»   » ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜೊತೆ ಪ್ರೀತಿ ಜಿಂಟಾ

ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜೊತೆ ಪ್ರೀತಿ ಜಿಂಟಾ

Posted By:
Subscribe to Filmibeat Kannada

ಬಾಲಿವುಡ್ ತಾರೆ, ಗುಳಿಕೆನ್ನೆ ಸುಂದರಿ ಪ್ರೀತಿ ಜಿಂಟಾ ಈಗ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಆಕೆ ಅಮೆರಿಕಾದಲ್ಲಿ ನೋಡಿದ್ದು, ತಿಂದಿದ್ದು ಎಲ್ಲವನ್ನೂ ಟ್ವೀಟ್ ಮಾಡುತ್ತಿದ್ದಾರೆ. ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜೊತೆ ಊಟ ಮಾಡಿದ ರೋಚಕ ಕ್ಷಣಗಳನ್ನು ಟ್ವೀಟ್ ಮಾಡಿದ್ದಾರೆ.

ಸೆರೆನಾ ವಿಲಿಯಮ್ಸ್ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿದ್ದಾರೆ. "ಸೆರೆನಾ ಜೊತೆ ಊಟ ಮಾಡಿದ್ದು ತುಂಬ ಖುಷಿಕೊಟ್ಟಿದೆ. ಆಕೆಯ ಜೀವನ ಶೈಲಿ ಇಷ್ಟವಾಯಿತು. ಆಕೆಯ ಭೇಟಿ ಜೀವನದಲ್ಲಿ ಹೊಸ ಸ್ಫೂರ್ತಿ ತುಂಬಿದೆ... ಆಕೆಯ ಆರಾಧಿಸುವ ಅಭಿಮಾನಿಗಳಲ್ಲಿ ನಾನೂ ಒಬ್ಬಳು " ಎಂದಿದ್ದಾರೆ ಪ್ರೀತಿ ಜಿಂಟಾ.

ಪ್ರೀತಿ ಜಿಂಟಾಗೆ ದಿವಂಗತ ಪಾಪ್ ತಾರೆ ಮೈಕೇಲ್ ಜಾಕ್ಸನ್ ಅವರ ಸಹೋದರ ಜರ್ಮೈನ್‌ರನ್ನು ಭೇಟಿ ಆಗುವ ಸದಾವಕಾಶವು ಸಿಕ್ಕಿತು ನ್ಯೂಯಾರ್ಕ್‌ನಲ್ಲಿ. ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಲುವಾಗಿ ಟೈಮ್ಸ್ ಸ್ಕ್ವೇರ್‌ಗೆ ಪ್ರೀತಿ ಭೇಟಿ ನೀಡಿದ್ದರು. ಜರ್ಮೈನ್ ಹಾಗೂ ಆತನ ಪತ್ನಿ ಹಲೀಮಾ ಅವರೊಂದಿಗೂ ಊಟ ಮಾಡಿದ ಸಂಭ್ರವನ್ನು ಪ್ರೀತಿ ಹಂಚಿಕೊಂಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada