»   » ಅಮಿತಾಬ್ ಮನದಾಳದ ಆನ್‌ಲೈನ್ ದಿನಚರಿ

ಅಮಿತಾಬ್ ಮನದಾಳದ ಆನ್‌ಲೈನ್ ದಿನಚರಿ

Subscribe to Filmibeat Kannada

ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಬ್ಲಾಗ್‌ಗಿಂತ ಸೂಕ್ತವಾದ ಮಾಧ್ಯಮ ಮತ್ತೊಂದು ಇರಲಿಕ್ಕಿಲ್ಲ. ಮತ್ತೊಬ್ಬರೊಂದಿಗೆ ಬೆರೆಯಲು ಇದಕ್ಕಿಂತಲೂ ಉತ್ತಮ ವೇದಿಕೆ ಸಿಗುವುದಿಲ್ಲ. ಹೀಗಾಗಿಯೇ ಬಾಲಿವುಡ್‌ನ ಖ್ಯಾತ ತಾರೆ ಅಮಿತಾಬ್ ಬಚ್ಚನ್ ಅಭಿಮಾನಿಗಳ ಸನಿಹಕೆ ಆನ್‌ಲೈನ್‌ನಲ್ಲಿ ಹತ್ತಿರವಾಗಿದ್ದಾರೆ. ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಬ್ಲಾಗನ್ನೊಮ್ಮೆ ತೆರೆದು ನೋಡಿ.

''ನನ್ನ ಆಲೋಚನೆಗಳು, ಅಭಿಪ್ರಾಯಗಳು, ಜನ ನನ್ನ ಬಗ್ಗೆ ಏನು ಹೇಳುತ್ತಾರೆ. ಅವರಿಗೆ ರೀಲ್ ಹಾಗೂ ರಿಯಲ್ ಜೀವನದ ನಡುವಿನ ವ್ಯತ್ಯಾಸ ತಿಳಿಸಿಕೊಡಲು ನನ್ನ ಬ್ಲಾಗು ಸಾಕಷ್ಟು ಸಹಾಯ ಮಾಡುತ್ತದೆ. ನನ್ನ ಬ್ಲಾಗಿನಲ್ಲಿ ಗುಸುಗುಸು ಸುದ್ದಿಗಳಿಗಿಂತ ವಾಸ್ತವ ಸಂಗತಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕಟ್ಟುಕಥೆಗಿಂತ ಸತ್ಯ ಏನು ಎಂದು ತಿಳಿಸಲು ಈ ರೀತಿಯ ವೇದಿಕೆಯನ್ನು ಹುಡುಕುತ್ತಿದ್ದೆ. ಜನ ಈಗ ನನ್ನ ದೃಷ್ಟಿಕೋನ, ಆಲೋಚನೆ, ಕಲ್ಪನೆಗಳನ್ನು ಓದಿ ಖುಷಿ ಪಡುತ್ತಿದ್ದಾರೆ'' ಎನ್ನುತ್ತಾರೆ ಅಮಿತಾಬ್.

ಬ್ಲಾಗ್‌ಗಳು ವೈಯಕ್ತಿಕ, ಅವು ಆನ್‌ಲೈನ್ ದಿನಚರಿಗಳು. ಮಾತು ಹಾಗೂ ಪದ ಬಳಕೆಗೆ ಮಿತಿ ಹೇರುವುದಿಲ್ಲ. ಎಲ್ಲ ಕಟ್ಟಪ್ಪಣೆಗಳನ್ನು ಗಾಲಿಗೆ ತೂರಿ ಮಾತಿನ ಲಹರಿ ಹರಿಸಬಹುದು. ಅಮಿತಾಬ್ ಬಚ್ಚನ್ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಬಿಗ್‌ಅಡ್ಡ.ಕಾಮ್‌ಗೆ ಬಂದಿರುವುದು ನಮಗೆ ಅತೀವ ಸಂತಸ ತಂದಿದೆ ಎನ್ನುತ್ತಾರೆ ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನ ಅಧ್ಯಕ್ಷರಾದ ರಾಜೇಶ್.

ಮುಕ್ತವಾಗಿ ನೀವು ನನ್ನೊಂದಿಗೆ ಮಾತನಾಡಲು,ಚರ್ಚಿಸಲು ನಾನು ನನ್ನ ಅಡ್ಡದಲ್ಲಿ ಸದಾ ಸಿದ್ಧ. ನೀವು ಬರೆಯಿರಿ. ನಾನು ಪ್ರತಿಕ್ರಿಯಿಸುತ್ತೇನೆ. ತಡ ಯಾಕೆ? ಎನ್ನುತ್ತಾರೆ ಅಮಿತಾಬ್. ಹೌದು ಅವರು ಹಾಗೆ ಉತ್ತರಿಸಿದ್ದಾರೆ ಸಹ. ಚಿತ್ರೀಕರಣದಲ್ಲಿ ಗಾಯಗೊಂಡಿದ್ದು, ಅನಾರೋಗ್ಯದಿಂದ ಬಳಲಿದ್ದು, ಅವರ ಇಷ್ಟ ಕಷ್ಟ ಎಲ್ಲವನ್ನು ಹೇಳಿಕೊಂಡಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada