For Quick Alerts
  ALLOW NOTIFICATIONS  
  For Daily Alerts

  ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಆರ್ ಜೆ ಪೃಥ್ವಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು

  |

  ಬಿಗ್ ಬಾಸ್ ಕನ್ನಡ ಸೀಸನ್-7 ನಾಲ್ಕನೆ ವಾರಕ್ಕೆ ಕಾಲಿಟ್ಟಿದೆ. ಈ ವಾರ ಬಿಗ್ ಮನೆಯ ಸ್ಪರ್ಧಿಗಳಿಗೆ ವಿಶೇಷವಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆರ್.ಜೆ ಪೃಥ್ವಿ ಈಗಾಗಲೆ ಬಿಗ್ ಮನೆ ಪ್ರವೇಶಿಸಿದ್ದಾರೆ. ಬಿಗ್ ಮನೆಯ ಸ್ಪರ್ಧಿಗಳ ಜೊತೆ ಎರಡು ದಿನಗಳನ್ನು ಕಳೆದಿದ್ದಾರೆ. ಒಂದಿಷ್ಟು ಚಮಕ್, ಬಿಲ್ಡಪ್ ನೊಂದಿಗೆ ಬಿಗ್ ಮನೆ ಎಂಟ್ರಿಯಾಗಿರುವ ಪೃಥ್ವಿ ಮನೆಯಲ್ಲಿ ಹೇಗಿರಲಿದ್ದಾರೆ ಎನ್ನುವುದು ವೀಕ್ಷಕರ ಕುತೂಹಲ.

  ಬಿಗ್ ಮನೆಯಲ್ಲಿ ಮೊದಲ ದಿನವೆ ಬಕ್ರ ಆದ ವೈಲ್ಡ್ ಕಾರ್ಡ್ ಸ್ಪರ್ಧಿ ಆರ್.ಜೆ ಪೃಥ್ವಿಬಿಗ್ ಮನೆಯಲ್ಲಿ ಮೊದಲ ದಿನವೆ ಬಕ್ರ ಆದ ವೈಲ್ಡ್ ಕಾರ್ಡ್ ಸ್ಪರ್ಧಿ ಆರ್.ಜೆ ಪೃಥ್ವಿ

  ಪೃಥ್ವಿ ಯಾರು ಎನ್ನುವುದು ಎಫ್ ಎಂ ಕೇಳುಗರಿಗೆ ಖಂಡಿತವಾಗಿ ಗೊತ್ತಿರುತ್ತೆ. ಪೃಥ್ವಿಯನ್ನು ನೋಡದಿದ್ದರು ಅವರ ಧ್ವನಿಯಂತು ಚಿರಪರಿಚಿತ. ಪೃಥ್ವಿ ತುಂಬಾ ಪ್ರತಿಭಾವಂತ. ಅಲ್ಲದೆ ಅಪ್ಪಟ ಕನ್ನಡಿಗ. ಈ ಪೃಥ್ವಿ ಯಾರಿರ ಬಹುದು ಎನ್ನುವ ಒಂದಿಷ್ಟು ಪ್ರಶ್ನೆಗಳಿಗೆ ಬಿಗ್ ಬಾಸ್ ವೇದಿಕೆಯ ಮೇಲೆ ಉತ್ತರ ಸಿಕ್ಕಿದೆ.

  ಡಿಫರೆಂಟ್ ಪೃಥ್ವಿ

  ಡಿಫರೆಂಟ್ ಪೃಥ್ವಿ

  ವಿಚಿತ್ರ ವಿಭಿನ್ನ ಶೈಲಿಯ ಪೃಥ್ವಿ ನೋಡಿ ಅನೇಕರು ಅಚ್ಚರಿ ಪಟ್ಟಿದ್ದಾರೆ. ಉದ್ದ ಮೀಸೆ, ಉದ್ದ ದಾಡಿ, ಬೋಳು ತಲೆ, ಮೂಗುಬೊಟ್ಟು, ನೈಟಿಯಂತಿದ್ದ ಕಪ್ಪನೆಯ ಉದ್ದವಾದ ಕಾಸ್ಟ್ಯೂಮ್ ಧರಿಸಿದ ಪೃಥ್ವಿ ವೇದಿಕೆಗೆ ಎಂಟ್ರಿಯಾಗುತ್ತಿದ್ದಂತೆ ವೀಕ್ಷಕರಲ್ಲಿ ಇದ್ದ ಕುತೂಹಲ ಇನ್ನೂ ಹೆಚ್ಚಾಯಿತು. "ಗಂಡಸರ ಫ್ಯಾಷನ್ ಬೋರ್ ಆಗಿದೆ ಎಂದು ಈ ರೀತಿ ಡ್ರೆಸ್ ಮಾಡಿಕೊಳ್ಳುತ್ತಿದ್ದೀನಿ" ಎನ್ನುವ ಮಾತು ಕೂಡ ವೀಕ್ಷಕರಿಗೆ ಅಷ್ಟೆ ಅಚ್ಚರಿ ಮೂಡಿಸಿದೆ.

  ರಶ್ಮಿಗಿಂತ ಕಳಪೆ ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ.!ರಶ್ಮಿಗಿಂತ ಕಳಪೆ ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ.!

  ಮಣಿಕಟ್ಟಿನ ಗಾಯದಿಂದ ಟೆನಿಸ್ ನಿಂದ ಹೊರಬಂದ ಪೃಥ್ವಿ

  ಮಣಿಕಟ್ಟಿನ ಗಾಯದಿಂದ ಟೆನಿಸ್ ನಿಂದ ಹೊರಬಂದ ಪೃಥ್ವಿ

  ಪೃಥ್ವಿ ಸದ್ಯ ಆರ್ ಜೆ ಆಗಿ ಕೆಲಸ ಮಾಡುತ್ತಿದ್ದಾರೆ. ಫೀವರ್ 104 ಎಫ್ ಎಂ ನಲ್ಲಿ ಬೆಳಗ್ಗೆ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಪೃಥ್ವಿ ಆರ್ ಜೆ ಮಾತ್ರವಲ್ಲ, ಟೆನಿಸ್ ಆಟಗಾರ. 18 ವರ್ಷಗಳ ಕಾಲ ಪೃಥ್ವಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಟೆನಿಸ್ ಪಂದ್ಯಗಳನ್ನು ಆಡಿದ್ದಾರೆ. ನಂತರ ಗಾಯಗೊಂಡ ಕಾರಣ ಟೆನಿಸ್ ಆಟದಿಂದ ಹಿಂದೆ ಸರಿದ್ದಾರೆ. 2001ರಿಂದ ಆರ್ ಜೆ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ವಿಡ್ಜರ್ಲ್ಯಾಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ರೇಡಿಯೋ ಫೆಸ್ಟಿವಲ್ ನಲ್ಲಿ ಭಾರತದಿಂದ ಇವರೊಬ್ಬರೆ ಭಾಗಿಯಾಗಿದ್ದರು. 2008ರಲ್ಲಿ ಆರ್ ಜೆ ಆಫ್ ದಿ ಇಯರ್ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ.

  ಸರ್ಟಿಫೈಡ್ ಪೈಲಟ್

  ಸರ್ಟಿಫೈಡ್ ಪೈಲಟ್

  ಪೃಥ್ವಿಯ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ, ಆದರೆ ಪೃಥ್ವಿ ಈಗಾಗಲೆ ಮದುವೆ ಆಗಿ ಡೈವರ್ಸ್ ಆಗಿದೆ ಎನ್ನುವುದು ಗೊತ್ತಾಗಿದೆ. ಪೃಥ್ವಿ ಅವರಿಗಿದ್ದ ಹವ್ಯಾಸಗಳಲ್ಲಿ ಪೈಲಟ್ ಓಡಿಸುವುದು ವಿಶೇಷ. ಪೃಥ್ವಿ ಸರ್ಟಿಫೈಡ್ ಪೈಲಟ್ ಕೂಡ ಆಗಿದ್ದಾರೆ. ಪೈಲಟ್ ಆಗುವ ಆಸೆ ಹೇಗೆ ಚಿಗುರಿತು ಎನ್ನುವ ಬಗ್ಗೆ ಪೃಥ್ವಿ ಬಿಗ್ ಬಾಸ್ ವೇದಿಕೆ ಮೇಲೆ ಬಹಿರಂಗ ಪಡಿಸಿದ್ದಾರೆ.

  ಬೆಂಕಿಗೆ ಬಿತ್ತು ಫೋಟೋಗಳು: 'ಬಿಗ್ ಬಾಸ್' ಮನೆಯಲ್ಲಿನ್ನೂ ಯುದ್ಧ ಶುರು.!ಬೆಂಕಿಗೆ ಬಿತ್ತು ಫೋಟೋಗಳು: 'ಬಿಗ್ ಬಾಸ್' ಮನೆಯಲ್ಲಿನ್ನೂ ಯುದ್ಧ ಶುರು.!

  ಪೃಥ್ವಿ ಬಳಿ ಇದೆ ಪವರ್ ಹ್ಯಾಂಗ್ ಗ್ಲೈಡರ್

  ಪೃಥ್ವಿ ಬಳಿ ಇದೆ ಪವರ್ ಹ್ಯಾಂಗ್ ಗ್ಲೈಡರ್

  ಎಕ್ಸ್ ಹೆಂಡತಿ ಜೊತೆ ಸೌತ್ ಆಫ್ರಿಕಾ ಪ್ರವಾಸಕ್ಕೆ ಹೋದಾಗ ಅಲ್ಲಿ ವಿಕ್ಟೋರಿಯ ಫಾಲ್ಸ್ ನೋಡಲು ಹೋಗಿದ್ದಾರೆ. ಅಲ್ಲಿ ಪವರ್ ಹ್ಯಾಂಗ್ ಗ್ಲೈಡರ್ ನಲ್ಲಿ ಫಾಲ್ಸ್ ನೋಡಿದ ಪೃಥ್ವಿಗೆ ಅದರ ಮೇಲೆ ಆಸೆ ಉಂಟಾಗಿದೆ. ಭಾರತಕ್ಕೆ ವಾಪಸ್ ಆಗುತ್ತಿದ್ದಂತೆ ಪವರ್ ಹ್ಯಾಂಗ್ ಗ್ಲೈಡರ್ ಫ್ಲೈಟ್ ತೆಗೆದುಕೊಂಡಿದ್ದಾರೆ. ಅಲ್ಲದೆ ಎಕ್ಸ್ ಆರ್ಮಿ ಆಫೀಸರ್ ಬಳಿ ಕೇವಲ 20 ದಿನಗಳಲ್ಲೆ ಓಡಿಸುವುದನ್ನು ಕಲಿತುಕೊಂಡು, ನಂತರ ಸ್ವತಹ ಪೃಥ್ವಿ ಟೇಕಾಫ್ ಮಾಡಿದ್ದಾರಂತೆ. ವಿವಿದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪೃಥ್ವಿ ಈಗ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ತನ್ನಿಂದ ಹೆಚ್ಚು ಮನರಂಜನೆ ನಿರೀಕ್ಷೆ ಮಾಡಬಹುದು ಎನ್ನುವ ಬರವಸೆ ಕೂಡ ನೀಡಿದ್ದಾರೆ. ಹಾಗಾಗಿ ವೀಕ್ಷಕರಲ್ಲೂ ಪೃಥ್ವಿ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

  English summary
  Kannada Bigg Boss wild card entry contestants R J Prithvi's Unknown Facts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X