»   »  ಸೈಫ್, ಕರೀನಾ ಮದುವೆಗೆ ಗ್ರೀನ್ ಸಿಗ್ನಲ್!

ಸೈಫ್, ಕರೀನಾ ಮದುವೆಗೆ ಗ್ರೀನ್ ಸಿಗ್ನಲ್!

Subscribe to Filmibeat Kannada

ಬಾಲಿವುಡ್ ಚೋಟೆ ನವಾಬ್ ಮತ್ತು ಕರೀನಾ ಕಪೂರ್ ತಮ್ಮಿಬ್ಬ್ಬರ ಮದುವೆ ಬಗ್ಗೆ ಎಲ್ಲೂ ತುಟಿ ಬಿಚ್ಚುತ್ತಿಲ್ಲ. ಆದರೆ ಸೈಫ್ ರ ತಾಯಿ ಶರ್ಮಿಳಾ ಠಾಗೋರ್ ಗೆ ಮಾತ್ರ ಈ ವಿಚಾರದಲ್ಲಿ ಕೊಂಚ ಧಾವಂತ. ಆದಷ್ಟು ಬೇಗ ಇವರಿಬ್ಬರ ಮದುವೆ ಮಾಡಿ ಮುಗಿಸಬೇಕು ಎಂಬುದು ಶರ್ಮಿಳಾ ಠಾಗೋರ್ ರ ಎಣಿಕೆ.

ಕರೀನಾ ಮದುವೆ ವಿಚಾರವಾಗಿ ಸೈಫ್ ಇದುವರೆಗೂ ನನ್ನ ಬಳಿ ಬಾಯ್ಬಿಟ್ಟಿಲ್ಲ. ಆದರೆ ನಾವಿಬ್ಬರೂ (ಮನ್ಸೂರ್ ಅಲಿಖಾನ್ ಪಟೌಡಿ ಮತ್ತು ಶರ್ಮಿಳಾ) ಸೈಫ್ ಮದುವೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಆಲೋಚಿಸಿ ಶೀಘ್ರ ನಿರ್ಧಾರಕ್ಕೆ ಬರುವಂತೆ ಅವರಿಬ್ಬರಿಗೂ ಕೊಂಚ ಕಾಲಾವಕಾಶ ಕೊಡುತ್ತೇವೆ ಎನ್ನುತ್ತಾರೆ ಶರ್ಮಿಳಾ.

ಸೈಫ್ ಮತ್ತು ಕರೀನಾ ತಮ್ಮ ಹಳೆಯ ಸಂಬಂಧಗಳಿಂದ ಹೊರಬಂದಿದ್ದಾರೆ. ಅವರಿಬ್ಬರೂ ತಮ್ಮ ಮದುವೆ ಪ್ರಸ್ತಾವನೆಯನ್ನು ಯಾವಾಗ ತಿಳಿಸುತ್ತಾರೆ ಎಂದು ಕಾತುರದಿಂದ ಎದುರು ನೋಡುತ್ತಿದ್ದೇವೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದಾರೆ. ದೇವರ ದಯೆಯಿಂದ ಇವರಿಬ್ಬರ ಮದುವೆ ನೆರವೇರುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪೋಷಕರಾದ ನಾವು ಅವರಿಬ್ಬರೂ ಆದಷ್ಟು ಬೇಗ ದಾಂಪತ್ಯ ಜೀವನಕ್ಕೆ ಅಡಿಯಿಡಲಿ ಎಂದು ಆಶಿಸುತ್ತಿದ್ದೇವೆ. ಈ ಸಂಬಂಧ ಈಗಾಗಲೇ ಕರೀನಾ ಕುಟುಂಬದವರನ್ನು ಪಟೌಡಿ ಮಾತನಾಡಿದ್ದಾರೆ. ಅವರಿಬ್ಬರ ಸಂಬಂಧದ ಬಗ್ಗೆಯಾಗಲಿ, ಮದುವೆ ಬಗ್ಗೆಯಾಗಲಿ ನಮ್ಮದೇನು ಅಭ್ಯಂತರ ಇಲ್ಲ ಎಂಬ ಉತ್ತರವೂ ಕಪೂರ್ ಕುಟುಂಬದಿಂದ ಬಂದಿದೆ ಎನ್ನುತ್ತಾರೆ ಸೈಫ್ ರ ತಾಯಿ.

ಒಟ್ಟಿನಲ್ಲಿ ಸೈಫ್ ಮತ್ತು ಕರೀನಾ ಮದುವೆಗೆ ಗ್ರೀ ನ್ ಸಿಗ್ನಲ್ ಬಿದ್ದಿದೆ. ಶರ್ಮಿಳಾ ಠಾಗೂರ್ ಈಗಾಗಲೇಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಏನೇನು ಅಡುಗೆ ಮಾಡಿಸಬೇಕೆಂಬ ಕೆಲಸದಲ್ಲಿ ನಿರತರಾಗಿದ್ದಾರೆ ಎನ್ನುತ್ತಾರೆ ಸೋಹಾ ಅಲಿಖಾನ್. ಇದಕ್ಕೆ ಶರ್ಮಿಳಾ ಸಹ ಧ್ವನಿಗೂಡಿಸಿದ್ದು, ನಮ್ಮ ಕುಟುಂಬದಲ್ಲಿ ಸೋಹಾ ಹೇಳಿದ್ದೇ ಅಂತಿಮ ಎಂದಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada