For Quick Alerts
  ALLOW NOTIFICATIONS  
  For Daily Alerts

  ಪೂನಂ ಪಾಂಡೆ ಅರೆಪೋಲಿ ನಟಿ : ರೋಜ್ಲಿನ್ ಖಾನ್

  By * ನಬನಿತಾ ಮಾಜಿ
  |
  <ul id="pagination-digg"><li class="next"><a href="/bollywood/09-poonam-pandey-can-do-anything-for-money-rozlyn-aid0038.html">Next »</a></li></ul>

  ಸನ್ನಿವೇಶಕ್ಕೆ ತಕ್ಕಂತೆ ಅಗತ್ಯವಿದ್ದರೆ ಬಟ್ಟೆ ಬಿಚ್ಚಲು ನಾನು ರೆಡಿ, ಅದರಲ್ಲಿ ತಪ್ಪೇನಿದೆ ಅಂತ ಅನ್ನುವ ನಟನಾಮಣಿಗಳು ಬಾಲಿವುಡ್‌ನಲ್ಲಿ ಸಾಲುಸಾಲು ಸಿಗುತ್ತಾರೆ. ಆದರೆ, ಯಾವುದೇ ಪ್ರಚಾರಕ್ಕೆ ಹಪಹಪಿಸದೆ, ಸಾಮಾಜಿಕ ಕಳಕಳಿಯಿಂದ ಉಡುಗೆ ಕಳಚುವವರು ಸಿಗುವುದು ತುಂಬಾ ವಿರಳ. ಅಂತಹ ವಿರಳಾತಿ ವಿರಳ ನಟಿಯರಲ್ಲಿ ಒಬ್ಬರಾಗಿರುವ ರೂಪದರ್ಶಿ ರೋಜ್ಲಿನ್ ಖಾನ್ ಅವರು ಬೆತ್ತಲಾಗುವುದರ ಕುರಿತು ತಮ್ಮ ಅನಿಸಿಕೆಗಳನ್ನು ಒನ್ಇಂಡಿಯಾದ ನಬನಿತಾ ಮಾಜಿ ಜೊತೆ ಹಂಚಿಕೊಂಡಿದ್ದಾರೆ. ಸಂದರ್ಶನದ ಸಂಕ್ಷಿಪ್ತ ವಿವರಗಳು ಇಲ್ಲಿವೆ.

  ಪ್ರ : ಐಶ್ವರ್ಯ ರೈ ಅವರಿಗೆ ಅರ್ಪಿಸಿದ ವಿಡಿಯೋಗಾಗಿ ನೀವು 10 ಲಕ್ಷ ರು. ವ್ಯಯಸಿದ್ದಿರಿ. ಇದು ಪ್ರೀತಿಗಾಗಿಯೋ, ಪ್ರಚಾರದ ಹುಚ್ಚಿಗಾಗಿಯೋ?
  ಉ : ಇದು ಬರೀ ಪ್ರಚಾರಕ್ಕಾಗಿ ವಿಡಿಯೋ ಮಾಡಿದ್ದರೆ ಅದನ್ನು ಇಷ್ಟೊತ್ತಿಗೆ ಬಿಡುಗಡೆ ಮಾಡುತ್ತಿದ್ದೆ. ವಿಡಿಯೋವನ್ನು ವಾಣಿಜ್ಯ ಲಾಭಕ್ಕಾಗಿ ಮಾಡಲಿಲ್ಲವಾದ್ದರಿಂದ ಪ್ರಸಾರ ಮಾಡಲಿಲ್ಲ. ಐಶ್ವರ್ಯಳ ದೊಡ್ಡ ಅಭಿಮಾನಿಯಾಗಿದ್ದರಿಂದ ಅವರಿಗೆ ಅರ್ಪಿಸಿದೆ.

  ಪ್ರ : ನಿಮ್ಮ ಮುಂಬರುವ ಚಿತ್ರ ಧಮಾಲ್ ಚೌಕ್ಡಿ ಬಗ್ಗೆ ಹೇಳಿರಿ.
  ಉ : ಅದು ಹಾಸ್ಯ ಚಿತ್ರ. ಒಬ್ಬ ಸುಂದರ ನಟಿಯಿಂದ ಕಾಮಿಡಿ ಮಾಡಲು ಸಾಧ್ಯವಿಲ್ಲ ಎಂದು ಜನರು ತಿಳಿದಿರುತ್ತಾರೆ. ಆದರೆ, ಇದರ ಪ್ರತಿ ದೃಶ್ಯದಲ್ಲಿ ಹಾಸ್ಯದ ಲೇಪವಿದೆ. ಚಿತ್ರ ಸಂಪೂರ್ಣವಾಗಿದ್ದು ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

  ಪ್ರ : ಬಾಲಿವುಡ್‌ನಲ್ಲಿ ಬಟ್ಟೆ ಕಳಚುವುದು ಅತ್ಯಂತ ಸುಲಭವಾದ ಕೆಲಸವಾಗಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು?
  ಉ : ಬಾಲಿವುಡ್‌ನಲ್ಲಿ ಪಾತ್ರ ಗಿಟ್ಟಿಸಲು ನಾನು ಬೆತ್ತಲೆಯಾಗಲಿಲ್ಲ. ನಗ್ನವಾಗಲು ನನಗೆ ಕಾರಣವಿತ್ತು. ಪ್ರಚಾರ ಗಿಟ್ಟಿಸಲು ಬಟ್ಟೆ ಬಿಚ್ಚಲು ಸಿದ್ಧರಾಗುವ ಅನೇಕ ಹುಡುಗಿಯರಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿರುವ ನಾನು ಸಮಾಜದ ಗಮನ ಸೆಳೆಯಲೆಂದು ನಗ್ನಳಾದೆ. ಆದರೆ, ಪಾತ್ರರ ಗಿಟ್ಟಿಸುವ ಆಸೆಯಿಂದಲ್ಲ.

  ಪ್ರ : 'ಉದಾತ್ತ ಉದ್ದೇಶಕ್ಕಾಗಿ ನಗ್ನತೆ, ವಾಂಛೆಗಲ್ಲ' ನಿಮ್ಮ ಈ ಹೇಳಿಕೆ ಸಮರ್ಥಿಸಿಕೊಳ್ಳಿ.
  ಉ : ನಿಜ, ನಗ್ನಳಾಗುವುದರ ಹಿಂದೆ ಉದಾತ್ತ ಧ್ಯೇಯವಿದೆ. ಬೆತ್ತಲಾದ ವಿಡಿಯೋ ಅತ್ಯಂತ ನೀಟಾಗಿದೆ ಮತ್ತು ಪರಿಶುದ್ಧತೆಯಿಂದ ಕೂಡಿದೆ. ಆ ದೃಶ್ಯದಲ್ಲಿ ಬರೀ ಒಂದು ಶರ್ಟನ್ನು ಧರಿಸಿದ್ದು, ಸ್ತನ ಕ್ಯಾನ್ಸರ್ ಬಗ್ಗೆ ತಿಳಿವಳಿಕೆ ಇಲ್ಲದ ಹಿಂದುಳಿದ ವರ್ಗದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದೆ. ಕ್ರಿಕೆಟಿಗರನ್ನು ಉತ್ತೇಜಿಸುವ ಉದ್ದೇಶದಿಂದ ನಗ್ನಳಾಗುವ ನಟಿಯರಿಗಿಂತ ಭಿನ್ನವಾದ ಉದಾತ್ತ ಕಳಕಳಿ ಅಲ್ಲಿದೆ. ರೋಗಕ್ಕೆ ಬಲಿಯಾಗುತ್ತಿರುವ ಮಹಿಳೆಯರನ್ನು ಸರಕಾರ ರಕ್ಷಿಸಿದರೆ ನಾನು ಯಾವತ್ತಿಗೂ ಋಣಿಯಾಗಿರುತ್ತೇನೆ.

  <ul id="pagination-digg"><li class="next"><a href="/bollywood/09-poonam-pandey-can-do-anything-for-money-rozlyn-aid0038.html">Next »</a></li></ul>
  English summary
  Unlike other models, she is someone who dared to bare it all for a good cause. Model Rozlyn Khan is one such best example who doesn't mind stripping for saving a life. During a candid chat with Nabanita Maji from OneIndia, Rozlyn revealed her motive behind her stripping acts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X