»   »  ರಾಖಿ ಬಾಳ ಸಂಗಾತಿಯಾಗಿ ಉದ್ಯಮಿ ಇಲೇಶ್

ರಾಖಿ ಬಾಳ ಸಂಗಾತಿಯಾಗಿ ಉದ್ಯಮಿ ಇಲೇಶ್

Subscribe to Filmibeat Kannada

ಕಳೆದ ಐದು ವಾರಗಳಿಂದ ನಡೆಯುತ್ತಿದ್ದ 'ರಾಖಿ ಕಾ ಸ್ವಯಂವರ'ಕ್ಕೆ ಭಾನುವಾರ ತೆರೆಬಿತ್ತು. ಕಡೆಗೂ ರಾಖಿ ಸಾವಂತ್ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಳೆದು ತೂಗಿ ಕೆನಡಾ ಮೂಲದ ಉದ್ಯಮಿ ಇಲೇಶ್ ರನ್ನು ರಾಖಿ ವರಿಸಿದ್ದಾರೆ. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕೆನಡಾ ಮೂಲದ ಇಲೇಶ್ ಪರುಂಜವಾಲಾ ಕೊರಳಿಗೆ ವಿಜಯ ಮಾಲೆ ಬಿದ್ದಿದೆ.

ಭಾನುವಾರ ನಡೆದ ಅಂತಿಮ ಸುತ್ತಿನಲ್ಲಿ ಮೂವರು ಸ್ಪರ್ಧೆಯಲ್ಲಿದ್ದರು. ಮಾನಸ್, ಕ್ಷಿತಿಜ್, ಇಲೇಶ್ ಅಂತಿಮ ಸುತ್ತಿನಲ್ಲಿದ್ದ ವಧು ಆಕಾಂಕ್ಷಿಗಳು. ಆದರೆ ರಾಖಿ ಮಾತ್ರ ಇಲೇಶ್ ಗೆ ತನ್ನ ಮನಸ್ಸು ಕೊಟ್ಟಿದ್ದಾರೆ. ಸಾಕಷ್ಟು ವಾದ, ವಿವಾದ ಹಾಗೂ ಚರ್ಚೆಗೆ ರಾಖಿ ಕಾ ಸ್ವಯಂವರ ಅನುವು ಮಾಡಿಕೊಟ್ಟಿತ್ತು.

ರಾಖಿ ಸ್ವಯಂವರಕ್ಕೆ ಭಾನುವಾರ ಕ್ಲೈಮ್ಯಾಕ್ಸ್ ನಿಗದಿಯಾಗಿತ್ತು. ರಾಖಿ ಕುಟುಂಬಿಕರು ಹಾಗೂ ಆಪ್ತರು ಕ್ಲೈಮ್ಯಾಕ್ಸ್ ಸನ್ನು ಕಣ್ಣಾರೆ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ಅಂತಿಮ ಸುತ್ತಿನ ಸ್ವಯಂವರಕ್ಕೆ ಬಂದಿದ್ದ ಮೂವರು ಯುವಕರೊಂದಿಗೆ ರಾಖಿ ಕುಟುಂಬ ಸದಸ್ಯರು ಹಾಜರಿದ್ದರು. ಕೊನೆಗೆ ರಾಖಿ ಕೆನಡಾದ ಟೊರಂಟೋ ಉದ್ಯಮಿ ಇಲೇಶ್ ಗೆ ಬೋಲ್ಡ್ ಆದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada