»   » ರವಿ ಬೆಳಗೆರೆ ಮಾತಿನ ವೈಖರಿಗೆ ವೀಕ್ ಆದ ಮೈಕ್ ಬ್ಯಾಟರಿ

ರವಿ ಬೆಳಗೆರೆ ಮಾತಿನ ವೈಖರಿಗೆ ವೀಕ್ ಆದ ಮೈಕ್ ಬ್ಯಾಟರಿ

Posted By:
Subscribe to Filmibeat Kannada

'ರಮೇಶ್ ಸರ್ ಮೈಕ್ ಬ್ಯಾಟರಿ ವೀಕ್ ಆಗಿದೆ, ಬೇಗ ಬ್ಯಾಟರಿ ಚೇಂಚ್ ಮಾಡು..' ಅಂತ ಪ್ರೊಡಕ್ಷನ್ ಹುಡುಗರು ಹೇಳ್ತಿದ್ದ ಹಾಗೆ ಒಂದು ಕ್ಷಣ ರಮೇಶ್ ಅರವಿಂದ್ ಅವರೇ ಅವಾಕ್ಕಾದರಂತೆ, 'ಅಲ್ಲಾ ನಾನು ಬ್ಯಾಟರಿ ಖಾಲಿಯಾಗುವಷ್ಟು ಮಾತಾಡಿದ್ನಾ' ಅಂತ ಕಣ್ ಬಾಯ್ ಬಿಟ್ಟರಂತೆ.

ಹೌದು ಏನಪ್ಪಾ ಇದು ಅಂತ ಅನ್ಕೊಂಡ್ರಾ?, ಇದೆಲ್ಲಾ ಸ್ವಾರಸ್ಯಕರ ಘಟನೆ ನಡೆದಿದ್ದು, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಶೂಟಿಂಗ್ ಸಂದರ್ಭದಲ್ಲಿ.[ಕಿರುತೆರೆಯಲ್ಲಿ ರವಿ ಬೆಳಗೆರೆ 'ಹೇಳಿ ಹೋಗು ಕಾರಣ']

Writer and Journalist Ravi Belagere in Weekend with Ramesh

ಅಂದಹಾಗೆ ರಮೇಶ್ ಅರವಿಂದ್ ಅವರು ಇಷ್ಟೆಲ್ಲಾ ಮಾತಾಡಿ ಬ್ಯಾಟರಿ ಖಾಲಿ ಮಾಡ್ಕೊಂಡು ಮಾತಾಡಿದ್ದು, ಯಾರ ಜೊತೆ ಅಂತ ಗೊತ್ತಾ?, ದ ಗ್ರೇಟ್ 'ಹಾಯ್ ಬೆಂಗಳೂರು' ವಾರಪತ್ರಿಕೆಯ ಮುಖ್ಯ ಸಂಪಾದಕ ರವಿ ಬೆಳಗೆರೆ ಅವರ ಜೊತೆ.

ಅತೀ ಶೀಘ್ರದಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು ವಿರಾಜಮಾನರಾಗಲಿದ್ದಾರೆ.

ಇಂದಿಗೂ ಬರಹಗಾರ ಕಮ್ ಪತ್ರಕರ್ತ ರವಿ ಬೆಳಗೆರೆ ಅವರ ಹಲವಾರು ಬರಹಗಳನ್ನು ಇಷ್ಟಪಡುವ ಅಭಿಮಾನಿಗಳು ಸಾವಿರಾರು ಮಂದಿ ಇದ್ದಾರೆ. ಇನ್ನು ರವಿ ಅವರು ತಮ್ಮ ಹಳೆಯ ಜೀವನವನ್ನು ವೀಕೆಂಡ್ ನಲ್ಲಿ ರಮೇಶ್ ಜೊತೆ ಮತ್ತೊಮ್ಮೆ ಮೆಲುಕು ಹಾಕಿದ್ದಾರೆ.[ಜನಶ್ರೀ ಟಿವಿ ಮುಖ್ಯಸ್ಥರಾಗಿ ಬೆಳಗೆರೆ ರವಿ]

Writer and Journalist Ravi Belagere in Weekend with Ramesh

ಇನ್ನು ರವಿ ಅವರೊಂದಿಗೆ ಅವರ ಧರ್ಮಪತ್ನಿ ಲಲಿತಾ ಬೆಳಗೆರೆ, ಮಗಳು ಭಾವನಾ ಬೆಳಗೆರೆ ಮತ್ತು ಚೇತನಾ ಬೆಳಗೆರೆ, ಅಳಿಯ ನಟ ಶ್ರೀನಗರ ಕಿಟ್ಟಿ, ಮೊಮ್ಮಕ್ಕಳು, ನಿವೇದಿತಾ, ಮತ್ತು ರವಿ ಅವರ ಖಾಸ ಗೆಳೆಯರು ಆಗಮಿಸಿ ನೆನಪುಗಳಿಗೆ ಸಾಥ್ ನೀಡಿದ್ದಾರೆ.

ಅತೀ ಶೀಘ್ರದಲ್ಲಿ ಪತ್ರಕರ್ತ ರವಿ ಬೆಳೆಗೆರೆ ಅವರ ನೆನಪಿನ ಪುಸ್ತಕದ ಪುಟವನ್ನು ಒಂದೊಂದಾಗಿ ತಿರುವಿ ಹಾಕಲಿದ್ದು, ಇವರ ನೆನಪುಗಳಿಗೆ ಜೊತೆಯಾಗಲು ಅಭಿಮಾನಿಗಳಂತೂ ಕಾತರದಿಂದ ಕಾದಿದ್ದಾರೆ. ಒಟ್ನಲ್ಲಿ ರವಿ ಬೆಳಗೆರೆ ಸಂಚಿಕೆಯ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್ ಸೂಪರ್ ಹಿಟ್ ಆಗೋದು ಗ್ಯಾರಂಟಿ.

English summary
Writer and Journalist Ravi Belagere recently attended the 'Weekend with Ramesh - 2' and shared his experiences.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada