Don't Miss!
- News
ಮಂಗೇಶ್, ಲೀಲಾಬಾಯಿ, ವೆಂಕಣ್ಣ, ಸುಬ್ಬಯ್ಯ- ಉ.ಕ. ಸ್ವಾತಂತ್ರ್ಯ ಹೋರಾಟಗಾರರ ರೋಚಕ ಕಥೆಗಳು
- Sports
ಭಾರತದ ವಿರುದ್ಧ ಏಕದಿನ ಸರಣಿ ಗೆಲ್ಲಲಿದ್ದೇವೆ ಎಂದು ಭವಿಷ್ಯ ನುಡಿದ ಜಿಂಬಾಬ್ವೆ ಆಟಗಾರ
- Technology
ಭಾರತದಲ್ಲಿ ರಿಯಲ್ಮಿ 9i 5G ಫೋನ್ ಬಿಡುಗಡೆ ದಿನಾಂಕ ಬಹಿರಂಗ!
- Finance
ಉದ್ಯಮಿ ರಾಕೇಶ್ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ? ಮೌಲ್ಯ ಎಷ್ಟು?
- Automobiles
ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಸಿಬಿ300ಎಫ್ ಬೈಕ್ ರಿವ್ಯೂ
- Lifestyle
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಹಿಟ್ಲರ್ ಕಲ್ಯಾಣ: ತೆರೆ ಮೇಲೆ ನೀನಾ, ನಾನಾ? ತೆರೆ ಹಿಂದೆ ದುರ್ಗಾ-ಲೀಲಾ ಫುಲ್ ಕ್ಲೋಸ್..!
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಸೊಸೆಯಂದಿರಲ್ಲಿ ದುರ್ಗಾ ಬಹಳ ಪ್ರಭಾವಿತೆ. ಅಧಿಕಾರ ನನಗೆ ಸಿಗಬೇಕು. ಎಜೆಯ ಪರ್ಫೆಕ್ಟ್ ಸೊಸೆ ಅಂತ ನಾನೇ ಅನ್ನಿಸಿಕೊಳ್ಳಬೇಕು. ಹೀಗೆ ನಾನಾ ಯೋಚನೆಯ ದಾರಿಯಲ್ಲಿ ದುರ್ಗಾ ಸಾಗುತ್ತಿದ್ದಾಳೆ. ಇದೆ ಕಾರಣಕ್ಕಾಗಿಯೇ ಲೀಲಾಳನ್ನು ಕಂಡರೆ ಇನ್ನಿಲ್ಲದ ಕೇಡು ಬುದ್ಧಿ ತೋರಿಸುತ್ತಿರುತ್ತಾಳೆ. ಲೀಲಾ-ಎಜೆ ದೂರವಾಗಲಿ ಎಂದು ಬಯಸುತ್ತಿದ್ದಾಳೆ. ಆದರೆ ಇದಕ್ಕೆಲ್ಲಾ ಅಂತರ ಬಿಡಬೇಕಲ್ಲ. ಅಂತರಾಳ ಆತ್ಮ ಎಜೆ ಮತ್ತು ಲೀಲಾಳನ್ನು ಕಾಯುತ್ತಿದೆ.
ಸದ್ಯಕ್ಕೆ ಲೀಲಾ ಮತ್ತು ಎಜೆಯನ್ನು ದೂರ ಮಾಡಲು ಶತ ಪ್ರಯತ್ನ ಮಾಡುತ್ತಿರುವ ದುರ್ಗಾ, ಈಗ ಡಿವೋರ್ಸ್ ಕೊಡುತ್ತಿದ್ದಾರೆಂದು ಖುಷಿಯಾಗಿದ್ದಾಳೆ. ಧಾರಾವಾಹಿಯಲ್ಲಿ ಹೀಗೆ ನಾನಾ ಕಾರಣಗಳನ್ನಿಟ್ಟುಕೊಂಡು ಯಾವಾಗಲೂ ದ್ವೇಷಕಾರುವ ದುರ್ಗಾ ತೆರೆಹಿಂದೆ ಇದೇ ಲೀಲಾಳನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ. ಅದಕ್ಕೆಂದು ಸೋಶಿಯಲ್ ಮೀಡಿಯಾದಲ್ಲಿರುವ ವಿಡಿಯೋಗಳೇ ಸಾಕ್ಷಿ.
ಜೊತೆ
ಜೊತೆಯಲಿ:
ಅನು
ಸಿರಿಮನೆ
ತಂದೆ
ಸುಬ್ಬುನ
ಆಸ್ಪತ್ರೆಗೆ
ಕರೆದುಕೊಂಡು
ಹೋದ
ಅವಾಂತರ
ಹೇಗಿತ್ತು?

ಸೆಟ್‌ನಲ್ಲಿ ಕುಟುಂಬದವರಂತೆ ಇರುವ ಎಜೆ ಫ್ಯಾಮಿಲಿ
'ಹಿಟ್ಲರ್ ಕಲ್ಯಾಣ'ದಲ್ಲಿ ಎಜೆನೇ ಯಜಮಾನ. ಎಜೆ ಎಂದರೆ ಮೂವರು ಸೊಸೆಯಂದಿರು ಗಢಗಢ ಅಂತ ನಡುಗುತ್ತಾರೆ. ಅಷ್ಟೇ ಅಲ್ಲ ಲೀಲಾ ಕೂಡ ಎಜೆಗೆ ಭಯಬೀಳುತ್ತಾಳೆ. ದುರ್ಗಾ, ಲಕ್ಷ್ಮೀ, ಸರಸ್ವತಿ ಮೂವರು ಲೀಲಾಳ ದುಶ್ಮನ್. ಆದರೆ ಅಜ್ಜಿ ಮಾತ್ರ ಲೀಲಾಳಿಗೆ ತುಂಬಾನೇ ಸಪೋರ್ಟ್. ಆದರೆ ಶೂಟಿಂಗ್ ಟೈಮ್‌ನಲ್ಲಿ ಸೈಕಲ್ ಗ್ಯಾಪ್ ಸಿಕ್ಕಿದರು ಹರಟೆ ಹೊಡೆಯುತ್ತಾ, ಕುಟುಂಬದವರಂತೆ ಸಮಯ ಕಳೆಯುವುದು ಇದೆ ಎಜೆ ಫ್ಯಾಮಿಲಿ. ತೆರೆ ಮೇಲೆ ಎಷ್ಟು ಪ್ರೀತಿಯಿಂದ ಇರುತ್ತಾರೋ, ತೆರೆ ಹಿಂದೆಯೂ ಅಷ್ಟೇ ಪ್ರೀತಿಯಿಂದ ಇರುತ್ತಾರೆ.
ಪುಟ್ಟಕ್ಕನ
ಮಕ್ಕಳು:
ದೊರೆ
ಅರಸಿ
ಬಂದ
ಸ್ನೇಹಾಗೆ
ಕಂಠಿ
ನೋಡಿ
ಶಾಕ್..!
ದುರ್ಗಾಳ ಜೊತೆ ತೆರೆ ಹಿಂದೆ ಹೇಗಿರುತ್ತೆ ಸಂಬಂಧ?
ತೆರೆ ಮೇಲೆ ಹೀರೊಯಿನ್-ವಿಲನ್ ಆಗಿರುವವರು ತೆರೆ ಹಿಂದೆ ಮಾತ್ರ ಸಖತ್ ಕ್ಲೋಸ್ ಆಗಿ, ಆತ್ಮೀಯವಾಗಿರುತ್ತಾರೆ. ಅದರಂತೆ ಎಜೆ ಸೊಸೆ ಮತ್ತು ಹೆಂಡತಿ ಕೂಡ. ಲೀಲಾ ಮತ್ತು ದುರ್ಗಾ ತೆರೆ ಮೇಲೆ ಅದೆಷ್ಟು ಕಿತ್ತಾಡುತ್ತಾರೋ ತೆರೆ ಹಿಂದೆ ಅಷ್ಟೇ ಅದ್ಭುತವಾಗಿರುತ್ತಾರೆ. ಲೀಲಾ ಸಿಕ್ಕಾಪಟ್ಟೆ ರೀಲ್ ಮಾಡುತ್ತಿರುತ್ತಾಳೆ. ಆ ರೀಲ್‌ನಲ್ಲಿ ಹೆಚ್ಚು ಸಾಥ್ ನೀಡಿರುವುದು ದೊಡ್ಡ ಸೊಸೆ ದುರ್ಗಾ. ಈಗ ಹೊಸದೊಂದು ರೀಲ್ ಬಿಟ್ಟಿದ್ದಾರೆ.

ಎಜೆ ಅಮ್ಮನು ರೀಲ್ಸ್‌ನಲ್ಲಿ ಬ್ಯುಸಿ
'ಹಿಟ್ಲರ್ ಕಲ್ಯಾಣ'ದಲ್ಲಿ ವಯಸ್ಸು ಅನ್ನೋದು ಒಂದು ನಂಬರ್ ಅಷ್ಟೇ. ಎಜೆಗೆ ಮೂವರು ಮಕ್ಕಳು ಆದರೂ ಹ್ಯಾಂಡ್ಸಮ್ ಬಾಯ್, ಫಿಟ್ ಅಂಡ್ ಫೈನ್. ಇನ್ನು ಎಜೆ ಅಮ್ಮನಿಗೆ ತಲೆಯಲ್ಲಿ ಕೂದಲು ಬೆಳ್ಳಗಾಗಿದೆ ಅಷ್ಟೇ. ಆದರೆ ಬ್ಯೂಟಿ ಸೊಸೆಯಂದಿರಿಗಿಂತ ಡಬ್ಬಲ್. ಹೀಗಾಗಿ ಮನೆಯಲ್ಲಿರುವವರೆಲ್ಲ ಆಕ್ಟೀವ್ ಆಗಿನೇ ಇದ್ದಾರೆ. ಹೀಗಾಗಿಯೇ ರೀಲ್ಸ್ ಮಾಡುವಾಗಲೂ ಅಜ್ಜಿ ಸಪರೇಟ್ ಎಂಬುದೇನಿಲ್ಲ. ಎಲ್ಲರ ಜೊತೆಗೂಡಿ ಒಂದೆರಡು ಸ್ಟೆಪ್ ಹಾಕುವುದೇ. ಅಂಥದ್ದೊಂದು ವಿಡಿಯೋ ಇದೀಗ ದೊಡ್ಡ ಸೊಸೆ ದುರ್ಗಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಿದೆ.
ಪುಟ್ಟಕ್ಕನ
ಮಕ್ಕಳು:
ಸಹನಾ-ಮುರುಳಿ
ಮೇಷ್ಟ್ರ
ಪ್ರೀತಿಗೆ
ಸ್ನೇಹಾ
ಅಡ್ಡಗಾಲು
ಹಾಕುತ್ತಾಳಾ
?
ಅಮ್ಮನ ಕಿತಾಪತಿ ಗೊತ್ತಾದ್ರೆ ಲೀಲಾ ಏನು ಮಾಡುತ್ತಾಳೆ?
ಸದ್ಯ ಅಜ್ಜಿಗೆ ಮಗ ಸೊಸೆ ಚೆನ್ನಾಗಿರಬೇಕೆಂದು ಬಯಸುತ್ತಾರೆ. ಅದರಂತೆ ಇಬ್ಬರ ಸಂಬಂಧ ಗಟ್ಟಿಯಾಗಿರಲೆಂದೇ ಇಂದು ಮನೆಯಲ್ಲಿ ಪೂಜೆಯನ್ನು ಮಾಡಿಸುತ್ತಿದ್ದಾರೆ. ಆ ಪೂಜೆಯಲ್ಲಿ ಆಶೀರ್ವಾದ ಮಾಡಲು ಹೊರಟವರಿಂದ ಡಿವೋರ್ಸ್ ವಿಚಾರ ಬಟಾಬಯಲಾಗಿದೆ. ಆದರೆ ಇದು ಲೀಲಾಳಿಗೆ ಗೊತ್ತೆ ಇಲ್ಲ. ಇದೆಲ್ಲಾ ಲೀಲಾ ಅಮ್ಮನ ಕಿತಾಪತಿ. ಈಗ ವಿಚಾರ ಗೊತ್ತಾದರೆ ಲೀಲಾಳ ಅಮ್ಮ ಬೇರೆಯದ್ದೇ ಕತೆ ಕಟ್ಟುವ ಸಾಧ್ಯತೆ ಇದೆ. ಇಂದಿನ ಎಪಿಸೋಡ್ ಅಷ್ಟು ಇಂಟ್ರೆಸ್ಟಿಂಗ್ ಆಗಿದೆ.