»   »  ಬಿಗ್ ಎಫ್ ಎಂ ಗೆ ಸನ್ನಿ ಲೀಗಲ್ ನೋಟೀಸ್

ಬಿಗ್ ಎಫ್ ಎಂ ಗೆ ಸನ್ನಿ ಲೀಗಲ್ ನೋಟೀಸ್

Subscribe to Filmibeat Kannada

ಅನಿಲ್ ಅಂಬಾನಿ ಒಡೆತನದ ಬಿಗ್ ಎಫ್ ಎಂ (ಮುಂಬೈ) ಆವಾಂತರ ಮಾಡಿಕೊಂಡು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. 'ಸನ್ ಸನ್ನಿ' ಎನ್ನುವ ಕಾರ್ಯಕ್ರಮದಲ್ಲಿ ಧರ್ಮೇಂದ್ರ ಕುಟುಂಬದವರನ್ನು ಅಪಹಾಸ್ಯ ಮಾಡಿದಕ್ಕಾಗಿ ಬಾಲಿವುಡ್ ನಟ ಸನ್ನಿ ಡಿಯೋಲ್ ಈ ಎಫ್ ಎಂ ಸ್ಟೇಷನ್ ಮೇಲೆ 200 ಕೋಟಿ ರೂಪಾಯಿ (2 ಬಿಲಿಯನ್) ಪರಿಹಾರ ನೀಡಬೇಕೆಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಕಳೆದ ಆರು ತಿಂಗಳಿಂದ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮದಲ್ಲಿ ನನ್ನ ಮತ್ತು ನನ್ನ ತಂದೆಯ ಧ್ವನಿಯಲ್ಲಿ ಮಿಮಿಕ್ರಿ ನಡೆಸಿ ನಮ್ಮ ಕುಟುಂಬದವರನ್ನು ಅಪಹಾಸ್ಯಕ್ಕೀಡಾಗುವಂತೆ ಸಂಭಾಷಣೆ ನಡೆಸುತ್ತಿದ್ದರು. ಇದು ಸದಭಿರುಚಿಯ ಕಾರ್ಯಕ್ರಮವಲ್ಲ. ತುಂಬಾ ನೀಚ ಮಟ್ಟದ ಕಾರ್ಯಕ್ರಮ ಇದಾಗಿದ್ದು ತಕ್ಷಣವೇ ಈ ಕಾರ್ಯಕ್ರಮ ನಿಲ್ಲಿಸುವಂತೆ ಮೊಕದ್ದಮೆಯಲ್ಲಿ ತಿಳಿಸಿದ್ದೇವೆ ಎಂದು ಸನ್ನಿ ಡಿಯೋಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂತಹ ಕಾರ್ಯಕ್ರಮವನ್ನು ಸ್ಟೇಷನ್ ಪ್ರಸಾರ ಮಾಡಬಾರದಾಗಿತ್ತು. ಕಳೆದ ಆರು ತಿಂಗಳಿಂದ ಈ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ನಾನು ಬೇರೆ ಕೆಲಸದ ಮೇಲೆ ತಲ್ಲೀನನಾಗಿದ್ದಿದ್ದರಿಂದ ಇದರ ಬಗ್ಗೆ ಗಮನಹರಿಸಲಾಗಲಿಲ್ಲ ಮತ್ತು ಸ್ವಲ್ಪ ದಿನದ ನಂತರ ಅವರಾಗಿಯೇ ಕಾರ್ಯಕ್ರಮ ಸ್ಥಗಿತಗೊಳಿಸಬಹುದು ಎಂದು ಅಂದು ಕೊಂಡಿದ್ದೆ. ಆದರೆ ಅದಾಗಲಿಲ್ಲ. ಇನ್ನು ಒಂದು ವಾರದೊಳಗೆ ಸ್ಟೇಷನ್ ಸೂಕ್ತ ಹೆಜ್ಜೆ ತೆಗೆದುಕೊಳ್ಳದಿದ್ದರೆ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸನ್ನಿ ಪರ ವಕೀಲರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada