»   » ಅಮಿತಾಬ್‌ಗೆ ಮತ್ತೆ ಹೆಲ್ತ್ ಪ್ರಾಬ್ಲಂ, ಏನಾಯ್ತು ಶಿವ?

ಅಮಿತಾಬ್‌ಗೆ ಮತ್ತೆ ಹೆಲ್ತ್ ಪ್ರಾಬ್ಲಂ, ಏನಾಯ್ತು ಶಿವ?

Posted By:
Subscribe to Filmibeat Kannada

ಬಿಗ್ ಬಿ ಅಮಿತಾಬ್ ಬಚ್ಚನ್‌ ಉದರ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ ಉದ್ಘಾಟನಾ ಸಮಾರಂಭ ಸೇರಿದಂತೆ ಕೆಲವು ಸಭೆ, ಸಮಾರಂಭಗಳಲ್ಲೂ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಇದೀಗ ಅವರ ಆರೋಗ್ಯ ಮತ್ತೆ ಕೈಕೊಟ್ಟಿದೆ. ಕಳೆದ ಕೆಲವು ದಿನಗಳಿಂದ ಮತ್ತೆ ಅತೀವ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ ಎಂದಿದ್ದಾರೆ ಅಮಿತಾಬ್.

ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಾಗಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಲು ಅಮಿತಾಬ್ ಮುಂದಾಗಿದ್ದಾರೆ. "ಕಳೆದ ರಾತ್ರಿ ಡೆಸ್ಕ್‌ ಬಿಟ್ಟು ಮೇಲೆದ್ದು ಮಲಗಲು ಹೋದಾಗ ಅಸಾಧ್ಯ ಹೊಟ್ಟೆನೋವು ಕಾಣಿಸಿಕೊಂಡಿತು. ನಡೆಯಲು, ಕುಳಿತುಕೊಳ್ಳಲು, ಮಲಗಲು ಸಾಧ್ಯವಾಗುತ್ತಿಲ್ಲ" ಎಂದು ಅಮಿತಾಬ್ ತಡರಾತ್ರಿಯಲ್ಲಿ ಟ್ವೀಟಿಸಿದ್ದಾರೆ.

ತೀವ್ರ ನೋವನ್ನು ತಡೆಯಲಾಗದೆ ಅವರು ನೋವು ನಿವಾರಕ ಔಷಧಿಗಳಿಗೆ ಮೊರೆಹೋಗಿದ್ದಾಗಿ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯಾಗಿ ಎರಡು ತಿಂಗಳ ಬಳಿಕ ಮತ್ತೆ ಹೊಟ್ಟೆನೋವು ಯಾಕೆ ಬಂತಪ್ಪಾ ಎಂದು ಅವರು ಸ್ವಲ್ಪ ಕಂಗಾಲಾಗಿದ್ದಾರೆ. ಬಹುಶಃ ಮಂಗಳವಾರ (ಏ.10) ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ ಗೊತ್ತಾಗಬಹುದು ಎಂದಿದ್ದಾರೆ. (ಏಜೆನ್ಸೀಸ್)

English summary
Big B Amitabh Bachchan's health suddenly upset again. Big B is likely to undergone a CT scan at the Seven Hills Hospital on Tuesday (April 10th) where he had been operated in February this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada