For Quick Alerts
  ALLOW NOTIFICATIONS  
  For Daily Alerts

  ಮಾಧುರಿ ದೀಕ್ಷಿತ್ ಬಾಯಿಬಡುಕಿ; ಆದ್ರೂ ಸೂಪರ್

  |

  ಅದೊಂದು ಕಾಲದ ಸುಂದರಿ ಮಾಧುರಿ ದೀಕ್ಷಿತ್, ಈಗಲೂ ಪ್ರೇಕ್ಷಕರ ಹೃದಯ ಧಕ್ ಧಕ್ ಆಗಲು ಕಾರಣರಾಗಿದ್ದಾರೆ. ಮದುವೆ, ಪತಿ, ಮಕ್ಕಳು ಎಂದು ಇಷ್ಟು ದಿನ ಬಣ್ಣದ ಲೋಕದಿಂದ ದೂರವಿದ್ದ ಮಾಧುರಿ, ಈಗ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮತ್ತೆ ಬಣ್ಣಹಚ್ಚಿ ಪ್ರೇಕ್ಷಕರೆದುರು ಪ್ರತ್ಯಕ್ಷವಾಗುತ್ತಿದ್ದಾರೆ.

  ಇಂತಿಪ್ಪ ಮಾಧುರಿ, ಸದ್ಯದಲ್ಲೇ ಬಾಯಿಬಡುಕಿ ಪಟ್ಟ ಗಿಟ್ಟಿಸಲಿದ್ದಾರೆ. ಕರೀನಾ ಕಪೂರ್ ಹಾಗೂ ವಿದ್ಯಾ ಬಾಲನ್, ಈಗಾಗಲೇ ಅಂತಹ ಪಾತ್ರಗಳಲ್ಲಿ ಮಿಂಚಿದ್ದಾರೆ. ಇದೀಗ ಮಾಧುರಿ ಸರದಿ. ಅನುಭವ ಸಿನ್ಹಾರ ಬರಲಿರುವ ಚಿತ್ರ 'ಗುಲಾಬಿ ಗ್ಯಾಂಗ್ ನಲ್ಲಿ ಮಾಧುರಿ ಕೆಟ್ಟ ಪದಗಳನ್ನು ಮಾತನಾಡುವ ಬಾಯಿಬಡುಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ಗುಲಾಬಿ ಗ್ಯಾಂಗ್ ಚಿತ್ರದ ಕಥೆ, ಉತ್ತರ ಪ್ರದೇಶದ ಬಾಂಡ್ ಜಿಲ್ಲೆಯಲ್ಲಿರುವ ಪರಿವೀಕ್ಷಕ ಮಹಿಳಾ ಸಮುದಾಯವನ್ನು ಶೋಧಿಸಿದ ಸಂಪತ್ ಪಾಲ್ ಎನ್ನುವವರಿಗೆ ಸಂಬಂಧಿಸಿದ್ದು. ಈ ಚಿತ್ರದ ಕಥೆಗೆ ಮಾಧುರಿ ಬಾಯಿಂದ ಅಂತಹ ಕೆಟ್ಟ ಪದಗಳು ಬರಲೇಬೇಕು. ಹಾಗಾಗಿ ಇಷ್ಕಿಯಾ ಚಿತ್ರದ ಪಾತ್ರಕ್ಕೆ ಸಮನಾದ ಪಾತ್ರವನ್ನು ಮಾಡಲು ಮಾಧುರಿ ತುದಿಗಾಲಲ್ಲಿ ನಿಂತಿದ್ದಾರೆ. (ಏಜೆನ್ಸೀಸ್)

  English summary
  Madhuri Dixit will get abusive and use foul languages in Anubhav Sinha's Gulabi Gang.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X