»   » ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ

ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ

Posted By:
Subscribe to Filmibeat Kannada
Mallika Sherawat is going to do a film on Christ
ಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ.

ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ ಯೇಸುಕ್ರಿಸ್ತ ಭಾರತಕ್ಕೆ ಬಂದ ಪುರಾವೆಗಳು ಸಿಗುತ್ತವೆ.

ಸಾಧಾರಣವಾಗಿ ಬೈಬಲ್ ನಲ್ಲಿ ಕ್ರಿಸ್ತನ ಯೌವನಾವಸ್ಥೆಯ ಅಂದರೆ 13 ರಿಂದ 30 ವರ್ಷದವರೆಗಿನ ಜೀವನದ ಚಿತ್ರಣ ಕಾಣಸಿಗುವುದಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ದೊರೆತಿಲ್ಲವಾದರೂ ಸಾಕಷ್ಟು ನಂಬಲರ್ಹ ದಂತಕತೆಗಳಿವೆ. ಅದರಲ್ಲಿ ಪ್ರಮುಖವಾದದು ಕ್ರಿಸ್ತನ ಕಾಶ್ಮೀರಯಾನ.

ಅದೆಲ್ಲಾ ಸರಿ, ಈ ಚಿತ್ರಕ್ಕೆ ಮಲ್ಲಿಕಾ ಯಾಕೆ ಅಂದರೆ, ಮಲ್ಲಿಕಾ ಸೌಂದರ್ಯದ ಖನಿ ಮಾತ್ರವಲ್ಲ. ತತ್ವಜ್ಞಾನದ ಹಿನ್ನೆಲೆಯುಳ್ಳ ವೈವಿಧ್ಯಮಯ ವ್ಯಕ್ತಿ. ಆ ಪಾತ್ರಕ್ಕೆ ಆಕೆ ಖಂಡಿತಾ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ನನಗಿದೆ ಎನ್ನುತ್ತಾನೆ ನಿರ್ದೇಶಕ ಡ್ರೂ ಹೆರಿಯಟ್.

ಮಲ್ಲಿಕಾಳಂತೂ ಈ ಪಾತ್ರ ಸಿಕ್ಕಿದ್ದಕ್ಕೆ ಸಕತ್ ಖುಷಿ ಪಟ್ಟಿರೋ ಹಾಗಿದೆ. ಕ್ವಾಯಿಷ್, ಮರ್ಡರ್ ಮುಂತಾದ ಚಿತ್ರಗಳನ್ನು ಮಾಡಿದ ಈ ಬಿಂದಾಸ್ ಹುಡುಗಿ ಯೋಗಿನಿ ಪಾತ್ರ ಮಾಡಿ ಪವಿತ್ರಳಾಗುವೆ ಎಂಬ ಕನಸು ಕಾಣುತ್ತಿದ್ದಾಳಂತೆ. ನಮ್ಮ ಪುರಾಣ, ಇತಿಹಾಸಗಳಲ್ಲಿ ನಾನು ಕಂಡಂತೆ ಮಹಿಳೆಯರಿಗೆ ಹೆಚ್ಚಿನ ತಿಳುವಳಿಕೆ ಹಾಗೂ ಹಾಸ್ಯ ಪ್ರಜ್ಞೆ ಕಮ್ಮಿಯಿರುವ ಪಾತ್ರಗಳೇ ಸೃಷ್ಟಿಯಾಗಿದೆ. ಆದರೆ ಇದಕ್ಕೆ ವಿರುದ್ಧವಾದ ಪಾತ್ರವನ್ನು ನಿರ್ವಹಿಸಲು ಕಾತುರನಾಗಿದ್ದೇನೆ ಎಂದ ಮಲ್ಲಿಕಾ ಧ್ಯಾನಾವಸ್ಥೆಗೆ ಜಾರಿದ್ದು ಸುಳ್ಳಲ್ಲ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada