»   » ಸಲ್ಮಾನ್ ಖಾನ್ ಮುಖದಲ್ಲಿ ಮದುಮಗನ ಕಳೆ

ಸಲ್ಮಾನ್ ಖಾನ್ ಮುಖದಲ್ಲಿ ಮದುಮಗನ ಕಳೆ

Subscribe to Filmibeat Kannada

ಶೀಘ್ರದಲ್ಲೇ ಮದುಮಗನಾಗಲಿದ್ದಾನೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್! ವಯಸ್ಸು 44 ಮೀರುತ್ತಿದ್ದರೂ ಇನ್ನೂ ಮದುವೆ ಬಗ್ಗೆ ಸಲ್ಲು ಸೊಲ್ಲೆತ್ತಿಲ್ಲ. ಹಾಗಾಗಿ ಯಾವುದೆ ಸಭೆ, ಸಮಾರಂಭಕ್ಕೆ ಹೋದರೆ ಸಲ್ಲುಗೆ ''ಮದುವೆ ಯಾವಾಗ?'' ಎಂಬ ಪ್ರಶ್ನೆ ತೂರಿಬರುತ್ತಿತ್ತು. ಎಂದಿನಂತೆ ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ ಎಂದು ಸಿದ್ಧ ಉತ್ತರ ನೀಡುತ್ತಿದ್ದ.

ಮೊನ್ನೆ ಸಲ್ಲು ರೋಡ್ ಶೋ ಒಂದರಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ನ ಪಂಕಜ್ ಸಂಗ್ವಿ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಸಲ್ಲು ರಸ್ತೆಗಿಳಿದಿದ್ದರು. ಅಲ್ಲೂ ಮದುವೆ ಯಾವಾಗ? ಎಂಬ ಪ್ರಶ್ನೆಯ ಬಾಣ ಸಲ್ಲುಗೆ ನಾಟಿತು. ಈ ಬಾರಿಯೂ ಉತ್ತರ ಅದೇ ಆಗಿತ್ತಾದರೂ ಹೇಳುವ ಶೈಲಿ ಒಂಚೂರು ಭಿನ್ನವಾಗಿತ್ತು.

ಶೀಘ್ರದಲ್ಲೇ ಮದುವೆಯಾಗಲಿದ್ದೇನೆ ಎಂದು ಹೇಳುವಾಗ ಸಲ್ಲು ಮುಖ ಕೆಂಪಾಗಿದ್ದು ವಿಶೇಷ. ಸದ್ಯಕ್ಕೆ 'ವೀರ್' ಚಿತ್ರದಲ್ಲಿ ಬ್ಯುಸಿಯಾಗಿರುವ ಸಲ್ಲು ಮುಖದಲ್ಲಿ ಮದುಮಗನ ಕಳೆ ರಾರಾಜಿಸುತ್ತಿದೆ. ಕಳೆದ ಐದು ವರ್ಷಗಳಿಂದ ಕತ್ರಿನಾ ಕೈಫ್ ರೊಂದಿಗಿನ ಕಣ್ಣಾ ಮುಚ್ಚಾಲೆಗೆ ತೆರೆ ಬೀಳುವ ಲಕ್ಷಣಗಳು ಕಾಣುತ್ತಿವೆ.

ಬಾಲಿವುಡ್ ನಲ್ಲಿ ಸಲ್ಲು ಬೇಡಿಕೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಕತ್ರಿನಾಗೆ ಮಾತ್ರ ಅವಕಾಶಗಳು ಜೋರಾಗಿವೆ. ಹಾಗಾಗಿ ಮದುವೆ ಈಗಲೇ ಬೇಡ ಎನ್ನುತ್ತಿದ್ದಾರೆ ಕತ್ರಿನಾ. ಇನ್ನು ಹೆಚ್ಚಿನ ದಿನ ಕಾಯುವ ಸ್ಥಿತಿಯಲ್ಲಿ ಸಲ್ಲು ಇಲ್ಲ. ಕಾರಣ ವಯಸ್ಸು ಮೀರುತ್ತಿವುದು ಎನ್ನುತ್ತವೆ ಬಾಲಿವುಡ್ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada