆ ಸಮೀಕ್ಷೆ. ನ್ಯೂಸ್‌ ಚಾನೆಲ್‌ಗಳ ಅಬ್ಬರ. ರಾಜಕೀಯ ಸಕ್ರಿಯತೆ ಹೆಚ್ಚಾಗಿರುವುದು. ಮಹಿಳೆಯರು ಧಾರಾವಾಹಿಗಳ ಮೇಲೆ ಆಸಕ್ತಿ ಕಳೆದುಕೊಂಡಿರುವುದು. ಮೊಬೈಲ್‌, ಒಟಿಟಿಗಳಿಂದಾಗಿ ಈ ದೊಡ್ಡ ಬದಲಾವಣೆ ಸಾಧ್ಯವಾಗಿದೆ.

    ಭಾರತದ ಎಲ್ಲ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿವಿಧ ಕುಟುಂಬ ಮಾದರಿಯ, ಆರ್ಥಿಕ ಸ್ಥರದ 5000 ಜನರ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆಯನ್ನು ಮಾಡಲಾಗಿದೆ.

    English summary
    New survey showing that men spending more time in front of TV than women in India. And Men are controlling the TV remote.
    Monday, April 12, 2021, 19:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X