»   »  ನಯನ ತಾರಾ ಸೊಂಟದ ವಿಷಯ ಬೇಡವೊ ಶಿಷ್ಯ!

ನಯನ ತಾರಾ ಸೊಂಟದ ವಿಷಯ ಬೇಡವೊ ಶಿಷ್ಯ!

Posted By: Staff
Subscribe to Filmibeat Kannada
Nayantara still going strong
ಸೊಂಟದ ವಿಷಯದಲ್ಲಿ ಬಾಲಿವುಡ್ ಬೆಡಗಿಯರನ್ನು ಮೀರಿಸಲು ನಯನ ತಾರಾ ಟೊಂಕ ಕಟ್ಟಿ ನಿಂತಿದ್ದಾರೆ. ತಮ್ಮ ದಢೂತಿ ದೇಹವನ್ನು ಕೊಂಚ ಹಗುರ ಮಾಡಿಕೊಂಡಿರುವ ಆಕೆ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ.

ಇಷ್ಟು ಬೇಗ ನಿಮ್ಮ ಸೊಂಟದ ಬದಲಾವಣೆಗೆ ಕಾರಣ ಏನು? ಎಂದು ಕೇಳುವ ಪತ್ರಕರ್ತರಿಗೆ ಆಕೆ ನಗುವಿನಲ್ಲೇ ಉತ್ತರ ಹೇಳಿ ನಂತರ, ಮೈಭಾರ ಇಳಿಸಿಕೊಂಡಿದ್ದು ಹೇಗೆ ಎಂಬ ವಿವರಗಳನ್ನು ನೀಡುತ್ತಿದ್ದಾರೆ. ನಾನು ತೂಕ ಇಳಿಸಿಕೊಂಡಿರುವುದು ನಿಜ. ಆದರೆ ಇದು ಇಂದಿನ ಪ್ರಯತ್ನವಲ್ಲ. 'ಚಂದ್ರಮುಖಿ' ಚಿತ್ರೀಕರಣದಿಂದಲೇ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅದು ಈಗ ನೆರವೇರಿದೆ ಎನ್ನುತ್ತಾರೆ.

ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು. ಒಂದು ವೇಳೆ ನಾನು ಹೀಗೆ ಸ್ಲಿಮ್ ಆಗದಿದ್ದರೆ ಇಷ್ಟೆಲ್ಲಾ ಅವಕಾಶಗಳು ಹುಡುಕಿಕೊಂಡು ಬರುತ್ತಿರಲಿಲ್ಲ. ನನ್ನ ಸಿನಿಮಾಗಳೆಲ್ಲಾ ಬೇರೆಯವರ ಖಾತೆಗೆ ಜಮೆಯಾಗುತ್ತಿದ್ದವು. ನಿಜ ಹೇಳಬೇಕೆಂದರೆ ಒಂದಷ್ಟು ದಿನ ಚಿತ್ರರಂಗದಲ್ಲೇ ಉಳಿಯಬೇಕು ಎಂದು ತೂಕ ಇಳಿಸಿಕೊಳ್ಳುವ ಸಾಹಸಕ್ಕೆ ಕೈಹಾಕಿದೆ ಎನ್ನುತ್ತಾರೆ ನಯನ ತಾರಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada