»   »  ಐಶ್ವರ್ಯ ರೈರನ್ನು ಆಂಟಿ ಎಂದ ತುಂಟಿ ಸೋನಮ್

ಐಶ್ವರ್ಯ ರೈರನ್ನು ಆಂಟಿ ಎಂದ ತುಂಟಿ ಸೋನಮ್

Posted By:
Subscribe to Filmibeat Kannada
Sonam calls Aishwarya 'Aunty Ji'
ಮಾಜಿ ವಿಶ್ವಸುಂದರಿ ಐಶ್ವರ್ಯ ರೈಅವರ ಸೌಂದರ್ಯವನ್ನು ಹೊಗಳುತ್ತಿದ್ದರೆ ಆಕೆ ಐಸ್ ನಂತೆ ಕರಗಿಹೋಗುತ್ತಿದ್ದರು. ಆದರೆ ಆ ಸುಂದರಿಯನ್ನು ಯಾರಾದರೂ ಆಂಟಿ ಎಂದು ಕರೆದರೆ ಹೇಗಿರುತ್ತದೆ? ಐಶ್ವರ್ಯಗೆ ನಖಶಿಖಾಂತ ಕೋಪ ಬರದೆ ಇರುತ್ತದೆಯೇ. ಐಶ್ ರನ್ನು ಆಂಟಿ ಎಂದು ಕರೆದು ಆಕೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಮಗಳು ಸೋನಮ್ ಕಪೂರ್!

ಈಕೆ ಐಶ್ವರ್ಯ ರೈರನ್ನು ಆಂಟಿ ಎಂದು ಕರೆದ ಕಾರಣ ಇಬ್ಬರ ನಡುವೆಯೂ ಅಗಾಧ ಕಂದಕ ಏರ್ಪಟ್ಟಿದೆ. ಅಷ್ಟೇ ಅಲ್ಲ ಕೇನ್ಸ್ ಚಿತ್ರೋತ್ಸವದಲ್ಲಿ ತಾನು ರತ್ನಗಂಬಳಿ ಮೇಲೆ ನಡೆಯುವ ಅವಕಾಶದಿಂದ ವಂಚಿತಲಾಗಳು ಐಶ್ ಕಾರಣ ಎಂದು ಸೋನಮ್ ಆರೋಪಿಸಿದ್ದಾರೆ. ಈ ಸಂಬಂಧ ಐಶ್ ಸಿಟ್ಟಾಗಿದ್ದು ಸೋನಮ್ ಕ್ಷಮೆಯಾಚಿಸಬೇಕು ಎಂದು ಹಠ ಹಿಡಿದಿದ್ದರು. ಸದ್ಯಕ್ಕೆ ಈ ವಿವಾದ ತಣ್ಣಗಾಗಿದೆ ಎಂದು ಬಾಲಿವುಡ್ ಒಂಚೂರು ನಿಟ್ಟುಸಿರು ಬಿಟ್ಟಿತು.

ಅಷ್ಟರಲ್ಲೇ ಶುರುವಾಯಿತು ನೋಡಿ ಮತ್ತೊಂದು ರಗಳೆ. ಸೋನಮ್ ಮಾತನಾಡುತ್ತಾ, ಐಶ್ವರನ್ನು ನಾನು ಆಂಟಿ ಎಂದು ಕರೆಯುತ್ತಿರುತ್ತೇನೆ. ಯಾಕೆಂದರೆ ಆಕೆ ನನ್ನ ಡ್ಯಾಡಿಯೊಂದಿಗೆ ನಟಿಸಿದ್ದಾರೆ. ಆಗ ನಾನು ಇನ್ನೂ ಚಿಕ್ಕ ಹುಡುಗಿ. ಆಗಿನಿಂದಲೂ ನಾನು ಐಶ್ವರ್ಯ ಆಂಟಿ ಎಂದು ಕರೆಯುತ್ತಿದ್ದೇನೆ ಎಂದು ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ ಸೋನಮ್. ಒಟ್ಟಿನಲ್ಲಿ ಐಶ್ವರ್ಯ ರೈ ಈಗ ಸೋನಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada