For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಸಿಕ್ಕಬಿದ್ದ ರಾಣಿ ಮುಖರ್ಜಿ-ಆದಿತ್ಯ ಛೋಪ್ರಾ

  |

  ಬಾಲಿವುಡ್ ನಟಿ ರಾಣಿ ಮುಖರ್ಜಿ ಮತ್ತು ಆದಿತ್ಯಾ ಛೋಪ್ರಾ ನಡುವೆ ಗೆಳೆತನ ಇತ್ತೆಂಬುದು ಬಾಲಿವುಡ್ ಗೆ ಮಾತ್ರವಲ್ಲ, ಜಗತ್ತಿಗೇ ಗೊತ್ತು. ಆದರೆ ಅವರೆಂದೂ ಸಾರ್ವಜನಿಕವಾಗಿ ಒಟ್ಟಿಗೆ ಸಿಕ್ಕಿಹಾಕಿಕೊಂಡಿರಲಿಲ್ಲ. ರಾಣಿ ಮುಖರ್ಜಿ ಮೊನ್ನೆ ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ವಿದೇಶದಿಂದ ಆದಿತ್ಯ ಕುಟುಂಬದ ಜೊತೆ ವಾಪಸ್ಸಾಗುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾದ್ಯಮದ ಹದ್ದಿನ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

  ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ಅಮೆರಿಕಾ ಅಥವಾ ಲಂಡನ್ ನಿಂದ ಅವರಿಬ್ಬರೂ ಆದಿತ್ಯ ಕುಟುಂಬದ ಜೊತೆ ಬಂದಿದ್ದಾರೆ. ಆದಿತ್ಯ ಛೋಪ್ರಾ ಮಾಧ್ಯಮದ ಕಣ್ಣಿಗೆ ಬೀಳಲು ಇಷ್ಟಪಡುತ್ತಲೇ ಇರಲಿಲ್ಲ. ಆದರೆ ಮೊನ್ನೆ ಮಾಧ್ಯಮದವರು ಫೋಟೋ ತೆಗೆಯುತ್ತಿದ್ದಂತೆ ಅವರು ಮಜುಗರಕ್ಕೆ ಒಳಗಾದರು. ರಾಣಿ ಕೂಡ ಕಸಿವಿಸಿಯಿಂದ ಒದ್ದಾಡಿದ್ದು ಕಂಡುಬಂತು.

  ರಾಣಿ ಮತ್ತು ಆದಿತ್ಯ ಮದುವೆಯಾಗುವುದಿಲ್ಲ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿತ್ತು. ಕಾರಣ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸದ್ಯದ ಆದಿತ್ಯ ಹೆಂಡತಿ ಅತಿದೊಡ್ಡ ಮೊತ್ತದ ಪರಿಹಾರದ ಹಣವನ್ನು ಕೇಳುತ್ತಿದ್ದಾರೆ. ಹಾಗಾಗಿ ಆದಿತ್ಯ ರಾಣಿ ಒಂದಾಗಲಾರರು ಎಂದೇ ಭಾವಿಸಿದ್ದರು. ಆದರೆ ಅದೀಗ ಸುಳ್ಳಾಗಿ ಈ ವರ್ಷದಲ್ಲೇ ಹಸೆಮಣೆ ಏರುವ ತಯಾರಿ ನಡೆದಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)

  English summary
  Rani Mukherjee and Aditya Chopra were spotted together at the Mumbai airport, along with Aditya's family. 
 
  Wednesday, January 4, 2012, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X