»   » ಕರೀನಾ ಕಪೂರ್ ಸೌಂದರ್ಯ ರಹಸ್ಯ ಶಾಕಾಹಾರ

ಕರೀನಾ ಕಪೂರ್ ಸೌಂದರ್ಯ ರಹಸ್ಯ ಶಾಕಾಹಾರ

Posted By:
Subscribe to Filmibeat Kannada

ಬಾಲಿವುಡ್ ನಟಿ ಕರೀನಾ ಕಪೂರ್ ಮುಡಿಗೆ ಮತ್ತೊಂದು ಗರಿ ಮೂಡಿದೆ. ಪೀಪಲ್ ಮ್ಯಾಗಝಿನ್ ನಡೆಸಿದ ಸಮೀಕ್ಷೆಯಲ್ಲಿ ಕರೀನಾ ಕಪೂರ್ ಭಾರತದ ಅತ್ಯಂತ ಸುಂದರ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಕರೀನಾ ಕಪೂರ್ ಸೌಂದರ್ಯ ರಹಸ್ಯ ಅಡಗಿರುವುದು ಲಕ್ಸ್ ಸೋಫಿನಲ್ಲಿ ಅಲ್ಲ ಎಂಬ ವಿಚಾರವೂ ಬಹಿರಂಗವಾಗಿದೆ.

ನಿಯಮಿತವಾದ ಯೋಗಾಭ್ಯಾಸ ಹಾಗೂ ಮಾಂಸಾಹಾರದಿಂದ ದೂರವಿರುವುದೇ ನನ್ನ ಸೌಂದರ್ಯ ರಹಸ್ಯ ಎಂದು ಕರೀನಾ ಪ್ರತಿಕ್ರಿಯಿಸಿದ್ದಾರೆ. ಕರೀನಾ ಸಣ್ಣಪುಟ್ಟ ಕಾರಣ ಹೇಳಿ ಚಿತ್ರೀಕರಣಕ್ಕೆ ಚಕ್ಕರ್ ಹೊಡೆದದ್ದು ತೀರಾ ಕಡಿಮೆ. ಆಹಾರ ವಿಚಾರದಲ್ಲಿ ಕರೀನಾ ಬಹಳ ಕಟ್ಟುನಿಟ್ಟಂತೆ, ಹಾಗಾಗಿ ಆಕೆಯ ದೇಹ ಕೂಡ ಸಪೂರವಾಗಿದ್ದು ಕೊಬ್ಬಿನಂಶ ಕಡಿಮೆ ಎಂದೇ ಹೇಳಬೇಕು.

ಕೇವಲ ಸೌಂದರ್ಯವಷ್ಟೆ ಅಲ್ಲ ಆಕೆ ಅಭಿನಯದ ಬಹುತೇಕ ಚಿತ್ರಗಳು ಬಾಕ್ಸಾಫೀಸಲ್ಲಿ ಗೆದ್ದಿವೆ. 'ಕಂಬಕ್ತ್ ಇಷ್ಕ್' ಹಾಗೂ 'ಕುರ್ಬಾನ್' ಚಿತ್ರಗಳು ನೆಲಕಚ್ಚಿದವಾದರೂ ಚಿತ್ರಗಳ ಗುಣಮಟ್ಟ ಬಗ್ಗೆ ಎರಡು ಮಾತಿಲ್ಲ. ಸದ್ಯಕ್ಕೆ ಕರಣ್ ಜೋಹರ್ ಜೊತೆ ಹಾಲಿವುಡ್ ನ 'ಸ್ಟೆಪ್ ಮಮ್' ಚಿತ್ರದ ರೀಮೇಕ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರ 'ಲಜ್ಜೋ' ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಕರೀನಾ ನಟಿಸಲಿದ್ದಾರೆ. ನಿಯಮಿತ ವ್ಯಾಯಾಮದ ಜೊತೆಗೆ ಮನಸ್ಸು ಪ್ರಶಾಂತವಾಗಿ ಇಟ್ಟುಕೊಳ್ಳುತ್ತೇನೆ ಎನ್ನುತ್ತಾರೆ ಕರೀನಾ. ಒಟ್ಟಿನಲ್ಲಿ ಕರೀನಾ ವಿಚಾರ ಕೇಳಿ ಸೈಫ್ ಆಲಿ ಖಾನ್ ಇನ್ನಷ್ಟು ನಾಚಿಕೊಂಡಿದ್ದಾನಂತೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada