Just In
Don't Miss!
- News
ಗಣರಾಜ್ಯೋತ್ಸವ ದಿನದ ಫ್ಲೈಪಾಸ್ಟ್ ನೇತೃತ್ವ ವಹಿಸಲಿದ್ದಾರೆ ಸ್ವಾತಿ ರಾಥೋಡ್
- Finance
Gold Silver Rate: ಪ್ರಮುಖ ನಗರಗಳಲ್ಲಿ ಜ.25ರ ಚಿನ್ನ, ಬೆಳ್ಳಿ ದರ
- Sports
"ಸಿಡ್ನಿಯಲ್ಲಿ ನಾನು 30 ನಿಮಿಷ ಹೆಚ್ಚು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು"
- Automobiles
ಪವರ್ಫುಲ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ಸ್ಕೋಡಾ ಕುಶಾಕ್
- Lifestyle
ನಿಮ್ಮ ದೇಹದ ಮೇಲಿನ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾರಾಯಣ ಮೂರ್ತಿ ಅವರನ್ನ ರಿಜೆಕ್ಟ್ ಮಾಡಿದ್ದರು ವಿಪ್ರೋ ಸಂಸ್ಥಾಪಕ ಪ್ರೇಮ್ ಜಿ
ಕೇವಲ 10 ಸಾವಿರ ರೂಪಾಯಿಯಿಂದ ಆರಂಭವಾದ ಇನ್ಫೋಸಿಸ್ ಸಂಸ್ಥೆ ಈಗ 3 ಲಕ್ಷ 24 ಸಾವಿರ ಕೋಟಿ ರೂಪಾಯಿಗಳ ವಹಿವಾಟು ಮಾಡುತ್ತಿದೆ. 42 ದೇಶಗಳಲ್ಲಿ 162 ಶಾಖೆಗಳಲ್ಲಿ ಹೊಂದಿದ್ದು 2.28 ಉದ್ಯಮಿಗಳು ಈ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದಾರೆ.
1981ರಲ್ಲಿ ಪುಣೆಯ ಸಣ್ಣ ಕಚೇರಿಯಲ್ಲಿ ಆರಂಭವಾದ ಇನ್ಫೋಸಿಸ್ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಜಗತ್ತಿನ ಪ್ರಭಾವಿ ಉದ್ಯಮಿಗಳಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಒಬ್ಬರು. ಹೀಗೆ ಅತಿ ಚಿಕ್ಕದಾಗಿ ಆರಂಭವಾದ ಸಂಸ್ಥೆ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣ ನಾರಾಯಣ ಮೂರ್ತಿ.
ಇನ್ಫೋಸಿಸ್ ನಾರಾಯಣ ಮೂರ್ತಿ 6 ಸಾವಿರ ಸಾಲ ಪಡೆದು ಕೋಟ್ಯಧಿಪತಿ ಆದ ಕಥೆ
ಅಂದಿನ ಕಾಲದಲ್ಲಿ ಬಹುದೊಡ್ಡ ಸಂಸ್ಥೆಯಾಗಿದ್ದ ವಿಪ್ರೋ ಕಂಪನಿಯ ಸಂಸ್ಥಾಪಕ ಪ್ರೇಮ್ ಜೀ ಅವರು ನಾರಾಯಣ ಮೂರ್ತಿ ಅವರನ್ನ ರಿಜೆಕ್ಟ್ ಮಾಡಿದ್ದರಂತೆ. ಅಂದು ಅವರು ಮಾಡಿದ ಆ ತಿರಸ್ಕಾರ ನಾರಾಯಣ ಮೂರ್ತಿ ಅವರ ಬದುಕನ್ನ ಬದಲಿಸಿತು. ವಿಪ್ರೋ ಕಂಪನಿಯಿಂದ ರಿಜೆಕ್ಟ್ ಆದ್ಮೇಲೆ ನಾರಾಯಣ ಮೂರ್ತಿ ಅವರಿಗೆ ಇನ್ಫೋಸಿಸ್ ಮಾಡಬೇಕು ಎಂಬ ಅಲೋಚನೆ ಹೇಗೆ ಬಂತು? ಮುಂದೆ ಓದಿ....

ಸ್ನೇಹಿತನ ಮೂಲಕ ಪ್ರೇಮ್ ಜೀ ಭೇಟಿ
ಆಗಾಗಲೇ ಸಣ್ಣ ಉದ್ಯಮ ಆರಂಭಿಸಿ ನಿರೀಕ್ಷೆಯ ಯಶಸ್ಸು ಸಿಗದೇ, ಬೇರೆ ಏನಾದರೂ ಮಾಡಬೇಕು ಎಂಬ ಯೋಚನೆಯಲ್ಲಿದ್ದ ನಾರಾಯಣ ಮೂರ್ತಿ ಅವರಿಗೆ ಸ್ನೇಹಿತ ಪ್ರಸನ್ನ ಒಂದು ಸಲಹೆ ಕೊಟ್ಟರು. ವಿಪ್ರೋಂ ಕಂಪನಿಯಲ್ಲಿ ಎಚ್.ಆರ್ ಮ್ಯಾನೇಜರ್ ಆಗಿದ್ದ ಅವರು 'ಪ್ರೇಮ್ ಜೀ ಅವರನ್ನ ಭೇಟಿ ಮಾಡಬಹುದು, ಸಾಫ್ಟವೇರ್ ರಫ್ತು ಯೋಜನೆ ವಿಪ್ರೋ ಕಂಪನಿ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು. ನಾರಾಯಣ ಮೂರ್ತಿ ಅವರು ಕೂಡ ಭೇಟಿ ಮಾಡಲು ನಿರ್ಧರಿಸಿದರು.

ಸಾಫ್ಟ್ ವೇರ್ ರಫ್ತು ಯೋಜನೆ ಮಾಡಿದ್ದ ಮೂರ್ತಿ
ಆಗಿನ ಸಮಯದಲ್ಲಿ ಕಂಪ್ಯೂಟರ್ ಇರಲಿಲ್ಲ. ಸಾಫ್ಟ್ ವೇರ್ ರಫ್ತು ಮಾಡೋದರಿಂದ ದೊಡ್ಡ ಕಂಪನಿ ಆಗಿ ಬೆಳೆಯಬಹುದು ಎಂದು ನಿರ್ಧರಿಸಿದ್ದ ನಾರಾಯಣ ಮೂರ್ತಿ ಅವರಿಗೆ ಸ್ನೇಹಿತ ನೀಡಿದ ಸಲಹೆಯಿಂದ, ಪ್ರೇಮ್ ಜೀ ಅವರನ್ನ ಭೇಟಿ ಮಾಡಲು ನಿರ್ಧರಿಸಿದರು. ಕ್ಲಬ್ ವೊಂದರಲ್ಲಿ ಭೇಟಿಯೂ ಆಯಿತು.
ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ

ಯೋಚನೆ ಮಾಡಿ ತಿರಸ್ಕರಿಸಿದ ಪ್ರೇಮ್ ಜೀ
ಅಂದು ಕ್ಲಬ್ ವೊಂದರಲ್ಲಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜಿ ಅವರನ್ನ ನಾರಾಯಣ ಮೂರ್ತಿ ಭೇಟಿ ಮಾಡಿದರು. ಜೊತೆಯಲ್ಲಿ ಪ್ರಸನ್ನ ಅವರ ಸ್ನೇಹಿತರೊಬ್ಬರು ಇದ್ದರು. ಅಂದು ಪ್ರೇಮ್ ಜೀ ಅವರು ಯೋಚನೆ ಮಾಡಿ ನಾರಾಯಣ ಮೂರ್ತಿ ಅವರನ್ನ ತಿರಸ್ಕರಿಸಿದರು. ಯಾಕೆ, ಏನಾಯಿತು ಎಂಬುದನ್ನ ನಾರಾಯಣ ಮೂರ್ತಿ ಅವರು ಹೇಳಲಿಲ್ಲ.

ಆ ತಿರಸ್ಕಾರ ಒಳ್ಳೆದಾಯಿತು
ಅಂದು ಪ್ರೇಮ್ ಜೀ ಅವರು ತಿರಸ್ಕಾರ ಮಾಡಿದ್ದು ಒಳ್ಳೆದಾಯಿತು. ಇಲ್ಲವಾಗಿದ್ದರೆ ಇನ್ಫೋಸಿಸ್ ಅಂತಹ ಕಂಪನಿ ತೆರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ನಾರಾಯಣ ಮೂರ್ತಿ ಅವರು ಹೇಳಿಕೊಂಡರು.
ಹೆಣ್ಣು ಮಕ್ಕಳ ಪಾಲಿಗೆ ನಿಜವಾದ 'ದಾರಿದೀಪ' ಈ ಸುಧಾಮೂರ್ತಿ

ಸೋತಾಗ ಕುಗ್ಗಬಾರದು
ಇಂದಿನ ಯುವಕ ಮತ್ತು ಯುವತಿಯವರಿಗೆ ಈ ಬಗ್ಗೆ ಸಲಹೆ ನೀಡಿದ ನಾರಾಯಣ ಮೂರ್ತಿ ಅವರು ''ನಿಮಗೆ ಏನಾದರೂ ನಿರಾಸೆಯಾದ ಘಟನೆ ಸಂಭವಿಸಿದರೆ ಬೇಜಾರಾಗಬೇಡಿ. ಯಾಕಂದ್ರೆ, ನಿಮಗೆ ಇನ್ನೊಂದು ದೊಡ್ಡ ಅವಕಾಶವನ್ನೇ ಕೊಡ್ತಾನೆ'' ಎಂದರು.